ಅಂತರಾಷ್ಟ್ರೀಯ

ಕೆಲವೇ ಸೆಕೆಂಡುಗಳಲ್ಲಿ ನೀರು ಶೋಧಿಸುವ ಪಾಲಿಮಾರ್ ಶೋಧಕ

Pinterest LinkedIn Tumblr

Pure-Waterನ್ಯೂಯಾರ್ಕ್: ಕ್ಷಣಾರ್ಧದಲ್ಲಿ ನೀರನ್ನು ಸ್ವಚ್ಛಗೊಳಿಸುವ, ಪುನರ್ ಬಳಕೆ ಮಾಡಬಹುದಾದ ನೂತನ ಪಾಲಿಮಾರ್ ಶೋಧಕವನ್ನು ಅಮೆರಿಕ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಇದು ಮನೆಯಲ್ಲಿರುವ ಬರೀ ಕಣ್ಣಿಗೆ ಕಾಣಿಸದ ಮಲಿನಕಾರಕ ವಸ್ತುಗಳನ್ನು ಗಾಳಿಯಿಂದ ಬೇರ್ಪಡಿಸುವ ಗಾಳಿ ಶೋಧಕದಂತೆ ಕಾರ್ಯನಿರ್ವಹಿಸುತ್ತದೆ.

ಗಾಳಿ ಶೋಧಕದಲ್ಲಿ ಬಳಸಿರುವ ಉಪಕರಣಗಳನ್ನೇ ಇದರಲ್ಲೂ ಬಳಸಲಾಗಿದ್ದು, ಸೈಕ್ಲೋಡೆಕ್ಸ್​ಟ್ರಿನ್​ನ ಬಳಕೆ ನೀರು ಶೋಧಕದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂಬುದು ಸಂಶೋಧಕರ ವಿಶ್ವಾಸ.

ಸೈಕ್ಲೋಡೆಕ್ಸ್​ಟ್ರಿನ್​ನಿಂದ ಅಭಿವೃದ್ಧಿಪಡಿಸಿರುವ ರಂಧ್ರಗಳಿಂದ ತುಂಬಿದ ಶೋಧಕವು ಸಕ್ರಿಯವಾಗಿರುವ ಇಂಗಾಲದ ಕಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಂಧಿಸುತ್ತದೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಜಲ ಶೋಧಕಗಳಿಂದ 200 ಪಟ್ಟು ಹೆಚ್ಚು ಉತ್ತಮವಾಗಿ ಈ ಶೋಧಕ ಕಾರ್ಯನಿರ್ವಹಿಸಲಿದೆ.

ಸೈಕ್ಲೋಡೆಕ್ಸ್​ಟ್ರಿನ್ ಹೊಂದಿರುವ ಪಾಲಿಮಾರ್ ಅಗ್ಗವಾಗಿದ್ದು, ಮರುಬಳಕೆ ಮಾಡಬಹುದಾಗಿದ್ದು, ಹೆಚ್ಚು ಬಳಸಿದಂತೆ ಶುದ್ಧೀಕರಿಸುವ ಗುಣಮಟ್ಟದಲ್ಲೂ ಕೊರತೆ ಕಂಡುಬರುವುದಿಲ್ಲ.

 

Write A Comment