ರಾಷ್ಟ್ರೀಯ

ಪ್ರಧಾನಿ ಮೊದಿ ನಿವಾಸಕ್ಕಿಂತ ದೊಡ್ಡದು ಸೋನಿಯಾಗಾಂಧಿ ಬಂಗಲೆ..!

Pinterest LinkedIn Tumblr

modi_sonia

ನವದೆಹಲಿ, ಡಿ.31: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸಕ್ಕಿಂತಲೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಬಂಗಲೆಯೇ ದೊಡ್ಡದಾಗಿರುವುದು ಬೆಳಕಿಗೆ ಬಂದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ 7 ರೇಸ್‌ಕೋರ್ಸ್ ರಸ್ತೆಯಲ್ಲಿ ಸರ್ಕಾರದ ವತಿಯಿಂದ ನಿವಾಸವೊಂದನ್ನು ನೀಡಲಾಗಿದೆ. ಯಾರೇ ಪ್ರಧಾನಿಯಾದರೂ ಇಲ್ಲೆಯೇ ವಾಸ್ತವ್ಯ ಹೂಡಬೇಕು. ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನಿವಾಸ 14,101 ಚದುರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಜನ್‌ಪತ್10 ನಲ್ಲಿರುವ ಸೋನಿಯಾಗಾಂಧಿ ಅವರ ಬಂಗಲೆ ಪ್ರಧಾನಿ ನಿವಾಸಕ್ಕಿಂತಲೂ ವಿಸ್ತೀರ್ಣದಲ್ಲಿ ದೊಡ್ಡದಾಗಿದೆ.

ಅಂದರೆ, ಸೋನಿಯಾ ಅವರ ಬಂಗಲೆಯ ವಿಸ್ತೀರ್ಣ 15,181 ಚದುರ ಅಡಿಯಲ್ಲಿದೆ. ದೇಶದ ಪ್ರಧಾನಿ ನಿವಾಸಕ್ಕಿಂತಲೂ ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ನಿವಾಸ ಹೆಚ್ಚು ವಿಸ್ತೀರ್ಣ ಹೊಂದಿದೆ. ದೇಶದಲ್ಲೇ ಅತಿ ದೊಡ್ಡ ಬಂಗಲೆ ಹೊಂದಿರುವುದು ಪ್ರಥಮ ಪ್ರಜೆ ಎನಿಸಿಕೊಂಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಸುಮಾರು 320 ಎಕರೆಯಲ್ಲಿ ತಲೆ ಎತ್ತಿರುವ ರಾಷ್ಟ್ರಪತಿ ಭವನವನ್ನು ಅವರ ಅಧಿಕೃತ ವಾಸಕ್ಕಾಗಿ ನೀಡಲಾಗಿದೆ.

ಇದನ್ನು ಹೊರತುಪಡಿಸಿದರೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಗೆ ಮೌಲಾನಾ ಆಜಾದ್ ರಸ್ತೆಯಲ್ಲಿ ಸುಮಾರು 26,333 ಚದುರು ಅಡಿಯಲ್ಲಿ ನಿವಾಸವನ್ನು ನೀಡಲಾಗಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿಯನ್ನು ಹೊರತುಪಡಿಸಿದರೆ ಅತಿ ದೊಡ್ಡ ಬಂಗಲೆಯನ್ನು ಹೊಂದಿರುವ ಹೆಗ್ಗಳಿಕೆ ಸೋನಿಯಾ ಗಾಂಧಿಗೆ ಸಲ್ಲುತ್ತದೆ. ದೇಶದ ಅತಿ ಗಣ್ಯ ವ್ಯಕ್ತಿಗಳ ಪಟ್ಟಿಯಲ್ಲಿ ಅವರು ಇರುವುದರಿಂದ ಈ ಬಂಗಲೆಯನ್ನು ನೀಡಲಾಗಿದೆ.

ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್‌ಟಿಟಿ ಭಯೋತ್ಪಾದಕರು ಹತ್ಯೆ ಮಾಡಿದ ನಂತರ ಸೋನಿಯಾ ಮತ್ತು ಅವರ ಕುಟುಂಬದವರಿಗೆ ದೇಶದ ಅತ್ಯುನ್ನತ ಎಸ್‌ಪಿಜಿ ಭದ್ರತೆಯನ್ನು ಒದಗಿಸಲಾಗುತ್ತದೆ.

Write A Comment