ರಾಷ್ಟ್ರೀಯ

ಅಗ್ರಿಗೋಲ್ಡ್‌ ಆಸ್ತಿ ಹರಾಜಿಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್

Pinterest LinkedIn Tumblr

agri-goldಹೈದರಾಬಾದ್‌: ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿರುವ ಅಗ್ರಿಗೋಲ್ಡ್‌ ಕಂಪೆನಿಯ ಆಸ್ತಿ ಹರಾಜು ಮಾಡಲು ಹೈದರಾಬಾದ್‌ ಹೈಕೋರ್ಟ್‌ ಆದೇಶ ನೀಡಿದೆ.

ಸರ್ಕಾರ ಮುಟ್ಟುಗೋಲು ಹಾಕಿರುವ 3,500 ಕೋಟಿ ರೂಪಾಯಿ ಮೌಲ್ಯದ ಖಾಲಿ ಜಾಗಕಟ್ಟಡಗಳು ಮತ್ತು ಇತರ ಆಸ್ತಿಯನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಲು ಕೋರ್ಟ್‌ ಆದೇಶ ನೀಡಿದೆ.

ಆಂಧ್ರ ,ಕರ್ನಾಟಕ ಮತ್ತು ತಮಿಳುನಾಡಿನಲ್ಲಿರುವ ಅಗ್ರಿಗೋಲ್ಡ್‌ ಕಂಪೆನಿಯ ಆಸ್ತಿಯ ಇ- ಹರಾಜು ಪ್ರಕ್ರಿಯೆ ಫೆಬ್ರವರಿ 10 ರಿಂದ ನಡೆಸಬೇಕಾಗಿದೆ. ಇ- ಹರಾಜಿನ ಹೊಣೆಯನ್ನು 3 ಕಂಪೆನಿಗಳಾದ ಎಂಎನ್‌ಪಿಸಿ, ವಿ ಆಕ್ಷನ್‌ ಪ್ರೈ .ಲಿ. ಮತ್ತು ಶ್ರೀರಾಮ್‌ ಮಾಲ್ಸ್‌ ಪ್ರೈ .ಲಿ ಕಂಪೆನಿಗೆ ನೀಡಲಾಗಿದೆ.

25 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದ ಅಗ್ರಿ ಗೋಲ್ಡ್‌ ಸಂಸ್ಥೆ ಡಿಪಾಸಿಟ್‌, ಪಿಗ್ಮಿ ಸೇರಿದಂತೆ ಹಲವು ಯೋಜನೆಗಳನ್ನು ಎಜೆಂಟರುಗಳ ಮೂಲಕ ನಡೆಸಿ ಇದೀಗ ಪಾಪರ್‌ಚೀಟಿ ನೀಡಿ ಸಂಸ್ಥೆ ಬಾಗಿಲು ಮುಚ್ಚಿದೆ.

ಗ್ರಾಹಕರಿಗೆ 6.500 ಕೋಟಿ ಹಣ ನೀಡಬೇಕಾಗಿದೆ. ಆದರೆ ಪ್ರತಿನಿಧಿಗಳು ಮಾತ್ರ ಗ್ರಾಹಕರಿಗೆ ಹಣ ನೀಡಲಾಗದೇ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ.

Write A Comment