ಅಂತರಾಷ್ಟ್ರೀಯ

ಮನೆ ಮದ್ದು ಏಲಕ್ಕಿ…ಏಲಕ್ಕಿಯ ಕಣ ಕಣದಲ್ಲೂ ಶಕ್ತಿ, ಸತ್ವ ಅಡಗಿದೆ

Pinterest LinkedIn Tumblr

yelakki

ಏಲಕ್ಕಿ ಸಂಬಾರ ಪದಾರ್ಥಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕೆಲ ಸಮಾರಂಭಗಳಲ್ಲಿ ಗಣ್ಯರನ್ನು ಸನ್ಮಾನಿಸುವಾಗ ಏಲಕ್ಕಿ ಹಾರ ಹಾಕಿ ಗೌರವಿಸುವುದು ಒಂದು ಸಂಪ್ರದಾಯ.

ಇಂತಹ ಏಲಕ್ಕಿ ಹಲವು ರೋಗಗಳಿಗೆ ಪರಿಹಾರ ನೀಡುವ ಸಾಮರ್ಥ್ಯ ಹೊಂದಿದೆ. ಆಯುರ್ವೇದದಲ್ಲಂತೂ ಏಲಕ್ಕಿಗೆ ವಿಶೇಷ ಮಹತ್ವ ಇದೆ. ಏಲಕ್ಕಿಯನ್ನು ಹೆಚ್ಚಿನ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಏಲಕ್ಕಿ ಹಾಕಿ ಮಾಡಿದ ಟೀ ಅಂತೂ ಹಲವರ ಜನಪ್ರಿಯ ಪೇಯ. ಏಲಕ್ಕಿಯ ಕಣ ಕಣದಲ್ಲೂ ಶಕ್ತಿ, ಸತ್ವ ಅಡಗಿದೆ.

ಈಗಿನ ಯಾಂತ್ರಿಕ ಯುಗದಲ್ಲಿ ಒತ್ತಡ ಎಲ್ಲರನ್ನೂ ಕಾಡುತ್ತದೆ. ಒತ್ತಡ, ಮಾನಸಿಕ ಖಿನ್ನತೆ ಸಾಮಾನ್ಯ ಎನಿಸಿದೆ. ಡಿಪ್ರೇಷನ್ ದೂರವಾಗಬೇಕು ಅಂದ್ರೆ ಮನೆಯಲ್ಲಿ ಪರಿಮಳಯುಕ್ತವಾದ ಒಂದು ಏಲಕ್ಕಿ ಮಾಲೆಯನ್ನು ಇಡಬೇಕು. ಅಡುಗೆ ಮನೆಯ ಸಾಂಬಾರ ಡಬ್ಬದಲ್ಲಿ ಏಲಕ್ಕಿ ಇಡುವ ಬದಲು, ಏಲಕ್ಕಿ ಸುವಾಸನೆ ಎಲ್ಲೆಡೆ ಇಡಿ ಅದರ ಘಮಲು ಡಿಪ್ರೇಷನನ್ನು ಕಡಿಮೆ ಮಾಡುತ್ತದೆ.

ಸಿಹಿ ಇರುವ ಕಡೆ ಇರುವೆ ಬರುವುದು ಸಹಜ. ಸಿಹಿಯ ಡಬ್ಬಿಗೆ ಒಂದು ಏಲಕ್ಕಿ ಹಾಕಿ ಇಟ್ಟರೆ ಇರುವೆಗಳು ಆ ಕಡೆ ಸುಳಿಯುವುದಿಲ್ಲ. ಸೊಳ್ಳೆ, ಕೀಟಗಳ ನಿಯಂತ್ರಣಕ್ಕೆ ಏಲಕ್ಕಿ ಸಹಕಾರಿ.

ಏಲಕ್ಕಿ ಕ್ಯಾನ್ಸರ್ ತಡೆಗಟ್ಟುವಲ್ಲಿ ನೆರವಾಗುತ್ತೆ ಎಂಬುದು ಈಗಾಗಲೇ ಸಂಶೋಧನೆಗಳಿಂದ ತಿಳಿದಿರುವ ಸತ್ಯ. ಮನೆಯ ವಾತಾವರಣದ ಗಾಳಿಯಲ್ಲಿ ಏಲಕ್ಕಿಯ ಸ್ವಾದ ಪಸರಿಸಿದ್ರೆ ಖಂಡಿತ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗುತ್ತದೆ.

ಅಸ್ತಮಾಕ್ಕೂ ಏಲಕ್ಕಿ ರಾಮಬಾಣವಾಗಿ ಕೆಲಸ ಮಾಡುತ್ತೆ. ಅಸ್ತಮಾ ಖಾಯಿಲೆ ಇರುವವರಿಗೆ ಉತ್ತಮ ಉಸಿರಾಟಕ್ಕೆ ಏಲಕ್ಕಿ ನೆರವಾಗುತ್ತದೆ.

ವಾಂತಿ, ತಲೆ ಸುತ್ತು ನಿಯಂತ್ರಿಸಲು ಏಲಕ್ಕಿ ಸಹಕಾರಿ. ಗರ್ಭಿಣಿಯರಿಗೆ ವಾಂತಿ, ತಲೆ ಸುತ್ತುವಿಕೆ ಇದ್ದಲ್ಲಿ ಏಲಕ್ಕಿ ಪರಿಮಳ ಸೇವಿಸಿದ್ರೆ ನಿಯಂತ್ರಣಕ್ಕೆ ಬರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆಹಾರದ ಏರುಪೇರಿನಿಂದ ಸಹ ವಾಂತಿ, ತಲೆ ಸುತ್ತುವಿಕೆ ಸಮಸ್ಯೆ ಇದ್ದಾಗಲೂ ಏಲಕ್ಕಿ ಸೇವನೆಯಿಂದಲೂ ಇದರ ನಿಯಂತ್ರಣ ಸಾಧ್ಯ.

ಪ್ರತಿಯೊಬ್ಬರ ಮನೆಯಲ್ಲೂ ಧನಾತ್ಮಕ (ಪಾಸಿಟೀವ್) ಶಕ್ತಿ ಕೇವಲ ವಾಸ್ತು ಪ್ರಕಾರ ಮನೆ ಕಟ್ಟಿದಾಗ ಮಾತ್ರವಲ್ಲ, ಬದಲಾಗಿ ಹೇಗೆ ಮನೆಯನ್ನು ಸ್ವಚ್ಛ ಮತ್ತು ಸುಂದರವಾಗಿ ಇಟ್ಟುಕೊಂಡಿದ್ದೀರಿ ಅನ್ನುವುದರ ಮೇಲೂ ನಿರ್ಧಾರಿತವಾಗುತ್ತೆ. ಮನೆಯಲ್ಲಿ ಏಲಕ್ಕಿ ಮಾಲೆ ಇದ್ದರೆ ಧನಾತ್ಮಕ ಶಕ್ತಿಗೆ ಕೊರತೆಯೇ ಇರಲ್ಲ.

Write A Comment