ನೈನಿತಾಲ್: ತಮ್ಮ ಕಂಪನಿಯ ಅಂತಿಮ ಹಂತದ ವಾಚುಗಳನ್ನು ತಯಾರಿಸುವುದಕ್ಕಾಗಿ ರಾಣಿಭಾಗ್ನಲ್ಲಿ ಹೆಚ್ಎಂಟಿ ಕಂಪೆನಿ ಮತ್ತೆ ಪುನರಾರಂಭಗೊಂಡಿದೆ.
5,500 ವಾಚುಗಳನ್ನು ತಯಾರಿಸಿ ಕೊಡುವಂತೆ ಬೆಂಗಳೂರು ಕಚೇರಿಯಿಂದ ಕೋರಿಕೆ ಲಭಿಸಿದ ಕಾರಣ ಮುಚ್ಚಿದ್ದ ಕಂಪನಿ ಮತ್ತೆ ತೆರೆದಿದೆ. ರು. 1.5 ಕೋಟಿಯ ಕೋರಿಕೆ ಕಂಪನಿಗೆ ಲಭಿಸಿದೆ. ಎರಡು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಕಂಪನಿಯಲ್ಲೀಗ ಮತ್ತೆ ಕೆಲಸ ಶುರುವಾಗಿದೆ. ಮಾರ್ಚ್ನಲ್ಲಿ ಈ ವಾಚ್ ತಯಾರಿ ಪೂರ್ಣಗೊಳ್ಳಲಿದೆ ಎಂದು ಹೆಚ್ಎಂಟಿ ಅಧಿಕೃತರು ಹೇಳಿದ್ದಾರೆ.