ರಾಷ್ಟ್ರೀಯ

ಕೇರಳದ ಶಿವಗಿರಿ ಮಠಕ್ಕೆ ಸೋನಿಯಾ ಗಾಂಧಿ ಭೇಟಿ, ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ

Pinterest LinkedIn Tumblr

sonia-gandhiವರ್ಕಾಲ: ವರ್ಕಾಲದಲ್ಲಿರುವ ಶಿವಗಿರಿ ಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಸಮಾಜ ಸುಧಾರಕ ನಾರಾಯಣ ಗುರುಗಳ ಪರಂಪರೆಯ ಮೇಲೆ ಕೋಮುವಾದಿಗಳಿಂದ ಹಕ್ಕು ಪ್ರತಿಪಾದನೆ ಮಾಡುವ ಯತ್ನ ನಡೆದಿದೆ, ನಾರಾಯಣ ಗುರುಗಳ ಬೋಧನೆಗಳನ್ನು ಕೋಮುವಾದವನ್ನು ಬಿತ್ತುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ವರ್ಕಾಳದಲ್ಲಿರುವ ಶಿವಗಿರಿ ಮಠದಲ್ಲಿ 83 ನೇ ವಾರ್ಷಿಕ ತೀರ್ಥಯಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಅಧಿಕಾರಕ್ಕಾಗಿ ಕೋಮು ಸಿದ್ಧಾಂತಗಳನ್ನು ಹೇರುತ್ತಿರುವವರು ನಾರಾಯಣ ಗುರುಗಳಂತಹ ಪರಂಪರೆಯ ಮೇಲೆ ಹಕ್ಕು ಪ್ರತಿಪಾದನೆ ಮಾಡಲು ಯತ್ನಿಸುತ್ತಿದ್ದಾರೆ, ಅದಕ್ಕಿಂತ ಧ್ರೋಹ ಮತ್ತೊಂದಿಲ್ಲ ಎಂದು ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಈಳವ ಸಮುದಾಯದವರು ಹೆಚ್ಚಿರುವ ಶ್ರೀ ನಾರಾಯಣ ಧರ್ಮ ಪರಿಪಾಲನ ಸಂಗಮ್ ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶಿವಗಿರಿ ಮಠಕ್ಕೆ ಈಳವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸುವವರಾಗಿದ್ದು ಸೋನಿಯಾ ಗಾಂಧಿ ಈಳವ ಸಮುದಾಯದವರ ಪ್ರಮುಖ ಸಂಘಟನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

Write A Comment