ರಾಷ್ಟ್ರೀಯ

ಹೊಸ ವರ್ಷದಿಂದ ವೇಗ ಪಡೆದುಕೊಳ್ಳಲಿರುವ ಗಂಗಾ ಶುದ್ಧೀಕರಣ ಕಾರ್ಯ

Pinterest LinkedIn Tumblr

gangaವಾರಣಾಸಿ, ಡಿ.27-ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ನಮಾಮಿ ಗಂಗೆ ಶುದ್ಧೀ ಕರಣ ಕಾರ್ಯ ಹೊಸವರ್ಷದಿಂದ ವೇಗ ಪಡೆದುಕೊಳ್ಳಲಿದೆ. ಕಳೆದ 12ರಂದು ಜಪಾನ್ ಮತ್ತು ಭಾರತದ ಪ್ರಧಾನಿಗಳು ಭೇಟಿ ನೀಡಿದ್ದ ಬೆನ್ನಲ್ಲೇ ಮಳೆಕೊಯ್ಲು ಯಂತ್ರ ಕಾಶಿನಗರವನ್ನು ತಲುಪಿದ್ದು, ನೀರಿನಲ್ಲಿ ತೇಲುವ ತ್ಯಾಜ್ಯಗಳ ಶುದ್ಧೀಕರಣದಲ್ಲಿ ಕಾರ್ಯನಿರತವಾಗಿದೆ.

ಈ ಯೋಜನೆಯಡಿ 10 ನಗರಗಳ ಸ್ವಚ್ಛತಾ ಕಾರ್ಯವು ನಡೆಯಲಿದೆ. ವಾರಣಾಸಿಯಲ್ಲಿ ಗಂಗಾನದಿಯ ಮೇಲ್ಮೈ ಭಾಗದ ಶುದ್ಧೀಕರಣ ಕಾರ್ಯ ಪ್ರಾರಂಭಗೊಂಡಿದೆ. ಈ ಕಾರ್ಯವನ್ನು ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವೆ ಉಮಾಭಾರತಿ ತಿಳಿಸಿದ್ದಾರೆ.

ಗಂಗಾನದಿಯಲ್ಲಿ ಸೇರಿರುವ ತ್ಯಾಜ್ಯವನ್ನು ಯಂತ್ರಗಳ ಮುಖಾಂತರ ತೆರವುಗೊಳಿಸಲಾಗುತ್ತಿದೆ ಎಂದು ಹೆಚ್ಚುವರಿ ಪುರಸಭೆ ಆಯುಕ್ತರಾದ ಬಿ.ಕೆ.ದ್ವಿವೇದಿ ತಿಳಿಸಿದ್ದಾರೆ. ಮಳೆಕೊಯ್ಲು ಯಂತ್ರ ಒಂದು ನಿಮಿಷಕ್ಕೆ 5ಟ್ರ್ಯಾಲಿ ತ್ಯಾಜ್ಯವನ್ನು ಹೊರ ತೆಗೆಯುವ ಶಕ್ತಿಯನ್ನು ಹೊಂದಿದೆ.

Write A Comment