ಮನೋರಂಜನೆ

2015 ಭಾರತೀಯ ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ತಂದುಕೊಟ್ಟ ವರ್ಷ ವರ್ಷ…

Pinterest LinkedIn Tumblr

kri2015 ಭಾರತೀಯ ಕ್ರೀಡಾಪಟುಗಳಿಗೆ ಸುಯೋಗ ವರ್ಷವೇ ಸರಿ. ಕ್ರಿಕೆಟ್, ಹಾಕಿ, ಟೆನ್ನಿಸ್, ಬಾಕ್ಸಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಕ್ರೀಡಾಪಟುಗಳು ಉತ್ತಮ ಪ್ರದರ್ಶನವನ್ನೇ ತೋರಿದ್ದಾರೆ.

* ಟೆನ್ನಿಸ್ ಲೋಕದ ದಿಗ್ಗಜ ಸಾನಿಯಾಮಿರ್ಜಾಗೆ ಕಳೆದ ವರ್ಷ ಟೆನ್ನಿಸ್ ಲೋಕದ ಸ್ವರ್ಣ ಯುಗವಾಗೇ ಪರಿಣಮಿಸಿತು. ಅವರು 2015ರಲ್ಲಿ ಮಾರ್ಟಿನಾ ಹಿಂಗೀಸ್ ಜೊತೆಗೂಡಿ ಎರಡು ಗ್ರ್ಯಾಂಡ್ ಸ್ಲಮ್ ಮುಕುಟಗಳನ್ನ್ನೂ ಮುಡಿಗೇರಿಸಿಕೊಂಡಿದ್ದಲ್ಲದೆ ಒಟ್ಟು 10 ಟೂರ್ನಿ ಪ್ರಶಸ್ತಿಗಳನ್ನು ಬಾಚಿಕೊಂಡು ನಂಬರ್ 1 ಟೆನ್ನಿಸ್ ಆಟಗಾರ್ತಿಯಾಗಿ ಗುರುತಿಸಿಕೊಂಡರು. ಅಲ್ಲದೆ ಸಾನಿಯಾಗೆ ಕೇಲ್‌ರತ್ನ ಪ್ರಶಸ್ತಿಯೂ ಲಭಿಸಿತು.

*ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾನೆಹವಾಲ್ ಈ ವರ್ಷ ಇಂಡಿಯನ್ ಓಪನ್ ಸೀರಿಸ್ ಹಾಗೂ ಸೈಯದ್ ಮೋದಿ ಗ್ರ್ಯಾಂಡ್ ಪ್ರಶಸ್ತಿ, ಅಲ್ ಇಂಗ್ಲೆಂಡ್, ಚೈನಾ ಸೂಪರ್ ಪ್ರೀಮಿಯರ್ , ವಿಶ್ವ ಬ್ಯಾಡ್ಮಿಂಟನ್ ಸೀರಿಸ್‌ನಲ್ಲಿ ವಿಜೇತಳಾಗುವ ಮೂಲಕ ವಿಶ್ವದ ನಂ.1 ಆಟಗಾರ್ತಿಯಾಗಿ ರೂಪುಗೊಂಡರು.

ಇವರು 2015ರಲ್ಲಿ ತರಬೇತುದಾರ ಪಿ.ಗೋಪಿಚಂದ್‌ರನ್ನು ತ್ಯಜಿಸಿ ಕನ್ನಡಿಗ ವಿಮಲ್‌ಕುಮಾರ್‌ರ ಬಳಿ ತರಬೇತಿ ಪಡೆದದ್ದು ಅವರ ಯಶಸ್ಸಿಗೆ ಪ್ರಮುಖ ಕಾರಣವಾಯಿತು.

* ಟೆನ್ನಿಸ್ ಮಾಂತ್ರಿಕ ಲಿಯಾಂಡರ್ ಪೇಸ್, ಸ್ವಿಸ್‌ನ ಮಾರ್ಟಿನಾ ಹಿಂಗಿಸ್‌ರೊಂದಿಗೆ 3 ಗ್ರ್ಯಾಂಡ್ ಮಿಕ್ಸ್ಡ್ ಡಬಲ್ಸ್ ( ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಚಾಂಪಿಯನ್ಸ್ , ಯುಎಸ್ ಓಪನ್) ವಿನ್ನರ‌ಸ್ಿಗರಾದರಲ್ಲದೆ 700 ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗಳಿಸಿದ ಕೀರ್ತಿಗೆ ಭಾಜನರಾದರು.

* ಬ್ಯಾಡ್ಮಿಂಟನ್ ಆಟಗಾರರಾದ ಪಿ.ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ರಿಂದ ಉತ್ತಮ ಪ್ರದರ್ಶನ. ಸಿಂಧು ಮಾಕೌವ್ ಓಪನ್ ಸೇರಿದಂತೆ ಹ್ಯಾಟ್ರಿಕ್ ಪ್ರಶಸ್ತಿಗೆ ಪಾತ್ರರಾದರೆ, ಶ್ರೀಕಾಂತ್ ಸ್ವಿಸ್ ಓಪನ್ ಹಾಗೂ ಇಂಡಿಯನ್ ಓಪನ್ ಟೂರ್ನಿಯಲ್ಲಿ ಜಯಿಸಿದರು.

* ರಿಯೋ ಒಲಂಪಿಕ್ಸ್‌ನಲ್ಲಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿಗೆ ಕಂಚು, ಅರ್ಚರಿ ವಿಶ್ವಕಪ್‌ನಲ್ಲಿ ದೀಪಿಕಾ, ಲಕ್ಷ್ಮೀರಾಣಿ ಮಜ್ನಿ ಹಾಗೂ ರಿಮಿಲ್‌ರೊಂದಿಗೆ ಉತ್ತಮ ಪ್ರದರ್ಶನ ತೋರಿ ಬೆಳ್ಳಿ ಪದಕ ಸಾಧನೆ ಮತ್ತು ಬ್ಯಾಂಕಾಕ್‌ನಲ್ಲಿ ನಡೆದ ಏಷಿಯಾನ್ ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಕಂಚು ಪ್ರಶಸ್ತಿ ಬಾಚಿಕೊಂಡರು.

* ವೃತ್ತಿ ಪರ ಬಾಕ್ಸಿಂಗ್‌ಗೆ ಪಾದಾರ್ಪಣೆ ಮಾಡಿದ ಖ್ಯಾತ ಬಾಕ್ಸಿಂಗ್ ಪಟು ವಿಜೇಂದರ್ ಅವರು ಅಕ್ಟೋಬರ್‌ನ ನಂತರ ಆಡಿದ 3 ವೃತ್ತಿಪರ ಪಂದ್ಯದಲ್ಲಿ ನಾಕೌಟ್ ಗೆಲುವು ಸಾಧಿಸಿದರು.
* 2015ರಲ್ಲಿ ರಾಷ್ಟ್ರೀಯ ಕ್ರೀಡೆಯಾದ ಹಾಕಿಯಲ್ಲಿ ಮಹಿಳಾ ಹಾಗೂ ಪುರುಷ ಕ್ರೀಡಾಪಟುಗಳು ಉತ್ತಮ ಪ್ರದರ್ಶನವನ್ನೇ ತೋರಿಸಿದರು. ತವರಿನಲ್ಲಿ ನಡೆದ ಹಾಕಿ ವಿಶ್ವ ಲೀಗ್ ಫೈನಲ್‌ನಲ್ಲಿ ಕಂಚು, ಎಫ್‌ಐಎಚ್ ಟೂರ್ನಿಯಲ್ಲಿ ಪದಕ, ಅಜ್ಲಾನ್ ಷಾ ಟೂರ್ನಿಯಲ್ಲಿ ಸರ್ದಾರ್ ಸಿಂಗ್ ಪಡೆ ಕಂಚು ಪ್ರಶಸ್ತಿ ಗೆದ್ದು ಬೀಗಿದರೆ, ಜೂನಿಯರ್ ತಂಡವು ಏಷ್ಯಾಕಪ್ ಹಾಗೂ ಸುಲ್ತಾನ್ ಜೋಹರ್ ಕಪ್‌ನಲ್ಲಿ ಗೆಲುವು ಸಾಧಿಸಿತು. ಇನ್ನು ಮಹಿಳಾ ಹಾಕಿ ಪಟುಗಳು 35 ವರ್ಷಗಳ ನಂತರ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡು ಎಲ್ಲರ ಗಮನ ಸೆಳೆದರು.

* ಬಿಲಿಯರ್ಡ್ಸ್‌ನಲ್ಲಿ ನಂಬರ್ 1 ಚಾಂಪಿಯನ್ ಆಟಗಾರ ಎಂದೇ ಗುರುತಿಸಿಕೊಂಡಿರುವ ಪಂಕಜ್ ಅಡ್ವಾಣಿಗೂ 2015 ವರ್ಷ ಸುವರ್ಣ ವರ್ಷವಾಗಿ ಪರಿಣಮಿಸಿದೆ. ಅವರು ಈ ವರ್ಷ ನ್ಯಾಷನಲ್ ಬಿಲಿಯರ್ಡ್ಸ್ , ಸ್ನೂಕರ್ ಚಾಂಪಿಯನ್ಸ್ , ವರ್ಲ್ಡ್ 6 ರೆಡ್ ಸ್ನೂಕರ್ ಚಾಂಪಿಯನ್‌ಷಿಪ್, ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಷ್‌ಗಳಲ್ಲಿ ಚಾಂಪಿಯನ್ ಆಗುವ ಮೂಲಕ ಮತ್ತೊಮ್ಮೆ ಚಿನ್ನದ ಹುಡುಗನಾಗಿ ಬಿಂಬಿಸಿಕೊಂಡರು.

* ಈಜು ಪಟು ಸಜನ್ ಪ್ರಕಾಶ್ 35ನೇ ರಾಷ್ಟ್ರೀಯ ಕ್ರೀಡಾಸ್ಪರ್ಧೆಯಲ್ಲಿ 6 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಚಿನ್ನದ ಹುಡುಗನಾಗಿ ವಿಜೃಂಭಿಸಿದರು.
ಆದರೆ ರಾಜ್ಯ ಕ್ರಿಕೆಟ್ ತಂಡ 2015ರಲ್ಲಿ ನಿರಾಸೆ ಅನುಭವಿಸಿದಂತೆ ಕನ್ನಡಿಗ ಅಥ್ಲೀಟ್ಸ್ ಗಳು ಕೂಡ ಉತ್ತಮ ಪ್ರದರ್ಶನವನ್ನು ನೀಡದಿದ್ದರೂ ಎಂ.ಆರ್.ಪೂವಮ್ಮ ಮತ್ತು ಪ್ಯಾರಾ ಈಜುಪಟು ಶರತ್ ಗಾಯಕ್ವಾಡ್‌ಗೆ ಅರ್ಜುನ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ಸಂಗತಿಯಾಗಿದೆ.

Write A Comment