ಕನ್ನಡ ವಾರ್ತೆಗಳು

ಉಡುಪಿಯಲ್ಲಿ ವಿಧಾಪರಿಷತ್ ಚುನಾವಣೆ ಬಿರುಸು; ಕಾಂಗ್ರೆಸ್ v/s ಪಕ್ಷೇತರ- ಮುಂದುವರಿದ ಠೀಕಾಪ್ರಹಾರ (Updated)

Pinterest LinkedIn Tumblr

ಉಡುಪಿ: ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ದ.ಕ. ಸ್ಥಳೀಯ ಪ್ರಾಧಿಕಾರ ಚುನಾವಣಾ ಕೇತ್ರದ 2 ಸ್ಥಾನಗಳಿಗೆ ಭಾನುವಾರ ಬೆಳಿಗ್ಗೆನಿಂದ ಮತದಾನ ಆರಂಭಗೊಂಡಿದೆ. 8 ಅಭ್ಯರ್ಥಿಗಳು ಕಣದಲ್ಲಿದ್ದು, 410 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು 6,568 ಮತದಾರರು ಮತ ಚಲಾಯಿಸಲಿದ್ದಾರೆ.

ಯಾರೆಲ್ಲಾ ಅಭ್ಯರ್ಥಿಗಳು: ಕಾಂಗ್ರೆಸ್‌ನಿಂದ ಕೆ. ಪ್ರತಾಪ್‌ಚಂದ್ರ ಶೆಟ್ಟಿ, ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಜನತಾ ದಳದಿಂದ ಎಸ್‌. ಪ್ರಕಾಶ್‌ ಶೆಟ್ಟಿ, ಪ್ರವೀಣ್‌ಚಂದ್ರ ಜೈನ್‌, ಸ್ವತಂತ್ರ ಅಭ್ಯರ್ಥಿಗಳಾಗಿ ಕೆ. ಜಯಪ್ರಕಾಶ್‌ ಹೆಗ್ಡೆ, ಕೆ. ಹರಿಕೃಷ್ಣ ಬಂಟ್ವಾಳ, ಆಲೊನ್ಸ್‌ ಫ್ರಾಂಕೋ, ಇಸ್ಮಾಯಿಲ್‌ ದೊಡ್ಡಮನೆ ಕಣದಲ್ಲಿದ್ದಾರೆ.

MLC_Election_Udp

vlcsnap-2015-12-27-11h33m41s250

MLC_Election_Udp-2015 (2) MLC_Election_Udp-2015 (4) MLC_Election_Udp-2015 (5)

MLC_Election_Udp-2015 (10)

MLC_Election_Udp-2015 (18) MLC_Election_Udp-2015 (13)

MLC_Election_Udp-2015 (3)

MLC_Election_Udp-2015 (14) MLC_Election_Udp-2015 (15) MLC_Election_Udp-2015 (16) MLC_Election_Udp-2015 (17) MLC_Election_Udp-2015 (8) MLC_Election_Udp-2015 (11) MLC_Election_Udp-2015 (12) MLC_Election_Udp-2015 (7) MLC_Election_Udp-2015 (6)  MLC_Election_Udp-2015 (20) MLC_Election_Udp-2015 (24) MLC_Election_Udp-2015 (21) MLC_Election_Udp-2015 (22) MLC_Election_Udp-2015 (23)

6,568 ಮತದಾರರು
ಗ್ರಾ.ಪಂ., ತಾ.ಪಂ., ಜಿ.ಪಂ. ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರು, ಲೋಕಸಭಾ / ರಾಜ್ಯಸಭಾ ಸದಸ್ಯರು ಹಾಗೂ ವಿಧಾನಸಭಾ ಮತ್ತು ವಿಧಾನಪರಿಷತ್‌ ಸದಸ್ಯರು ಮತದಾರರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ 1,019, ಉಡುಪಿ ತಾಲೂಕಿನಲ್ಲಿ 1,156, ಕಾರ್ಕಳ ತಾಲೂಕಿನಲ್ಲಿ 539 ಮತದಾರರಿದ್ದಾರೆ. ಡಿ. 30ರಂದು ಲೇಡಿಹಿಲ್‌ನ ವಿಕ್ಟೋರಿಯಾ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ.

ಪ್ರಮುಖರ ಮತದಾನ:
ಉಡುಪಿಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮದ್ವರಾಜ್ ಮತ ಚಲಾಯಿಸಿದರೇ ಬಿಜೆಪಿ ಎಂ.ಎಲ್.ಸಿ. ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲಿ ಬೆಳಿಗ್ಗೆ ಮತದಾನ ಮಾಡಿದರು. ಕುಂದಾಪುರ ತಾಲೂಕು ಪಂಚಾಯತ್ ನಲ್ಲಿ ಕಾಂಗ್ರೆಸ್ ಎಂ.ಎಲ್.ಸಿ. ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಮತಚಲಾಯಿಸಿದರು. ಬೈಂದೂರು ಶಾಸಕ ಕೆ. ಗೋಪಾಲ್ ಪೂಜಾರಿ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕೂಡ ಅಲ್ಲಿಯೇ ಪ್ರಥಮ ಮತಚಲಾಯಿಸಿದರು. ಕುಂದಾಪುರಕ್ಕೆ ಆಗಮಿಸಿದ ಆಸ್ಕರ್ ಫೆರ್ನಾಂಡಿಸ್ ಹಾಗೂ ಕೆ. ಗೋಪಾಲ್ ಪೂಜಾರಿ ಅವರು ಕಾಂಗ್ರೆಸ್ ಅಭರ್ಥಿ ಪ್ರತಾಪಚಂದ್ರ ಶೆಟ್ಟಿಯವರನ್ನು ಬರಮಾಡಿಕೊಂಡು ಶುಭಾಶಯವನು ಕೋರಿದರು. ಇದಾದ ಬಳಿಕ ಬಿಜೆಪಿ ಅಬ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಕಾಂಗ್ರೆಸ್ ಶಾಸಕ ಗೋಪಾಲ ಪೂಜಾರಿ ಮುಖಾಮುಖಿಯಾಗಿ ಕೆಲಕಾಲ ಉಭಯಕುಶಲೋಪರಿ ಮಾತನಾಡಿದರು.

ಮುಂದುವರಿದ ಕಾಂಗ್ರೆಸ್ v/s ಬಂಡಾಯ ಠೀಕಾ ಪ್ರಹಾರ
ಚುನಾವಣಾ ದಿನಾಂಕದವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಹಿನ್ನೆಲೆಯಲ್ಲಿ ಟೀಕೆ ಹೇಳಿಕೆ-ಪ್ರತಿ ಹೇಳಿಕೆಗಳು ಕೇಳಿಬರುತ್ತಿದ್ದವು. ಇದಲ್ಲದೇ ಚುನಾವಣೆ ದಿನವೂ ಕಾಂಗ್ರೆಸ್ ಮುಖಂಡರು ಬಂಡಾಯವೆದ್ದ ಸ್ವತಂತ್ರ ಅಭ್ಯರ್ಥಿಗಳ ವಿರುದ್ಧ ತಮ್ಮ ಟೀಕೆ ಮಾಡಿದ್ದಲ್ಲದೇ ಕೇಳಿಬರುತ್ತಿರುವ ಆರೋಪಕ್ಕೆ ಟಾಂಗ್ ನೀಡುವ ಮೂಲಕ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಕಾಂಗ್ರೆಸ್‌ನೊಳಗೆ ಬಂಡಾಯದ ಅಲೆ ಎದ್ದಿರುವ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಹಜವಾಗಿಯೇ ಕುತೂಹಲ ನಿರ್ಮಾಣವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪ್‌ಚಂದ್ರ ಶೆಟ್ಟಿ, ಬಂಡಾಯ ಅಭ್ಯರ್ಥಿಗಳಾದ ಜಯಪ್ರಕಾಶ್‌ ಹೆಗ್ಡೆ ಹಾಗೂ ಹರಿಕೃಷ್ಣ ಬಂಟ್ವಾಳ ಅವರ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರುದ್ಧ ಹೇಳಿಕೆಗಳು ಹಲವು ದಿನಗಳಿಂದ ಬರುತ್ತಿದೆ.

MLC_Election_Udp-2015 (27)

MLC_Election_Udp-2015 (1)

MLC_Election_Udp-2015 (26) MLC_Election_Udp-2015 (19)

ಹಣ ಹಂಚುವ ಅಗತ್ಯ ಕಾಂಗ್ರೆಸ್ ಪಕ್ಷಕ್ಕಿಲ್ಲ: ಆಸ್ಕರ್
ನಮಗೆ ಜಯಸಾಧಿಸಲು ಅಗತ್ಯವಿರುವ ಮತಕ್ಕಿಂತ ಜಾಸ್ಥಿ ಮತ ನಮ್ಮ ಬಳಿಯಿದೆ, ಹಣ ಕೊಟ್ಟು ಓಟು ಖರೀಧಿಸುವ ಅಗತ್ಯ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಆಸ್ಕರ್ ಹೇಳಿದ್ದಾರೆ. ಕುಂದಾಪುರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಹೇಳಿಕೆ ನೀಡಿದ್ದು ಕಾಂಗ್ರೆಸ್ ಗೆಲುವು ಖಚಿತವೆಂದು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿರುದ್ಧ ಬಂಡಯಗಾರರದ್ದು ಹತಾಷೆಯ ಹೇಳಿಕೆ: ಗೋಪಾಲ್ ಪೂಜಾರಿ
ಕಾಂಗ್ರೆಸ್ ಪಕ್ಷದ ಎಲ್ಲಾ ಮತಗಳು ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿಯವರಿಗೆ ನೀಡಿ ನೂರಕ್ಕೆ ನೂರು ಮತದಾನ ನಡೆಯಲಿದೆ. ನಮ್ಮ ಅಭ್ಯರ್ಥಿ ಪ್ರಥಮ ಪ್ರಾಶಸ್ತ್ಯದ ಮತದಲ್ಲಿಯೇ ಪ್ರಚಂಡ ಗೆಲುವು ಸಾಧಿಸಲಿದ್ದಾರೆ. ಸೋಲಿನ ಭಯದಲ್ಲಿರುವ ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ ಒಗ್ಗಟ್ಟನ್ನು ಕಂಡು ಹೆದರಿದ್ದಾರೆ, ಅವರ ಹತಾಷೆ ಭಾವನೆಯಿಂದ ಠೀಕೆಗಳನ್ನು ಮಾಡುತ್ತಿದ್ದು, ಹಣ ಹಂಚಿದ ಬಗ್ಗೆ ಅವರ ಬಳಿ ದಾಖಲೇ ಇರುವುದಾದರೇ ನಮ್ಮ ಬಳಿಯೂ ಬೇಕಾದ ದಾಖಲೆಗಳಿದೆ ಎಂದು ಕುಂದಾಪುರದಲ್ಲು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.

ನಮ್ಮದು ತೆರದ ಪುಸ್ತಕ: ಪ್ರತಾಪಚಂದ್ರ ಶೆಟ್ಟಿ
ಆರೋಪಗಳು ಮಾಡಲಿ, ನನ್ನದು ತೆರೆದ ಪುಸ್ತಕ.ಬೇಕಾದರೇ ವಿಮರ್ಷಗೆ ಒಳಪಡಿಸಬಹುದು, ಮೂವತ್ತು ವರ್ಷಗಳಿಂದಲೂ ನನ್ನದು ಒಂದೇ ಅಕೌಂಟ್ ಬುಕ್ ಎಂದು ಕಾಂಗ್ರೆಸ್ ಎಂ.ಎಲ್.ಸಿ. ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಠೀಕಾಕಾರರಿಗೆ ಟಾಂಗ್ ನೀಡಿದ್ದಾರೆ.

ಬಿಜೆಪಿ ಗೆಲುವು ನಿಶ್ಚಿತ: ಕೋಟ ಶ್ರೀನಿವಾಸ್ ಪೂಜಾರಿ
ಬಿಜೆಪಿ ಪಕ್ಷದ ಪರವಾಗಿ ಪ್ರವಾಸ ಮಾಡುವ ವೇಳೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದು ಕೋಟ ಎಂ.ಎಲ್.ಸಿ. ಅಬ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Write A Comment