ಅಂತರಾಷ್ಟ್ರೀಯ

ಈಜಿಪ್ಟ್ ನಲ್ಲಿ ಫೇಸ್ ಬುಕ್ ಫ್ರೀ ಬೇಸಿಕ್ಸ್ ರದ್ದು

Pinterest LinkedIn Tumblr

facebook-free-basisಕೈರೋ: ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ಸ್ ಭಾರತದಲ್ಲಿ ಚರ್ಚೆ ನಡೆದು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆಯಾಗುತ್ತಿದ್ದರೆ, ಈಜಿಪ್ಟ್ ನಲ್ಲಿ ಫೇಸ್ ಬುಕ್ ನ ಫ್ರೀ ಬೇಸಿಕ್ಸ್(ಫ್ರೀ ಇಂಟರ್ ನೆಟ್) ನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

ಈಜಿಪ್ಟ್ ಅಧಿಕಾರಿಗಳು ಫ್ರೀ ಬೇಸಿಕ್ಸ್ ನ ರದ್ದುಗೊಳಿಸುವುದಕ್ಕೆ ಇನ್ನಷ್ಟೇ ಕಾರಣ ನೀಡಬೇಕಿದೆಯಾದರೂ, ಈಜಿಪ್ಟ್ ನಲ್ಲಿ ಫೇಸ್ ಬುಕ್ ನ ಪಾಲುದಾರನಾಗಿರುವ ಟೆಲಿಕಾಂ ಸಂಸ್ಥೆ ಎಟಿಸಲಾಟ್, ಫೇಸ್ ಬುಕ್ ನ ಉಚಿತ ಇಂಟರ್ ನೆಟ್ ಸೇವೆಯನ್ನು ರದ್ದುಗೊಳಿಸಿದೆ.

ಫೇಸ್ ಬುಕ್ ನ ಮಾಹಿತಿ ಪ್ರಕಾರ ಈಜಿಪ್ಟ್ ನಲ್ಲಿ ಮೂರು ದಶಲಕ್ಷ ಜನರು ಫ್ರೀ ಬೇಸಿಕ್ಸ್ ಗಾಗಿ ಸೈನ್ ಅಪ್ ಮಾಡಿದ್ದರು. ಈ ಮೂರು ದಶಲಕ್ಷ ಜನರ ಪಿಕಿ ಒಂದು ದಶಲಕ್ಷ ಜನರು ಮೊದಲ ಬಾರಿಗೆ ಇಂಟರ್ ನೆಟ್ ಬಳಕೆ ಮಾಡುವ ಸೌಲಭ್ಯ ಪಡೆದಿದ್ದರು. ಈಜಿಪ್ಟ್ ನಲ್ಲಿ ಫ್ರೀ ಬೇಸಿಕ್ಸ್ ನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವ ವಿಷಯ ಶೀಘ್ರವೇ ಬಗೆಹರಿಯಲಿದೆ ಎಂದು ಫೇಸ್ ಬುಕ್ ವಿಶ್ವಾಸ ವ್ಯಕ್ತಪಡಿಸಿದೆ.

Write A Comment