ಮನೋರಂಜನೆ

ರಾಷ್ಟ್ರ ಪ್ರಶಸ್ತಿ ಪಡೆದ ನಂತರ ನಟನೆಗೆ ಶಾರುಖ್ ವಿದಾಯ

Pinterest LinkedIn Tumblr

sharuk

ನವದೆಹಲಿ: ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದ ಕೂಡಲೇ ನಾನು ನಟನೆಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದ್ದಾರೆ.

ತಮ್ಮ ಮಹತ್ವಾಕಾಂಕ್ಷೆಯ ‘ಫ್ಯಾನ್’ ಚಿತ್ರದಲ್ಲಿ ದ್ವಿಪಾತ್ರದ ಕುರಿತು ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫ್ಯಾನ್ ಸಿನಿಮಾದಲ್ಲಿ ೨೪ರ ಹರೆಯದ ಅಭಿಮಾನಿ ಹಾಗೂ ಸೂಪರ್ ಸ್ಟಾರ್ ನಟನ ಪಾತ್ರಗಳನ್ನು ಏಕ ಕಾಲಕ್ಕೆ ನಿಭಾಯಿಸುವುದು ತೀರಾ ಸವಾಲಿನದ್ದಾಗಿತ್ತು.

ಅದೂ ಈ ವಯಸ್ಸಿನಲ್ಲಿ ಹರೆಯದ ಹುಡುಗನಂತೆ ಕಾಣಲು ಪ್ರತಿದಿನ ಗಂಟೆಗಟ್ಟಲೆ ಪ್ರೊಸ್ತೆಟಿಕ್ಸ್ ಮೇಕಪ್‌ಗೆ ಒಳಗಾಗುವುದು ಯಾತನಾದಾಯಕವಾಗಿತು ಹಾಗೇ ಅದೊಂದು ಹುಚ್ಚು ಖುಷಿಯ ಅನುಭವ ಕೂಡ ಎಂದು ಹೇಳಿದ್ದಾರೆ. ಅಲ್ಲದೆ ರಾಷ್ಟ್ರ ಪ್ರಶಸ್ತಿ ನನ್ನ ಕನಸು ಎಂದೂ ಹೇಳಿದ್ದಾರೆ. ಹಾಗಾಗಿ ನಾನೀಗ ರಾಷ್ಟ್ರ ಪ್ರಶಸ್ತಿಗಾಗಿ ಕಾದಿದ್ದು, ಆ ಪ್ರಶಸ್ತಿ ಪಡೆದ ದಿನ ನಟನೆಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ.

ಅಲ್ಲದೇ ಚಿತ್ರದಲ್ಲಿ ದೆಹಲಿ ಹುಡುಗನ ಪಾತ್ರ ನಿರ್ವಹಿಸಿರುವುದಕ್ಕೆ ಸಂತಸ ತಂದಿದೆ. ಇನ್ನು ಮುಂದೆ ಕೂಡ ಮತ್ತೆ ಅದೇ ಪಾತ್ರಗಳನ್ನು ಮಾಡಲು ಮನಸು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.

Write A Comment