ರಾಷ್ಟ್ರೀಯ

ಫೇಸ್‍ಬುಕ್‍ನಲ್ಲಿ ಪಿಎಫ್ ಖಾತೆ: ಕಾರ್ಮಿಕರು ತಮ್ಮ ಬೇಡಿಕೆ, ಸಮಸ್ಯೆಗಳನ್ನು ದಾಖಲಿಸಬಹುದು

Pinterest LinkedIn Tumblr

PF

ಹೈದರಾಬಾದ್: ಸಾಮಾಜಿಕ ಜಾಲ ತಾಣಗಳಾದ ಫೇಸ್‍ಬುಕ್ ಮತ್ತು ಟ್ವೀಟರ್‍ನಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಶುಕ್ರವಾರ ಖಾತೆ ಆರಂಭಿಸಿದೆ.

ಇಲ್ಲಿ ಆಯೋಜಿಸಿದ್ದ ಉತ್ತಮ ಆಡಳಿತ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ  ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಈ ಖಾತೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ  ಅವರು, ಸಂಸ್ಥೆಯ ಸದಸ್ಯರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು, ಹೊಸ ಐಡಿಯಾಗಳನ್ನು ನೀಡಲು ಈ ಸಾಮಾಜಿಕ ಜಾಲ ತಾಣಗಳು ಮತ್ತೊಂದು ವೇದಿಕೆ ಕಲ್ಪಿಸಿವೆ ಎಂದಿದ್ದಾರೆ.

ಸಂಸ್ಥೆಯ ಸೇವೆ ಕುರಿತಂತೆ ಫಿದಡ್‍ಬ್ಯಾಕ್ ಪಡೆಯಲೂ ಈ ಫೇಸ್‍ಬುಕ್ ಮತ್ತು ಟ್ವೀಟರ್‍ಗಳನ್ನು ಉಪಯೋಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಂಸ್ಥೆಯಲ್ಲಿ ಆರು ಕೋಟಿ ಕಾರ್ಮಿಕರು  ನೋಂದಾಯಿಸಿಕೊಂಡಿದ್ದು ಲಕ್ಷಾಂತರ ಕೋಟಿ ನಿಧಿ ಇದೆ.

Write A Comment