ಕನ್ನಡ ವಾರ್ತೆಗಳು

ಇಸ್ಲಾಮಿಕ್ ಸೆಂಟರ್ ಬೆಳ್ಮ ಬದ್ಯಾರ್ ವತಿಯಿಂದ ಹುಬ್ಬುರ್ರಸೂಲ್ ಪ್ರಭಾಷಣ

Pinterest LinkedIn Tumblr

ullala_nausad_bakav

ಉಳ್ಳಾಲ,ಡಿ.28: ಲೋಕ ಪ್ರವಾದಿಯ ಜನ್ಮದಿನಾಚರಣೆ ಕಾಟಚಾರಕ್ಕೆ ಅಚರಿಸುವುದು ನೈಜ್ಯ ಮುಸ್ಲಮಾನ ಲಕ್ಷಣವಲ್ಲ. ಪ್ರವಾದಿಯವರ ಪ್ರೀತಿಯಿಂದ ಅಚರಿಸಬೇಕ. ಪ್ರವಾದಿಯವರ ಮೇಲೆ ಸ್ನೇಹ ಇಲ್ಲದಿದ್ದರೆ ಪರಿಮೂರ್ಣ ಮುಸ್ಲಿಂ ಎನ್ನಲಾಗದು ಎಂದು ಎ.ಎಂ. ನೌಶಾದ್ ಬಾಖವಿ ಹೇಳಿದರು.

ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಬೆಳ್ಮ ಬದ್ಯಾರ್ ಇದರ ಆಶ್ರಯದಲ್ಲಿ ದೇರಳಕಟ್ಟೆ ಗ್ರೀನ್ ಗ್ರೌಂಡ್‌ನಲ್ಲಿ ಭಾನುವಾರ ನಡೆದ ಹುಬ್ಬುರ್ರಸೂಲ್ ಪ್ರಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಾ ಮತ್ತು ಮದೀನದ ಪವಾಢ ಬಹಳಷ್ಟು ಇದೆ. ಮದೀನಕ್ಕೆ ಸಂದರ್ಶನ ಮಾಡಿದವರು ಒಳ್ಳೆಯ ಉದ್ದೇಶ ಇಟ್ಟುಕೊಂಡು ದುವಾ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಪ್ರವಾದಿಯವರು ಮದೀನಕ್ಕೆ ಉತ್ತಮ ಸ್ಥಾನಮಾನ ನೀಡಿದ್ದರು. ಅವರ ಅಂತ್ಯ ದಿನ ಅಲ್ಲೇ ಆಗಿದೆ. ಮಕ್ಕ ಮತ್ತು ಮದೀನಕ್ಕೆ ನಾವು ಗೌರವ ನೀಡಬೇಕು. ಪ್ರೀತಿ, ವಿಶ್ವಾಸ ಇರಬೇಕು. ಮುಸ್ಲಿಂ ಸಮುದಾಯ ಮದೀನಕ್ಕೆ ಒಂದು ಬಾರಿ ಹೋಗಿ ನೋಡಿದರೆ ಅಲ್ಲಿನ ನೈಜ ವಿಚಾರ ಅರ್ಥವಾಗಲು ಸಾಧ್ಯ ಎಂದರು.
ಉತ್ತಮ ಕಾರ್ಯಗಳನ್ನು ಬಹಳಷ್ಟು ಮಾಡಿಕೊಂಡು ಅನಗತ್ಯ ಚಟುವಟಿಕೆ, ಮಾತಿಗಿಳಿದರೆ ಮಾಡಿದ ಪುಣ್ಯ ಕಾರ್ಯಗಳ ಪ್ರತಿಫಲ ಸಿಗದು. ಫ್ರತಿಫಲ ನಿಮಗೆ ಸಿಗಬೇಕಾದರೆ ಅನಗತ್ಯ ಮಾತುಗಳಿಂದ ದೂರ ನಿಲ್ಲಬೇಕು. ಮರಣದ ಮನೆಯಲ್ಲಿ ಮಾತನಾಡಬಾರದು, ಮಸೀದಿ, ಮರಣ ಅಂತ್ಯ ಸಂಸ್ಕಾರದ ಸಂದರ್ಭ ಯಾವುದೇ ಚರ್ಚೆ ಮಾಡಿದರೆ ಅದು ಇಸ್ಲಾಂನ ಚೌಕಟ್ಟು ಮೀರಿದ ಕಾರ್ಯ ಆಗುತ್ತದೆ. ಇದರಿಂದ ನಾವು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಶೈಖುನ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ ದುವಾ ನೆರವೇರಿಸಿದರು.

ಸ್ವಾಗತ ಸಮಿತಿ ಚಯರ್‍ಮ್ಯಾನ್ ಇಸ್‌ಹಾಕ್ ಹಾಜಿ ನಾಟೆಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪಾಣಕ್ಕಾಡ್ ಅಸ್ಸಯ್ಯಿದ್ ರಶೀದ್ ಅಲಿ ಶಿಹಾಬ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ವಿದ್ಯಾರತ್ನ ಶಾಲೆಯ ಮುಖ್ಯಸ್ಥ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಎಸ್.ಎಂ ರಶೀದ್ ಹಾಜಿ, ದೇರಳಕಟ್ಟೆ ಬದ್ರಿಯಾ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಬಕರ್ ಹಾಜಿ ನಾಟೆಕಲ್, ಉಪಾಧ್ಯಕ್ಷ ಇಲ್ಯಾಸ್ ಡಿ., ಮಾಜಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಕುಂಡೂರು ಜುಮಾ ಮಸೀದಿ ಖತೀಬ್ ಅಬೂಸ್ವಾಲಿಹ್ ಫೈಝಿ, ಜಂಇಯಯ್ಯತುಲ್ ಮು‌ಅಲ್ಲಿಮೀನ್ ದೇರಳಕಟ್ಟೆ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ, ಎಸ್‌ಕೆ‌ಎಸ್ಸೆಸೆಫ್ ಮಂಗಳೂರು ವಲಯ ಅಧ್ಯಕ್ಷ ಇಬ್ರಾಹಿಂ ಕೊಣಾಜೆ, ದೇರಳಕಟ್ಟೆ ಬದ್ರಿಯಾ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ನಾಸಿರ್ ಫೈಝಿ, ಪನೀರ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರ್ರಹ್‌ಮಾನ್ ಹಾಜಿ, ಎಸ್‌ಕೆ‌ಐಬಿವಿ ಸದಸ್ಯರಾದ ಕೆ.ಎಸ್. ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಅಬೂಬಕರ್ ಹಾಜಿ ಗೋಳ್ತಮಜಲು, ಜಿ.ಪಂ. ಸದಸ್ಯ ಎನ್.ಎಸ್. ಕರೀಂ, ದ.ಕ. ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಮೊಯಿದಿನಬ್ಬ ಹಾಜಿ, ಅಬ್ದುಲ್ ಖಾದಿರ್ ಪಳ್ಳಂಗೋಡ್, ಅಬ್ಬಾಸ್ ಹಾಜಿ ಮಜಲ್, ಮೈಸೂರ್ ಬಾವ, ದೇರಳಕಟ್ಟೆ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಮೊಯಿದಿನ್ ಕುಂಞಿ ಮಾರಾಠಿಮೂಲೆ, ಕೋಶಾಧಿಕಾರಿ ಅಬೂಸ್ವಾಲಿಹ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹನೀಫ್ ಹಾಜಿ, ಇಕ್ಬಾಲ್ ಮುಲ್ಕಿ, ಹುಸೈನ್ ಹಾಜಿ ಕೂಡಾಜೆ, ರಿಯಾಝ್, ಅದ್ದು ಹಾಜಿ ಮಂಗಳೂರು, ಎಂ.ಎಂ ಹಾಜಿ ಮಂಗಳೂರು, ಶಿಹಾಬ್ ಮೊಗ್ರಾಲ್, ನೌಶಾದ್ ಸೂರಲ್ಪಾಡಿ, ಬೆಳ್ಮ ಗ್ರಾ.ಪಂ. ಉಪಾಧ್ಯಕ್ಷ ಸತ್ತಾರ್, ಸದಸ್ಯರಾದ ಎಂ.ಎ. ಅಬ್ದುಲ್ಲ, ಕಬೀರ್ ಡಿ. ಹಾಜಿ, ಕುಂಡೂರುಜುಮಾ ಮಸೀದಿ ಕೋಶಾಧಿಕಾರಿ ಸ್ವಾಗತ್ ಅಬೂಬಕರ್ ಹಾಜಿ, ಇಬ್ರಾಹಿಂ ಹಾಜಿ ಚಕಮಕ್ಕಿ ಮೊದಲಾದವರು ಉಪಸ್ಥಿತರಿದ್ದರು.

ಶಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಬೆಳ್ಮ ಬದ್ಯಾರ್ ಕೆ.ಯು. ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತಿಸಿ. ಶಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಬೆಳ್ಮ ಬದ್ಯಾರ್ ವಂದಿಸಿದರು. ನೌಫಲ್ ಕುಡ್ತವೂಗೆರ್ ಕಾರ್ಯಕ್ರಮ ನಿರೂಪಿಸಿದರು.

Write A Comment