ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಪ್ರೀತಿ ಬಗ್ಗೆ ಈ ಹಿಂದೆಯೇ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿರುವುದು ಹಳೆಯ ವಿಚಾರ. ಐಶ್ವರ್ಯಾಳಿಗಾಗಿ ಸಲ್ಮಾನ್ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದಾರೆ. ಇಷ್ಟಾದರೂ ಸಲ್ಮಾನ್ ಮಾತ್ರ ಐಶ್ವರ್ಯಾಳನ್ನು ಬಿಟ್ಟುಕೊಡ್ತಿಲ್ಲ.
ಹೌದು. ಸಲ್ಮಾನ್ ಖಾನ್ ಐಶ್ವರ್ಯಾ ಜೊತೆಗೆ ಬ್ರೇಕ್ಅಪ್ ಮಾಡಿಕೊಂಡ ಮೇಲೆ ಕತ್ರಿನಾ ಜೊತೆಗೆ ಹೊಸ ಲವ್ ಶುರುಮಾಡಿದ್ದರು. ಇದೂ ಬ್ರೇಕ್ಅಪ್ ಆದ ನಂತರ, ಸಲ್ಮಾನ್ ಕತ್ರಿನಾ ಹೆಸರನ್ನು ಬಳಸಿಕೊಂಡು ಮಾಧ್ಯಮಗಳ ಸಂದರ್ಶನದಲ್ಲಿ ಸಿಕ್ಕಾಪಟ್ಟೆ ಗೇಲಿ ಮಾಡಿದ್ದಾರೆ. ಆದರೆ ಐಶ್ವರ್ಯಾಳ ಬಗ್ಗೆ ಸಲ್ಮಾನ್ ಈ ರೀತಿಯಾಗಿ ಮಾಡಿಲ್ಲ ಜೊತೆಗೆ ಮಾಡುವುದೂ ಬೇಡವೆಂದು ಸಲ್ಮಾನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಸಲ್ಮಾನ್ ನಟನೆಯ ಹಮ್ ದಿಲ್ ದೇ ಚುಕೆ ಸನಮ್ ಚಿತ್ರತಂಡ ಹಾಜರಾಗಿತ್ತಂತೆ. ಈ ಸಂದರ್ಭದಲ್ಲಿ ಸಲ್ಮಾನ್ ಗೆಳೆಯರು ಐಶ್ವರ್ಯಾಳ ಬಗ್ಗೆ ಚಿತ್ರತಂಡ ಗೇಲಿ ಮಾಡಿ ನಗುತ್ತಿದ್ದರಂತೆ. ಈ ವೇಳೆ ಸಿಟ್ಟಿಗೆದ್ದ ಸಲ್ಮಾನ್ ಐಶ್ವರ್ಯಾ ಕುರಿತು ಯಾವುದೇ ಜೋಕ್ ಮಾಡಬೇಡಿ ಈ ವಿಚಾರದ ಬಗ್ಗೆ ಚರ್ಚಿಸಬೇಡಿ ಎಂದು ಎಚ್ಚರಿಕೆ ನೀಡಿದರಂತೆ.