ಕನ್ನಡ ವಾರ್ತೆಗಳು

ಲ್ಯಾಂಡ್‌ಲಿಂಕ್ಸ್‌ ಸಂಸ್ಥೆಯ 35ನೇ ವರ್ಷದ ಸಂಭ್ರಮಾಚರಣೆ – ಹೊಸ ಅನ್ವೇಷಣೆ ಹಾಗೂ ಗ್ರಾಹಕ ಸಂತೃಪ್ತಿಯ ಸೇವೆಯಿಂದ ಯಶಸ್ಸು : ಡಿವಿಎಸ್

Pinterest LinkedIn Tumblr

Land_Links_35years_1

ಮಂಗಳೂರು,ಡಿ.28: ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಮಂಗಳೂರಿನ ಪ್ರತಿಷ್ಠಿತ ಲ್ಯಾಂಡ್‌ಲಿಂಕ್ಸ್‌ ಸಂಸ್ಥೆ ಸ್ಥಾಪನೆಯ 35ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ರವಿವಾರ ಸಂಜೆ ಮೇರಿಹಿಲ್‌ನ ವಿಕಾಸ್‌ ಪಿಯು ಕಾಲೇಜು ಮೈದಾನದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಜರಗಿತು.

ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಲ್ಯಾಂಡ್‌ಲಿಂಕ್ಸ್‌ ಸಂಸ್ಥೆ ವಿಶ್ವಾಸಾರ್ಹ ಪರಂಪರೆಯನ್ನು ಹೊಂದಿದೆ. ಸ್ಮಾರ್ಟ್‌ ಮಂಗಳೂರು ಕನಸಿನ ಮೂಲ ಆಶಯವನ್ನು ಲ್ಯಾಂಡ್‌ ಲಿಂಕ್ಸ್‌ ಸಂಸ್ಥೆಯ ಅಧ್ಯಕ್ಷ-ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಸಮರ್ಥವಾಗಿ ನಿರ್ವಹಿಸಿರುವುದು ಶ್ಲಾಘನೀಯ ಎಂದು ಹೇಳಿದರು.

1981ರಲ್ಲಿ ಜೆ. ಕೃಷ್ಣ ಪಾಲೆಮಾರ್ ಅವರು ಪುಟ್ಟದಾಗಿ ಆರಂಭಿಸಿದ ಲ್ಯಾಂಡ್‌ಲಿಂಕ್ಸ್ ಸಂಸ್ಥೆ ಜನತೆಯ ಆಶೀರ್ವಾದದೊಂದಿಗೆ ಈ ಮೂರುವರೆ ದಶಕದಲ್ಲಿ ವಿಶ್ವಾಸಾರ್ಹ ಪರಂಪರೆಯೊಂದಿಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬ್ರ್ಯಾಂಡ್ ಎಂಬ ಸ್ವರೂಪವನ್ನು ಪಡೆದುಕೊಂಡಿದೆ. ಸಮಾಜದ ವಿವಿಧ ಆರ್ಥಿಕ ಸಾಮರ್ಥ್ಯದ ಅನುಕೂಲಕ್ಕೆ ತಕ್ಕಂತೆ, ಅತೀ ಕಡಿಮೆ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಮನೆ, ಅಪಾರ್ಟ್‌ಮೆಂಟ್‌, ನಿವೇಶನ ಒದಗಿಸಿಕೊಡುವ ಬದ್ಧತೆಯೊಂದಿಗೆ ಪಾಲೆಮಾರ್‌ ಅವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಮೂಲಸೌಕರ್ಯ ಹಾಗೂ ಟೆಕ್ನಾಲಜಿಯಲ್ಲಿ ಸ್ಮಾರ್ಟ್‌ ಸಿಟಿ ಕನಸು ಇಂದು ದೇಶಾದ್ಯಂತ ದೊಡ್ಡ ಸ್ವರೂಪವನ್ನು ಪಡೆದುಕೊಂಡಿದೆ. ಈ ಆಶಯವನ್ನು ಈ ಹಿಂದೆಯೇ ಪಾಲೆಮಾರ್‌ ಮಾಡಿಕೊಟ್ಟಿದ್ದಾರೆ. ಹೊಸ ಹೊಸ ಅನ್ವೇಷಣೆ ಹಾಗೂ ಗ್ರಾಹಕ ಸಂತೃಪ್ತಿಯ ಸೇವೆ ಅವರ ಮೂಲಕವಾಗಿ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.

Land_Links_35years_2 Land_Links_35years_3 Land_Links_35years_4 Land_Links_35years_5 Land_Links_35years_6 Land_Links_35years_7 Land_Links_35years_8 Land_Links_35years_9 Land_Links_35years_10 Land_Links_35years_11 Land_Links_35years_12 Land_Links_35years_13 Land_Links_35years_14 Land_Links_35years_15 Land_Links_35years_16 Land_Links_35years_17 Land_Links_35years_18 Land_Links_35years_19 Land_Links_35years_20

ಸಂಸದ ನಳಿನ್‌ ಕುಮಾರ್‌ ಕಟೀಲು ಅವರು, ಸಂಸ್ಥೆಯ ಲಾಂಛನ ಅನಾವರಣಗೊಳಿಸಿದರು. ನಿರಂತರ ಪರಿಶ್ರಮ ಹಾಗೂ ಹೊಸತನಗಳನ್ನು ಪರಿಚಯಿಸುವ ಮೂಲಕ ಕೃಷ್ಣ ಪಾಲೆಮಾರ್‌ ಸಾರಥ್ಯದ ಲ್ಯಾಂಡ್‌ಲಿಂಕ್ಸ್‌ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿರುವುದು ಸಂತಸ ತಂದಿದೆ ಎಂದು ನಳಿನ್ ಕುಮಾರ್ ಹೇಳಿದರು.

ಶಾಸಕ ಜೆ. ಆರ್‌. ಲೋಬೊ ಅವರು ಅತ್ಯಾಧುನಿಕ ಸೌಲಭ್ಯಗಳ “ಅಲ್‌ ಹೆಲೆನ್‌’ ಅಪಾರ್ಟ್‌ಮೆಂಟ್‌ನ ಫಲಕ ಅನಾವರಣಗೊಳಿಸಿದರು.

ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಪಿ. ಜಯರಾಮ್‌ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರಕಾರದ ಮಾಜಿ ಅಡ್ವೊಕೇಟ್‌ ಜನರಲ್‌ ಬಿ.ವಿ. ಆಚಾರ್ಯ, ವಿ.ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಮನಪಾ ಸದಸ್ಯ ಲ್ಯಾನ್ಸ್‌ಲಾಟ್‌ ಪಿಂಟೊ ಮುಖ್ಯ ಅತಿಥಿಗಳಾಗಿದ್ದರು.

ಲ್ಯಾಂಡ್‌ಲಿಂಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಪಾಲೆಮಾರ್‌ ಉಪಸ್ಥಿತರಿದ್ದರು. ಲ್ಯಾಂಡ್‌ಲಿಂಕ್ಸ್‌ ಸಂಸ್ಥೆಯ ಅಧ್ಯಕ್ಷ- ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಪ್ರಸ್ತಾವನೆಗೈದರು. ಜೆ.ಕೆ. ರಾವ್‌ ವಂದಿಸಿದರು. ಮನೋಹರ ಪ್ರಸಾದ್‌ ಸ್ವಾಗತಿಸಿ, ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಜರಗಿತು.

Land_Links_35years_21 Land_Links_35years_22 Land_Links_35years_23 Land_Links_35years_24 Land_Links_35years_25 Land_Links_35years_26 Land_Links_35years_27 Land_Links_35years_28 Land_Links_35years_29 Land_Links_35years_30 Land_Links_35years_31 Land_Links_35years_32 Land_Links_35years_33 Land_Links_35years_34 Land_Links_35years_35 Land_Links_35years_36

ಲ್ಯಾಂಡ್‌ಲಿಂಕ್ಸ್‌ 35ರ ವಿಶೇಷ ಕೊಡುಗೆ – ಮೊದಲ 35 ಗ್ರಾಹಕರಿಗೆ 25 ವರ್ಷದ ಬಳಿಕ ಸಂಪೂರ್ಣ ಹಣ ವಾಪಸ್ಸು :

ಲ್ಯಾಂಡ್‌ಲಿಂಕ್ಸ್‌ ಸಂಸ್ಥೆಯ ಸ್ಥಾಪಕ, ಮಾಲಕ, ಪ್ರವರ್ತಕ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ (ಪ್ರಸ್ತಾವನೆ – ಮಾತು) ಮಾತನಾಡಿ, ಲ್ಯಾಂಡ್ ಲಿಂಕ್ಸ್ ವಿವಿಧ ಯೋಜನೆಗಳಲ್ಲಿ ಲಭ್ಯವಿರುವ ಪ್ಲಾಟ್‌ಗಳ ಪೈಕಿ ಮೊದಲ 35ನ್ನು ಖರೀದಿಸಿದ ಗ್ರಾಹಕರಿಗೆ ಅವರು ಖರೀದಿಸಿದಾಗ ನೀಡುವ ಮೊತ್ತವನ್ನು 25 ವರ್ಷಗಳಲ್ಲಿ ಅವರಿಗೇ ಹಿಂತಿರುಗಿಸಲಾಗುತ್ತದೆ.

ಬ್ಯಾಂಕ್ ಮುಂಗಡ ಪಡೆದವರಿಗೂ ಬ್ಯಾಂಕಿನ ನಿಯಮಾನುಸಾರ ಇದು ಲಭ್ಯವಿದೆ. ಒಂದು ಕುಟುಂಬ ಒಂದೇ ಮನೆ ಖರೀದಿಸಬಹುದು. ಈ ಕೊಡುಗೆ ಡಿ.27ರಿಂದ 2016ರ ಜನವರಿ 13ರವರೆಗೆ ಇರಲಿದೆ. ರಿಯಲ್ ಎಸ್ಟೇಟ್ ಉದ್ಯಮದ ಇತಿಹಾಸದಲ್ಲಿಯೇ ಇದು ಅಪೂರ್ವ ಕೊಡುಗೆ ಎಂದು ಹೇಳಿದರು.

ಜನಸಾಮಾನ್ಯರೂ ಮನೆ ಹೊಂದುವಂತಾಗಲು ಮಂಗಳೂರು ನಗರದ ಕುಡುಪುವಿನಲ್ಲಿ 10 ಲಕ್ಷ ರೂ.ಗಳಿಗೆ ಮನೆ ಒದಗಿಸಲು ತೀರ್ಮಾನಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರು ಮನೆ ಹೊಂದುವ ಕನಸು ನನಸಾಗಲು ಇಲ್ಲಿ 250 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಕುಂಜತ್ತಬೈಲಿನಲ್ಲಿ 20 ಎಕರೆಯಲ್ಲಿ ವಿಲ್ಲಾಗಳ ನಿರ್ಮಾಣ, ಪಂಪ್‌ವೆಲ್‌ನಲ್ಲಿ 6 ಎಕರೆ ಜಮೀನಿನಲ್ಲಿ ನಿವೇಶನ, ಬಲ್ಲಾಳ್‌ಬಾಗ್‌ನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಬ್ಯಾಂಕ್‌ ಲೋನ್‌ ವ್ಯವಸ್ಥೆ ಒದಗಿಸಲಾಗುತ್ತದೆ ಎಂದರು.

ಸಂಸ್ಥೆಗೆ ಸೇವೆ ಸಂತೃಪ್ತಿ :

ಲ್ಯಾಂಡ್‌ಲಿಂಕ್ಸ್ ವತಿಯಿಂದ ನಿರಾಸರವಾಗಿ ಅಂಗವಿಕಲ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ, ಬಡವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಪುಸ್ತಕ, ಸಮವಸ್ತ್ರ ವಿತರಣೆ / ಕನಿಷ್ಠ ಆದಾಯದ ಕುಟುಂಬಗಳಿಗೂ ಸ್ವಂತ ಸೂರನ್ನು ಒದಗಿಸಿದ ಸಂತೃಪ್ತಿ. / ಸಹಸ್ರಾರು ಮಂದಿಗೆ ಪ್ರತ್ಯಕ್ಷ-ಅಪ್ರತ್ಯಕ್ಷ ಉದ್ಯೋಗ / ಪರಿಸರ ಸಂರಕ್ಷಣೆ ಆದ್ಯತೆ, ಹಸಿರಿನ ರಕ್ಷಣೆ. ಪಿಲಿಕುಳದಲ್ಲಿ ಎರಡು ಹುಲಿಗಳನ್ನು ದತ್ತು ಸ್ವೀಕರಿಸಿ ಪಾಲನೆ ಮಾಡುತ್ತಿರುವ ಸಂತಸ. / ಜಾತಿಮತ ಬೇಧವಿಲ್ಲದೆ ಎಲ್ಲಾ ಧಾರ್ಮಿಕ ಸಂಸ್ಥೆಗಳ ಪುನರುತ್ಥಾನ ಹಾಗೂ ಅಭಿವೃದ್ಧಿಗೆ ನೆರವು ಇದೆಲ್ಲಾ ಸೇವೆ ಸಂಸ್ಥೆಗೆ ಸೇವೆ ಸಂತೃಪ್ತಿ ತಂದಿದೆ ಎಂದು ಪಾಲೆಮಾರ್ ಹೇಳಿದರು.

ಸಮಾಜದಿಂದ ಪಡೆದಿರುವುದು ಸಮಾಜಕ್ಕೆ ಮರು ಅರ್ಪಣೆ:

ಮನೆ, ಅಪಾರ್ಟ್‌ಮೆಂಟ್, ನಿವೇಶನಗಳ ಜತೆಯಲ್ಲಿ ಎಲ್ಲಾ, ಬಂಗಲೆ, ಬಡಾವಣೆ, ವಾಣಿಜ್ಯ ಸಮುಚ್ಛಯ, ಕೈಗಾರಿಕಾ ನಿವೇಶನ, ಫಾರ್ಮ್ ಹೌಸ್‌ಗಳನ್ನು ಲ್ಯಾಂಡ್‌ಲಿಂಕ್ಸ್ ಒದಗಿಸುತ್ತದೆ. ದೇರೆಬೈಲ್ ಕೊಂಚಾಡಿಯ ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್‌ನಲ್ಲಿ ಈ ಸರಿಸುಮಾರು 2000ದಷ್ಟು ಮನೆಗಳು ನಿಮಾರ್ಣವಾಗಿದ್ದು ದೇಶದಲ್ಲೇ ಅತೀ ವಿಶಿಷ್ಟ ಎಂಬ ಗೌರವಕ್ಕೆ ಪಾತ್ರವಾಗಿದೆ.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ… ಹೀಗೆ ವಿವಿಧ ಕ್ಷೇತ್ರಗಳಲ್ಲಿ ದಾನಿಯಾಗಿ, ಸಂಘಟಕರಾಗಿ, ಮಾರ್ಗದರ್ಶಿಕರಾಗಿ ಪಾಲೆಮಾರ್, ಸಮಾಜದಿಂದ ಪಡೆದಿರುವುದು ಸಮಾಜಕ್ಕೆ ಮರು ಅರ್ಪಣೆ ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಕರ್ನಾಟಕ ಸರಕಾರದಲ್ಲಿ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಅನೇಕ ಯೋಜನೆಗಳನ್ನು ಸಮಾಜಕ್ಕೆ ಅರ್ಪಿಸಿದವರು. ತಮ್ಮ ರಾಜಕೀಯ ಪ್ರಭಾವವನ್ನು ಎಂದೂ ಉದ್ಯಮಕ್ಕೆ ಬಳಸಿದವರಲ್ಲ. ಸರ್ವರ ಪ್ರೀತ್ಯಾದರಗಳಿಗೆ ಪಾತ್ರರಾಗಿ `ಕೃಷ್ಣಣ್ಣ’ ಎಂದೇ ಜನಪ್ರಿಯರು.

ಬೊಂದೇಲ್‌ನಲ್ಲಿ ಅವರು 2012ರಲ್ಲಿ ಸ್ಥಾಪಿಸಿರುವ ವಿಕಾಸ್ ಪದವಿಪೂರ್ವ ಕಾಲೇಜು ಈಗ ರಾಜ್ಯದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ ಪ್ರಸಿದ್ಧಿಯಾಗಿದೆ. ಈಗ ಕೃಷ್ಣ ಪಾಲೆಮಾರ್ ಅವರ ಪುತ್ರ ಪ್ರದೀಪ್ ಪಾಲೆಮಾರ್ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

Write A Comment