ಕರ್ನಾಟಕ

ರು.6.18 ಕೋಟಿ ಮೌಲ್ಯದ ಕಳ್ಳ ಮಾಲು ವಶ

Pinterest LinkedIn Tumblr

abharana

ಬೆಂಗಳೂರು: ಕಳೆದೊಂದು ವರ್ಷದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಉತ್ತರ ವಿಭಾಗದ ಪೊಲೀಸರು 496 ಪ್ರಕರ ಣಗಳಿಗೆ ಸಂಬಂಧಿಸಿ 328 ಆರೋಪಿ ಗಳನ್ನು ವಶಕ್ಕೆ ಪಡೆದು, ಸುಮಾರು ರು.6,18 ಕೋಟಿಗೂ ಅಧಿಕ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್, ಮನೆಗಳವು, ಕನ್ನ, ಕೊಲೆ, ದರೋಡೆ, ಸುಲಿಗೆ, ಸರಗಳ್ಳತನ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ 496 ಅಪರಾಧ ಪ್ರಕರಣ ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಗಳಿಂದ 10 ಕೆ.ಜಿ. 889 ಗ್ರಾಂ ತೂಕದ ಚಿನ್ನಾಭರಣಗಳು, 16 ಕೆ.ಜಿ. 905 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳು, ರು.41,38,900 ನಗದು, 200 ದ್ವಿಚಕ್ರ ವಾಹನಗಳು, 4 ತ್ರಿಚಕ್ರ ವಾಹನಗಳು, 29 ನಾಲ್ಕು ಚಕ್ರದ ವಾಹನಗಳು ಹಾಗೂ 8 ಲ್ಯಾಪ್‍ಟಾಪ್, 87 ಮೊಬೈಲ್ ಪೊೀನ್, ಟಿವಿ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಕಳೆದ ಒಂದು ವರ್ಷದಲ್ಲಿ ಉತ್ತರ ವಿಭಾಗದಲ್ಲಿ 36 ಕೊಲೆ, 6 ದರೋಡೆ, 26 ಸುಲಿಗೆ, 37 ಸರಗಳ್ಳತನ, 97 ಮನೆಗಳ್ಳತನ, 179 ವಾಹನ ಕಳ್ಳತನ, 74 ಇತರೆ ಕಳವು, 31 ಮೊಬೈಲ್ ಕಳವು ಸೇರಿದಂತೆ ಒಟ್ಟು 486 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.

Write A Comment