ರಾಷ್ಟ್ರೀಯ

ಮಲ್ಲಿಕಾರ್ಜುನ ಖರ್ಗೆಗೆ ‘Y’ ಕ್ಯಾಟಗರಿ ಭದ್ರತೆ

Pinterest LinkedIn Tumblr

kargheನವದೆಹಲಿ, ಡಿ.29-ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶೀಘ್ರದಲ್ಲೇ ವೈ ಕ್ಯಾಟಗರಿ ಭದ್ರತೆ ಮಂಜೂರಾಗಲಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಖರ್ಗೆ ಅವರಿಗೆ ವೈ ಕ್ಯಾಟಗರಿ ಭದ್ರತೆ ನೀಡುವ ಅಗತ್ಯವಿದೆ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದ್ದು, ಖರ್ಗೆ ಅವರಿಗೆ ವೈ ಕ್ಯಾಟಗೆರಿ ಭದ್ರತೆ ಒದಗಿಸುವುದು ಖಚಿತವಾಗಿದೆ. ವೈ ಕ್ಯಾಟಗರಿಯಲ್ಲಿ ಒಟ್ಟು 11 ಮಂದಿ ಭದ್ರತಾಧಿಕಾರಿಗಳಿರುತ್ತಾರೆ.

ಸಬ್‌ಇನ್ಸ್‌ಪೆಕ್ಟರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಓರ್ವ ಆಪ್ತ ಭದ್ರತಾಧಿಕಾರಿ ಸೇರಿದಂತೆ ಒಟ್ಟು 11 ಮಂದಿಯನ್ನು ಭದ್ರತೆಗೆ ಒದಗಿಸಲಾಗುವುದು. ಈಗಾಗಲೇ ಗೃಹ ಇಲಾಖೆ ಭದ್ರತೆ ನೀಡುವ ಬಗ್ಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಅಧಿಕೃತ ಆದೇಶ ಹೊರಡಿಸುವುದಷ್ಟೇ ಬಾಕಿ ಉಳಿದಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಖರ್ಗೆ ಪ್ರಯಾಣಿಸುವ ವೇಳೆ ವೈ ಕ್ಯಾಟಗರಿ ಭದ್ರತೆ ಒದಗಿಸುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯ. ಕೇಂದ್ರ ಗೃಹ ಇಲಾಖೆಯು ಆಯಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲು ಮುಂದಾಗಿದೆ. 11 ಮಂದಿ ಭದ್ರತಾಧಿಕಾರಿಗಳ ಜೊತೆ ಭದ್ರತಾ ವಾಹನವು ಬೆಂಗಾವಲಿಗೆ ಇರಲಿದೆ.
ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಲ್ಲ. ಆದರೆ ಕಾಂಗ್ರೆಸ್ ಪಕ್ಷ ಅವರನ್ನು ಸಂಸದೀಯ ನಾಯಕನಾಗಿ ಆಯ್ಕೆ ಮಾಡಿದೆ.
ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷದ ನಾಯಕ ಸ್ಥಾನ ಪಡೆಯಬೇಕಾದರೆ ಒಟ್ಟು ಸದಸ್ಯರ ಶೇ.10 ರಷ್ಟು ಸದಸ್ಯರನ್ನು ಹೊಂದಿರಬೇಕು. ಲೋಕಸಭೆಯ ಒಟ್ಟು 545 ಸದಸ್ಯರಲ್ಲಿ ಕಾಂಗ್ರೆಸ್ ಪಡೆದಿರುವುದು ಕೇವಲ 44 ಸ್ಥಾನಗಳನ್ನು ಮಾತ್ರ. ಹೀಗಾಗಿ ಅವರಿಗೆ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ನೀಡಲು ಸಾಧ್ಯವಾಗಿರಲಿಲ್ಲ. ಆದರೂ ಕೇಂದ್ರ ಸರ್ಕಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅತ್ಯಂತ ಮಹತ್ವದ ಹುದ್ದೆಗಳಾದ ಕೇಂದ್ರ ಜಾಗೃತ ದಳದ ಆಯುಕ್ತ, ಕೇಂದ್ರ ಮಾಹಿತಿ ಆಯುಕ್ತ ಸಿಬಿಐ ನೇಮಕಾತಿಯಲ್ಲಿ ಖರ್ಗೆ ಅವರನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ಪರಿಗಣಿಸಲಾಗಿತ್ತು. ಹೀಗಾಗಿ ಅವರಿಗೆ ವೈ ಕ್ಯಾಟಗರಿ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Write A Comment