ರಾಷ್ಟ್ರೀಯ

ಗುಜರಾತ್ ಸಾಹಿತಿ ರಘುವೀರ್ ಚೌಧರಿಗೆ ಜ್ಞಾನಪೀಠ ಪ್ರಶಸ್ತಿ

Pinterest LinkedIn Tumblr

raghuveer-chaudhariನವದೆಹಲಿ: ಖ್ಯಾತ ಗುಜರಾತ್ ಸಾಹಿತಿ ರಘುವೀರ್ ಚೌಧರಿ ಅವರಿಗೆ 51ನೇ ಜ್ಞಾನಪೀಠ ಪ್ರಶಸ್ತಿಯನ್ನು ಬುಧವಾರ ಘೋಷಣೆ ಮಾಡಲಾಗಿದೆ.

71 ವರ್ಷದ ರಘುವೀರ್ ಚೌಧರಿ ಅವರು ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅತ್ಯಮೂಲ್ಯ ಕೊಡುಗೆಯನ್ನು ಪರಿಗಣಿಸಿರುವ ಜ್ಞಾನಪೀಠ ಆಯ್ಕೆ ಮಂಡಳಿಯು ಚೌಧರಿಯವರನ್ನು ಆಯ್ಕೆ ಮಾಡಿದೆ.

1938ರಲ್ಲಿ ಜನಿಸಿದ ಚೌಧರಿ ಅವರು ಜ್ಞಾನಪೀಠ ಪ್ರಶಸ್ತಿ ಪಡೆದ 4ನೇ ಗುಜರಾತ್ ಸಾಹಿತಿಯಾಗಿದ್ದಾರೆ. ಇದಕ್ಕೂ ಮುನ್ನ ಉಮಾ ಶಂಕರ್ (1967), ಪನ್ನಾಲಾಲ್ ಪಟೇಲ್ (1985) ಹಾಗೂ ರಾಜೇಂದ್ರ ಶಾ (2001) ಅವರಿಗೆ ಜ್ಞಾನಪೀಠ ಲಭಿಸಿತ್ತು. ಕಾದಂಬರಿಕಾರ, ಕವಿ, ವಿಮರ್ಶಕ, ಸಮಕಾಲೀನ ಗುಜರಾತ್ ಸಾಹಿತ್ಯದಲ್ಲಿ ಜನಪ್ರಿಯ ವ್ಯಕ್ತಿತ್ವವನ್ನು ಚೌಧರಿ ಅವರು ಹೊಂದಿದ್ದಾರೆ.

Write A Comment