ರಾಷ್ಟ್ರೀಯ

ಬ್ರಿಟಿಷರು ಭಾರತ ಬಿಟ್ಟು ತೊಲಗಲು ಸುಭಾಶ್ ಚಂದ್ರ ಬೋಸ್‌ರ ಐಎನ್‌ಎ ಕಾರಣ

Pinterest LinkedIn Tumblr

Ajit_Dovalನವದೆಹಲಿ: 1947ರಲ್ಲಿ ಬ್ರಿಟೀಷರು ಭಾರತವನ್ನು ಬಿಟ್ಟು ತೊಲಗಲು ಕಾರಣ ಏನು ಎಂದರೆ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಎಂಬ ಉತ್ತರ ಸಿಗುತ್ತದೆ. ಆದರೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಪ್ರಶ್ನೆಗೆ ಕೊಟ್ಟ ಉತ್ತರವೇನು ಗೊತ್ತಾ? ಸುಭಾಶ್ ಚಂದ್ರ ಬೋಸ್!

ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿ ಮೂಲಕ ಸೃಷ್ಟಿಸಿದ ಕಿಡಿಯೇ ಬ್ರಿಟಿಷರು ಭಾರತ ಬಿಟ್ಟು ತೊಲಗಲು ಕಾರಣವಾಯಿತು ಎಂದು ದೋವಲ್ ಹೇಳಿದ್ದಾರೆ.

ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲ್ಪಟ್ಟ ವಿಡಿಯೋ ಒಂದರಲ್ಲಿ ದೋವಲ್, 1945ರಲ್ಲಿ ಎರಡನೇ ಮಹಾಯುದ್ಧವನ್ನು ಗೆದ್ದ ಬ್ರಿಟಿಷರು ಅಷ್ಟು ಬೇಗನೆ ಭಾರತ ಬಿಟ್ಟು ಹೋಗಲು ತೀರ್ಮಾನಿಸಿದ್ದು ಯಾಕೆ? ಎಂಬುದನ್ನು ವಿವರಿಸಿದ್ದಾರೆ. ಬೋಸ್ ತಮ್ಮ ಇಂಡಿಯನ್ ನ್ಯಾಷನಲ್ ಆರ್ಮಿಯ ಸೈನಿಕರ ಮನಸ್ಸಲ್ಲಿ ಹಚ್ಚಿದ್ದ ಸ್ವಾತಂತ್ರ್ಯದ ಕಿಚ್ಚು ಅಂಥದ್ದಾಗಿತ್ತು ಎಂದು ದೋವಲ್ ಇಲ್ಲಿ ಹೇಳಿದ್ದಾರೆ.

ಆಗಸ್ಟ್ 18, 1945ರಲ್ಲಿ ಜಪಾನ್‌ಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಸುಭಾಷ್ ಚಂದ್ರ ಬೋಸ್ ಫೋರ್‌ಮೋಸಾ (ಈಗಿನ ತೈವಾನ್)ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು 1945 ಆಗಸ್ಟ್ 22 ರಂದು ಟೋಕಿಯೋ ರೇಡಿಯೋ ಸುದ್ದಿ ಪ್ರಸಾರ ಮಾಡಿತ್ತು.

ಆದರೆ ವಿಮಾನ ಅಪಘಾತದಲ್ಲಿ ಬೋಸ್ ಸತ್ತಿಲ್ಲ ಎಂದು ಅವರ ಅನುಯಾಯಿಗಳು ಹೇಳಿದ್ದು, ಬೋಸ್ 1945ರ ನಂತರ ಬದುಕಿದ್ದರು ಎಂಬ ಬಗ್ಗೆ ಹಲವಾರು ಕತೆಗಳು ಹುಟ್ಟಿಕೊಂಡಿದ್ದವು .

ಏತನ್ಮಧ್ಯೆ, ಬೋಸ್ ಕುಟುಂಬದವರ ಬಹುಕಾಲದ ಬೇಡಿಕೆಗೆ ಮಣಿದು, ಪ್ರಧಾನಿ ನರೇಂದ್ರ ಮೋದಿಯರ ಸರ್ಕಾರ ನೇತಾಜಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗ ಪಡಿಸಿತ್ತು.

Write A Comment