ಕರ್ನಾಟಕ

ಮುಂದಿನ ಶೈಕ್ಷಣಿಕ ವರ್ಷದಿಂದ ‘ಶೂ ಭಾಗ್ಯ’: ಸಚಿವ ಸಂಪುಟ ಒಪ್ಪಿಗೆ

Pinterest LinkedIn Tumblr

siddu-cmಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ‘ಶೂ ಭಾಗ್ಯ’ ಯೋಜನೆ ಜಾರಿಗೆ ತರಲು ಸೋಮವಾರ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 120 ಕೋಟಿ ವೆಚ್ಚದ ಶೂ ಭಾಗ್ಯ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಎಸ್‌ಡಿಎಂಸಿ ಮೂಲಕ ಹಣ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

ಒಟ್ಟು 48 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಈ ‘ಶೂ ಭಾಗ್ಯ’ ಯೋಜನೆಯ ಲಾಭ ದೊರೆಯಲಿದ್ದು, 1ರಿಂದ 5ನೇ ತರಗತಿವರೆಗಿನ ಪ್ರತಿ ವಿದ್ಯಾರ್ಥಿಗೆ 225 ರುಪಾಯಿ, 6ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ 250 ಹಾಗೂ 9, 10ನೇ ತರಗತಿ ಮಕ್ಕಳಿಗೆ 275 ರುಪಾಯಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

ಇನ್ನು ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ದ ಅವಧಿಯನ್ನು 2016 ಜನವರಿ 1ರಿಂದ ಒಂದು ವರ್ಷಗಳ ಕಾಲ ವಿಸ್ತರಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

Write A Comment