ರಾಷ್ಟ್ರೀಯ

ಅಂಬೇಡ್ಕರ್ ಅವರು ಬದುಕಿದ್ದಿದ್ದರೆ ಭಾರೀ ಸಂತಸ ಪಡುತ್ತಿದ್ದರು : ಮೋದಿ

Pinterest LinkedIn Tumblr

bjpfffನವದೆಹಲಿ, ಡಿ.29- ಹಿಂದುಳಿದವರು, ದೀನ- ದಲಿತರನ್ನು ಆರ್ಥಿಕವಾಗಿ ಸದೃಢಗೊಳಿಸುವುದೇ ಕೇಂದ್ರ ಸರ್ಕಾರದ ಮೂಲ ಉದ್ದೇಶ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರ ಅಂದರೆ ನಿಮ್ಮ ಸರ್ಕಾರ (ಆಪ್‌ಕಿ ಸರ್ಕಾರ್) ಎಂದು ಹೇಳಿದ್ದಾರೆ. ಇಲ್ಲಿನ ವಿಜ್ಞಾನ ಭವನದಲ್ಲಿ ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಆಯೋಜಿಸಿದ್ದ ದಲಿತ ಉದ್ಯಮಿಗಳ ರಾಷ್ಟ್ರೀಯ ಸಮಾ ವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, ಕೇಂದ್ರ ಸರ್ಕಾರವು ದಲಿತ ಉದ್ಯಮಿಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದು, ಈಗ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಬದುಕಿದ್ದಿದ್ದರೆ ಭಾರೀ ಸಂತಸ ಪಡುತ್ತಿದ್ದರು ಎಂದು ಬಣ್ಣಿಸಿದರು.

ಆರ್ಥಿಕ ಪಾಲ್ಗೊಳ್ಳುವಿಕೆ (ಸೇರ್ಪಡೆ) ನಮ್ಮ ಪ್ರಮುಖ ಕಾರ್ಯಕ್ರಮ.

ನಾವು ಉದ್ಯೋಗಿಗಳನ್ನು ಸೃಷ್ಟಿಸುವುದಿಲ್ಲ ಅದರ ಬದಲಿಗೆ ಉದ್ಯೋಗದಾತರನ್ನು ಸೃಷ್ಟಿಸಲು ಬಯಸುತ್ತೇವೆ. ದಲಿತರ ಆರಾಧನಾ ದೈವವಾಗಿರುವ ಬಾಬಾ ಸಾಹೇಬರು, ಸಂವಿಧಾನದ ಶಿಲ್ಪಿಯಾಗಿದ್ದಾರೆ ನಿಜವೇ. ಆದರೆ, ಅವರೊಬ್ಬ ಅಧಿಕೃತ ಆರ್ಥಿಕ ತಜ್ಞರೂ ಆಗಿದ್ದರು ಎಂಬುದು ಬಹು ಜನರಿಗೆ ತಿಳಿಯದು. ನಮ್ಮ ದಲಿತ ಭ್ರಾತೃ- ಭಗಿನಿಯರಿಗೆ ಕೈಗಾರಿಕೀಕರಣ ಗರಿಷ್ಠ ಲಾಭ ನೀಡುತ್ತದೆ ಎಂಬುದು ಅಂಬೇಡ್ಕರ್ ಅವರ ಮೂಲೋದ್ದೇಶವಾಗಿತ್ತು. ದಲಿತರು, ಹಿಂದುಳಿದ ಸಮುದಾಯದ ಉದ್ಯಮಿಗಳಿಗೆ ನಮ್ಮ ಸರ್ಕಾರ ಅಗತ್ಯ ಸಾಲದ ನೆರವು ಒದಗಿಸುವ ಮೂಲಕ ಉತ್ತೇಜನ ನೀಡುತ್ತಿದೆ.
ನೀವುಗಳು ಸಾಕಷ್ಟು ನೋವು, ಅವಮಾನ ಅನುಭವಿಸಿ ಮೇಲೆ ಬಂದಿದ್ದೀರಿ. ಇಂದು ಪರಿಸ್ಥಿತಿ ಬೇಕಾದಷ್ಟು ಬದಲಾಗಿದೆ. ನೀವೇ ಕೋಟಿ-ಕೋಟಿ ಜನರಿಗೆ ಉದ್ಯೋಗ ಒದಗಿಸಿದ್ದೀರಿ. ಇದು ನಿಮ್ಮ ಜವಾಬ್ದಾರಿಯನ್ನು ತೋರಿಸುತ್ತದೆ. ಸ್ವಾತಂತ್ರ್ಯ ಬಂದು 60 ವರ್ಷಗಳ ನಂತರವೂ ಕೆಲವರು ಅಧಿಕಾರದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಆದರೆ, ನೀವು ಕರ್ತವ್ಯದ ಬಗ್ಗೆ ಮಾತನಾಡು ತ್ತಿದ್ದೀರಿ. ಇದು ದೇಶದ ಬಗ್ಗೆ ನಿಮಗಿರುವ ಕಾಳಜಿಯ ನಿದರ್ಶನವಾಗಿದೆ ಎಂದು ಮೋದಿ ಪ್ರಶಂಸಿಸಿದರು.

Write A Comment