ಅಂತರಾಷ್ಟ್ರೀಯ

ಫ್ರಾನ್ಸ್‌ನ ವರದಿಗಾರ್ತಿಯನ್ನು ಗಡಿಪಾರು ಮಾಡಿದ ಚೀನಾ

Pinterest LinkedIn Tumblr

fraಬೀಜಿಂಗ್, ಡಿ.27-ಮುಸ್ಲಿಂ ಉಯ್‌ಘೂರ್ ಸಮುದಾಯದವರ ಬಗ್ಗೆ ಸರ್ಕಾರ ಅನುಸರಿಸುತ್ತಿರುವ ನೀತಿಯ ಕುರಿತಂತೆ ಬಹಿರಂಗವಾಗಿಯೇ ಲೇಖನ, ಸುದ್ದಿಗಳನ್ನು ಬರೆದಿದ್ದ ಫ್ರಾನ್ಸ್‌ನ ಪತ್ರಿಕೆಯೊಂದರ ವರದಿಗಾರ್ತಿಯನ್ನು ಚೀನಾ ಗಡಿ ಪಾರು ಮಾಡಿದೆ. ಉರ್ಸುಲ ಗೌಥಿಯರ್ ಎಂಬ ಈ ಪತ್ರಕರ್ತೆ ಫ್ರಾನ್ಸ್ ನಿಯತಕಾಲಿಕೆಯೊಂದರ ವರದಿಗಾರ್ತಿಯಾಗಿದ್ದು, ಚೀನಾ ಮೂಲದವಳೇ ಆಗಿದ್ದಾಳೆ.

ಫ್ರಾನ್ಸ್‌ನ ಎಲ್‌ಓಬ್ಸ್ ಮ್ಯಾಗಸಿನ್‌ನಲ್ಲಿ ವರದಿಗಾರ್ತಿ ಉರ್ಸುಲಾ ಚೀನಾದಲ್ಲಿರುವ ಉಯ್‌ಘೂರ್ ಅಲ್ಪಸಂಖ್ಯಾತರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯನ್ನು ಟೀಕಿಸಿ ಲೇಖನಗಳನ್ನು ಬರೆದಿದ್ದಳು. ಇದರಿಂದ ಸರ್ಕಾರಕ್ಕೆ ಭಾರೀ ಮುಜುಗರವಾಗಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರ ಉರ್ಸುಲಾಳನ್ನು ಚೀನಾದಿಂದ ಹೊರಹಾಕಿದೆ. ಚೀನಾದಲ್ಲೂ ಭಯೋತ್ಪಾದಕತೆ ಇದೆ ಎಂಬ ಈ ಲೇಖನ ಚೀನಾ ಸರ್ಕಾರಕ್ಕೆ ತೀವ್ರ ಅಸಹನೆ ಉಂಟುಮಾಡಿತ್ತು.

Write A Comment