ಕನ್ನಡ ವಾರ್ತೆಗಳು

ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛ ಭಾರತಕ್ಕಾಗಿ 32ನೇ ಸ್ವಚ್ಛ ಮಂಗಳೂರು ಅಭಿಯಾನ

Pinterest LinkedIn Tumblr

Ramkrshn_claing_photo_1

ಮಂಗಳೂರು,ಡಿ.28: ರಾಮಕೃಷ್ಣ ಮಿಷನ್ ನೇತೃತ್ವದ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು 32ನೇ ಸ್ವಚ್ಛತಾ‌ ಅಭಿಯಾನವನ್ನು ಭಾನುವಾರ ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು. ಬೆಳಿಗ್ಗೆ 7.30ಕ್ಕೆ ಸರಿಯಾಗಿ ತಿರುಪತಿ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ‌ ಅನುಪಮಾನಂದಜಿ ಮಹರಾಜ್ ಹಾಗೂ ಮಂಗಳೂರು ಅಂತರಾಷ್ತ್ರಿಯ ವಿಮಾನ ಪ್ರಾಧಿಕಾರದ ಪೂರ್ವ ನಿರ್ದೇಶಕ ಶ್ರೀ ಎಂ ಆರ್ ವಾಸುದೇವ್ ಇವರುಗಳು ಜಂಟಿಯಾಗಿ ಹಸಿರು ನಿಶಾನೆ ತೋರಿ‌ ಅಭಿಯಾನಕ್ಕೆ ಚಾಲನೆ ನೀಡಿದರು.

ಮಂಗಳೂರು ರಾಮಕೃಷ್ಣ ಮಠದ‌ಅಧ್ಯಕ್ಷರಾದ ಸ್ವಾಮಿಜಿತ ಕಾಮಾನಂದಜಿ ಹಾಗೂ ಮಠದ‌ ಇನ್ನಿತರ ಬ್ರಹ್ಮಚಾರಿಗಳು ಸ್ವಚ್ಛತಾ‌ ಅಭಿಯಾನದಲ್ಲಿ ಪಾಲ್ಗೊಂಡರು.

Ramkrshn_claing_photo_2 Ramkrshn_claing_photo_3 Ramkrshn_claing_photo_4 Ramkrshn_claing_photo_5 Ramkrshn_claing_photo_6 Ramkrshn_claing_photo_7 Ramkrshn_claing_photo_8 Ramkrshn_claing_photo_9 Ramkrshn_claing_photo_10 Ramkrshn_claing_photo_11

ಸ್ವಚ್ಛತೆ: ಸ್ವಾಮಿಜಿದ್ವಯರು ಹಾಗೂ ಎಂ ಆರ್ ವಾಸುದೇವ ಲೈಟ್ ಹೌಸ್ ಹಿಲ್‌ರಸ್ತೆಯಲ್ಲಿ ಪೊರಕೆ ಹಿಡಿದು ಕೆಲವು ಭಾಗಗಳನ್ನು ಶುಚಿಗೊಳಿಸಿದರು. ಮೊದಲಿಗೆ 150ಜನ ಸ್ವಯಂಸೇವಕರಿದ್ದ ಗುಂಪುನ್ನು‌ ಆರು ತಂಡಗಳಾಗಿ ವಿಭಾಗಿಸಲಾಯಿತು. ಹಿರಿಯ ಸ್ವಯಂ ಸೇವಕರಾದ ಶ್ರೀ ವಿಠಲದಾಸ ಪ್ರಭು, ಶ್ರೀ ಅನಿರುದ್ಧ ನಾಯಕ, ಶ್ರೀ ರಾಮಕುಮಾರ್ ಬೇಕಲ್, ಶ್ರೀಮತಿ ರತ್ನಾ ಆಳ್ವ, ಶ್ರೀ ಸತ್ಯನಾರಾಯಣ ಕೆ ವಿ ಹಾಗೂ ಕೊಡಂಗೈ ಬಾಲಕೃಷ್ಣ ನಾಯಕ ತಲಾ‌ ಒಂದೊಂದು ಗುಂಪಿನ ನೇತೃತ್ವ ವಹಿಸಿಕೊಂಡಿದ್ದರು. ಹಂಪಣಕಟ್ಟೆ ವೃತ್ತದಿಂದ ಲೈಟ್ ಹೌಸ್‌ರಸ್ತೆಯಲ್ಲಿ‌ ಎರಡು ತಂಡಗಳು, ಜೋಸ್‌ಆಲುಕ್ಕಾಸ್‌ ಎದುರಿನ ವೃತ್ತದಲ್ಲಿ‌ ಒಂಡು ತಂಡ, ಬಲ್ಮಠ ರಸ್ತೆಯಲ್ಲಿ‌ ಎರಡು ತಂಡಗಳು, ಲೈಟ್ ಹೌಸ್‌ರಸ್ತೆಯಿಂದ ಬಾವುಟ್‌ಗುಡ್ಡೆಗೆ ತೆರಳುವ ರಸ್ತೆಯಲ್ಲಿ ‌ಒಂದು ತಂಡ ಕಳುಹಿಸಿ ರಸ್ತೆಯ ಇಕ್ಕೆಲಗಳನ್ನು ಹಸನುಗೊಳಿಸಲಾಯಿತು.

ರಸ್ತೆ ವಿಭಾಜಕಗಳ ಮಧ್ಯೆ ಅನೇಕ ಕಾಲದಿಂದ ಸಂಗ್ರಹವಾಗಿದ್ದಕಸವನ್ನು ವಿಭಾಜಕಗಳನ್ನು ಎತ್ತಿ ಶುಚಿಗೊಳಿಸಲಾಗಿದೆ. ಅಭಿಯಾನದಕಾರ್ಯಕರ್ತರು ಮಾರ್ಗ ದಲ್ಲಿ ಹೋಗುತ್ತಿದ್ದದಾರಿಹೋಕರಿಗೆ ಹಾಗೂ ಅದೇ ಪರಿಸರದಲ್ಲಿರುವ ಮನೆಮನೆಗೆ ತೆರಳಿ ಸ್ವಚ್ಚ ಪರಿಸರಕುರಿತಕರಪತ್ರ ಹಂಚಿಜಾಗೃತಿ ಮಾಡಿದರು.

ವೃತ್ತದ ಶುಚಿತ್ವ :ಲೈಟ್ ಹೌಸ್ ಹಿಲ್‌ ರಸ್ತೆಯಲ್ಲಿರುವ ಜೋಸ್‌ ಅಲುಕ್ಕಾಸ್‌ಎದುರಿಗಿರುವ ವೃತ್ತ ಗಿಡಗಂಟಿ ಬೆಳೆದು ಅಕ್ಷರಶ: ಕಸದ ತೊಟ್ಟಿಯಂತಾಗಿತ್ತು. ಅದರ ಸುತ್ತಮುತ್ತ ಮಣ್ಣಿನ ರಾಶಿಯು ವಾಹನ ಸಂಚಾರಕ್ಕೆ‌ ಅಡತಡೆ ಯುಂಟುಮಾಡುತ್ತಿತ್ತು. ಸ್ವಯಂ ಸೇವಕರಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ಸ್ವಯಂ ಸೇವಕರು‌ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಗಿಡಗಂಟಿಗಳನ್ನು ಕತ್ತರಿಸಿ, ವೃತ್ತದಲ್ಲಿದ್ದ ಕಸವನ್ನೆಲ್ಲ ತೆಗೆದು ಸ್ವಚ್ಛಗೊಳಿಸಿದರು. ನಂತರ ವೃತ್ತದ ಕಟ್ಟೆಗೆ ಕೆಂಪು ಬಣ್ಣ ಬಳಿದು ಸುಂದರವಾಗಿ ಕಂಗೊಳಿಸುವಂತೆ ಮಾಡಲಾಯಿತು.

Ramkrshn_claing_photo_12 Ramkrshn_claing_photo_13 Ramkrshn_claing_photo_14 Ramkrshn_claing_photo_15 Ramkrshn_claing_photo_16 Ramkrshn_claing_photo_17 Ramkrshn_claing_photo_18 Ramkrshn_claing_photo_19 Ramkrshn_claing_photo_20

ಪಾದಚಾರಿ ವಿಭಾಜಕಗಳಿಗೆ ಬಣ್ಣ : ಅಗತ್ಯವಿದ್ದಲ್ಲೆಲ್ಲ ಒಂದಿಷ್ಟು ಸುಣ್ಣ ಬಣ್ಣಬಳಿದು ನಗರದ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯವನ್ನು ಈ ಅಭಿಯಾನದಲ್ಲಿ ಮಾಡಲಾಗುತ್ತಿದೆ. ಅಂತೆಯೇ‌ ಇಂದು ರಸ್ತೆಗಳಲ್ಲಿನ ಪಾದಚಾರಿ ಮಾರ್ಗದಲ್ಲಿದ್ದ ವಿಭಾಜಕಗಳಿಗೆ ಬಣ್ಣ ಹಚ್ಚಿ ಸುಂದರಗೊಳಿಸಲಾಗಿದೆ. ಅಲ್ಲದೇ ಸಾರ್ವಜನಿಕರಿಗೆ ಹಾಗೂ ಹೊಸಬರಿಗೆ ಅನುಕೂಲ ವಾಗಲೆಂದುಲೈಟ್ ಹೌಸ್ ಹಿಲ್ ರಸ್ತೆ, ಮಿಲಾಗ್ರಿಸ್‌ರಸ್ತೆ ಹಾಗೂ ಹಂಪಣಕಟ್ಟೆ ವೃತ್ತದಲ್ಲಿ ಹಾಕಲಾಗಿದ್ದ ಮಾರ್ಗದರ್ಶಿ ಫಲಕಗಳನ್ನು ನವೀಕರಿಲಾಗಿದೆ.

ಆಗ್ನೇಸ್ ವೃತ್ತದ ಸೌಂದರ್ಯೀಕರಣ: ಕಳೆದ ಎರಡು ಭಾನುವಾರಗಳಿಂದ ಹಿಂದೆ‌ ಅಭಿಯಾನ ನಡೆಸಿದ್ದ ಸೇಂಟ್‌ಆಗ್ನೇಸ್ ವೃತ್ತದ ಮೇಲ್ಭಾಗವನ್ನು ಸುಂದರವಾದ ಚಿತ್ರಕಲಾಕೃತಿಗಳಿಂದ ಸುಂದರಗೊಳಿಸಲಾಗುತ್ತಿದೆ. ಮಂಗಳೂರಿನ ನಿಸ್ವಾರ್ಥಿ ಯುವಕರು ಕಟ್ತಿಕೊಂಡ ಐಸಿರಿ ಕಲಾ ತಂಡ ಈ ಚಿತ್ರಕಲೆಯನ್ನು ವಿನೂತನ ರೀತಿಯಲ್ಲಿ ರಚಿಸುತ್ತಿದೆ.

ಅಭಿಯಾನಕ್ಕೆ ಕೈ ಜೋಡಿಸಿದವರು : ರಾಮಕೃಷ್ಣ ಮಠದಲ್ಲಿ ಕಳೆದ  ದಿನಗಳಿಂದ ನಡೆಯುತ್ತಿದ್ದ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ರಾಜ್ಯದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಸುಮಾರು 80  ಜನಯುವಕರು ಸ್ವಚ್ಛತಾಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

ಉಳಿದಂತೆ ನಿವೇದಿತಾ ಬಳಗ ಕಾರ್ಯಕ್ರಮಕ್ಕೆ ಸಹಕಾರ ನೀಡಿತು. ಪ್ರಾಧ್ಯಾಪಕರಾದ ಭಾರತಿ ಭಟ್, ಮಹೇಶ್ ಕೆ ಬಿ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಶ್ರೀ ನಿಖಿಲ್ ಶೆಟ್ಟಿ, ಶ್ರೀ ಸುಜಿತ್ ಪ್ರತಾಪ್, ಅಭಿಯಾನದ ಸಂಯೋಜಕ ಶ್ರೀ ದಿಲ್ ರಾಜ್ ಆಳ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಅಭಿಯಾನಕ್ಕೆ ಮಹಾ ಪೋಷಕರಾಗಿ‌ ಎಂಆರ್‌ಪಿ‌ಎಲ್ ಸಂಸ್ಥೆ ಧನಸಹಾಯ ನೀಡಿ ಪ್ರೋತ್ಸಾಹಿಸುತ್ತಿದೆ.

Write A Comment