ಮುಂಬೈ

ಭೂಮಿಯಿಂದ ಆಕಾಶಕ್ಕೆ ಅಪ್ಪಳಿಸುವ ದೂರವ್ಯಾಪ್ತಿಯ ಬರಾಕ್-8 ಕ್ಷಿಪಣಿ ಯಶಸ್ವಿ ಉಡಾವಣೆ

Pinterest LinkedIn Tumblr

barakಮುಂಬೈ,ಡಿ.30-ಭೂಮಿಯಿಂದ ಆಕಾಶಕ್ಕೆ ಅಪ್ಪಳಿಸುವ ದೂರ ವ್ಯಾಪ್ತಿಯ ಬರಾಕ್-8 ಕ್ಷಿಪ್ಪಣಿಯನ್ನು ಭಾರತೀಯ ನೌಕಾಪಡೆಯ ಐಎಸ್‌ಎಸ್ ಕೋಲ್ಕತಾದಿಂದ ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ರಕ್ಷಣಾಕ್ಷೇತ್ರಕ್ಕೆ ಇದರಿಂದ ಆನೆಬಲ ಬಂದಂತಾಗಿದೆ.

ಅತ್ಯಂತ ವೇಗದಿಂದ ಚಲಿಸುವ 2ಕ್ಷಿಪಣಿಗಳನ್ನು ನಿನ್ನೆ ಮತ್ತು ಇಂದು ಯಶಸ್ವಿಯಾಗಿ ಉಡಾಯಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ನೌಕಾಪಡೆ ತಾಲೀಮು ನಡೆಸುವ ವೇಳೆ ಉಡಾಯಿಸಲಾಯಿತು ಎಂದು ರಕ್ಷಣಾ ಪಡೆ ವಕ್ತಾರರೊಬ್ಬರು ತಿಳಿಸಿದ್ದಾರೆ.

ನೌಕಾಪಡೆಗೆ ವಿಶಿಷ್ಟ ಸಾಮರ್ಥ್ಯ ನೀಡುವ ಈ ಕ್ಷಿಪಣಿ ಉಡಾವಣೆ ಭಾರತೀಯ ನೌಕಾಪಡೆಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟನೆಯಾಗಿದೆ ಎಂದು ಅವರು ಹೇಳಿದ್ದಾರೆ.

Write A Comment