ಕನ್ನಡ ವಾರ್ತೆಗಳು

ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾದ ಮೂಡುಬಿದಿರೆಯ ಕಾರ್ತಿಕ್

Pinterest LinkedIn Tumblr

karthik_mudabidre_photo

ಮೂಡುಬಿದಿರೆ,ಡಿ.31 : ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2015-16 ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ರಾಜ್ಯಮಟ್ಟದ ಬಾಲಕರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮೂಡುಬಿದಿರೆಯ ಕಾರ್ತಿಕ್ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಇಲ್ಲಿನ ಪ್ರಾಂತ್ಯದ ಸರ್ಕಾರಿ ಪ್ರೌಢ ಶಾಲೆಯ 8  ನೇತರಗತಿಯ ವಿದ್ಯಾರ್ಥಿಯಾಗಿರುವ ಈತ 2016 ರ ಜನವರಿ 3 ರಿಂದ ದೆಹಲಿಯಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾನೆ.

ಈಗಾಗಲೇ ಮೂಡುಬಿದಿರೆ ವಲಯ, ದ.ಕ ಜಿಲ್ಲೆ , ಮೈಸೂರು ವಿಭಾಗ ಮತ್ತು ಕರ್ನಾಟಕ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳನ್ನು ಗೆದ್ದಿರುವ ಕಾರ್ತಿಕ್ ವಾಲ್ಪಾಡಿಯ ಪಾಪುಲಡಿ ಮನೆಯ ತಿಮ್ಮಪ್ಪ ದೇವಾಡಿಗ -ಗಿರಿಜ ದಂಪತಿಯ ಸುಪುತ್ರ.

ಆರ್ಥಿಕ ಸಂಕಷ್ಟದಿಂದ ಮೂಡುಬಿದಿರೆಯ ಪ್ರಾಂತ್ಯದಲ್ಲಿರುವ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಂಡಿರುವ ಈತನಿಗೆ ರಾಷ್ಟೀಯ ಯೋಗಾಸನ ತೀರ್ಪುಗಾರ ಬಾಲಕೃಷ್ಣ ರೇಖ್ಯ ( ಸಂಪರ್ಕ: 9901474771) ಮಾರ್ಗದರ್ಶನ ನೀಡುತ್ತಿದ್ದಾರೆ.

Write A Comment