ಅಂತರಾಷ್ಟ್ರೀಯ

ಕೂದಲ ಆರೋಗ್ಯ ವೃದ್ಧಿಗೆ ಸ್ಟ್ರಾಬೆರಿ ಹಣ್ಣು…

Pinterest LinkedIn Tumblr

2

ಹಣ್ಣುಗಳು ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಎಂಬುದರಲ್ಲಿ ಎರಡು ಮಾತಿಲ್ಲ, ಕೂದಲು, ಚರ್ಮ, ಮತ್ತು ದೇಹದ ಸಂಪೂರ್ಣ ಸ್ವಾಸ್ಥ್ಯ ಕಾಪಾಡುವಲ್ಲಿ ಹಣ್ಣುಗಳ ಪಾತ್ರ ಪ್ರಮುಖವಾದದ್ದು. ಎಲ್ಲಾ ರೀತಿಯ ಹಣ್ಣುಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತೆ.

ಕೂದಲುದುರುವ ಸಮಸ್ಯೆ, ತಲೆಹೊಟ್ಟು ಯಾವ ಮಹಿಳೆಯರಿಗೆ ಇರಲ್ಲ ಹೇಳಿ. ಆದರೆ ಅಚ್ಚರಿಯ ವಿಷಯ ಏನೆಂದರೆ ಕೂದಲುದುರುವಿಕೆ ತಡೆಗೆ ಸ್ಟ್ರಾಬೆರಿ
ಹಣ್ಣು ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಗಲಾರದು.
ಕೂದಲುದುರುವುದು ಮಹಿಳೆಯರಿಗೆ ಕಾಡುವ ಒಂದು ಸಾಮಾನ್ಯ ಸಮಸ್ಯೆ ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಕಬ್ಬಿಣದ ಅಂಶವನ್ನು ಹೀರಿಕೊಂಡು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಯಾರು ಪ್ರತಿದಿನವೂ ನನ್ನ ಕೂದಲು ಅಷ್ಟು ಉದುರಿತು ಇಷ್ಟು ಉದುರಿತು ಅಂತ ಚಿಂತಿಸಿ
ಬೇಸತ್ತಿದ್ದೀರೋ ಅಂತವರಿಗಾಗಿ ಇರುವ ಪರಿಹಾರ ಸ್ಟ್ರಾಬೆರಿ ಹೇರ್ ಪ್ಯಾಕ್.
ಪ್ಯಾಕ್ ಮಾಡುವ ವಿಧಾನ
*ಎರಡು ಸ್ಟ್ರಾಬೆರಿ ಹಣ್ಣುಗಳು
*ಕೊಬ್ಬರಿ ಎಣ್ಣೆ – ಐದು ಚಮಚ
*ಜೇನುತುಪ್ಪ – ಒಂದು ಚಮಚ
*ಸ್ಟ್ರಾಬೆರಿ ಹಣ್ಣುಗಳನ್ನು ಮೊದಲು ಚೆನ್ನಾಗಿ ಕಲಸಿಕೊಳ್ಳಿ, ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ,

ಸರಿಯಾದ ಸಮಯಕ್ಕೆ ತಲೆ ಹೊಟ್ಟುಗೆ ಚಿಕಿತ್ಸೆ ಮಾಡದೇ ಇದ್ರೆ ಅದು ಮುಂದೆ ನಿಮ್ಮ ಕೂದಲಿಗೆ ವಿಪರೀತ ಹಾನಿ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.ಸ್ಟ್ರಾಬೆರಿಯಲ್ಲಿರುವ ನ್ಯೂಟ್ರಿಯಂಟ್ ಗಳು ನಿಮ್ಮ ಕೂದಲಿಗೆ ಸರಿಯಾದ ಪೋಷಣೆ ನೀಡಿ ಆರೋಗ್ಯಯುತವಾಗಿ ಮಾಡುವುದು ಅಲ್ಲದೇ, ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತೆ.
*ಮೂರರಿಂದ ನಾಲ್ಕು ಸ್ಟ್ರಾಬೆರಿ
*ಒಂದು ಮೊಟ್ಟೆಯ ಬಿಳಿಯ ಭಾಗ
*ಕೆಲವು ಹನಿಗಳಷ್ಟು ಆಲಿವ್ ಆಯಿಲ್
ಸ್ಟ್ರಾಬೆರಿಯನ್ನು ಚೆನ್ನಾಗಿ ಪೇಸ್ಟ್ ಮಾಡ್ಕೊಳ್ಳಿ. ಅದಕ್ಕೆ ಮೊಟ್ಟೆಯ ಬಿಳಿಯ ಭಾಗ ಮತ್ತು ಆಲಿವ್ ಆಯಿಲ್
ಕೂದಲಿನಲ್ಲಿ ಬೆಳವಣಿಗೆ ಹೊಂದುವುದನ್ನು ನಿಯಂತ್ರಿಸುತ್ತದೆ.

ಸ್ಟ್ರಾಬರಿಯಲ್ಲಿ ಮೆಗ್ನೀಷಿಯಂ ಅಂಶಗಳು ಹೇರಳವಾಗಿರುತ್ತೆ.ಸ್ಟ್ರಾಬೆರಿಯನ್ನು ಹೆಚ್ಚಾಗಿ ಆಯಿಲಿ ಮತ್ತು ಗ್ರೀಸಿಯಾಗಿರುವ ಕೂದಲಿಗೆ ಬಳಕೆ ಮಾಡಲಾಗುತ್ತೆ.ಮಾಯ್ಚರೈಸರ್ ಗಳನ್ನು ಬಳಕೆ ಮಾಡದೇ ಹಾಗೆಯೇ ಕೇವಲ ಸ್ಟ್ರಾಬೆರಿ ಹಾಕಿ ಪ್ಯಾಕ್ ತಯಾರಿಸಿಕೊಂಡ್ರೆ ಕೂದಲು ಹೆಚ್ಚು ಡ್ರೈ ಆಗುವ ಸಾಧ್ಯತೆ ಇರುತ್ತೆ.
*ಸ್ಟ್ರಾಬೆರಿ – ಐದರಿಂದ ಆರು ಹಣ್ಣುಗಳು
*ಅವಕಾಡೋ ಪೇಸ್ಟ್ – ಒಂದು ಹಣ್ಣಿನ ತಿರುಳು
*ಕೊಬ್ಬರಿ ಎಣ್ಣೆ – ಮೂರರಿಂದ ನಾಲ್ಕು ಚಮಚ
ಜೇನುತುಪ್ಪ- ಒಂದು ಚಮಚ

ಮೊದಲು ಸ್ಟ್ರಾಬೆರಿ ಹಣ್ಣುಗಳನ್ನು ಚೆನ್ನಾಗಿ ಪೇಸ್ಟ್ ಮಾಡ್ಕೊಳ್ಳಿ. ಅದ್ರ ಜೊತೆಗೆ ಚೆನ್ನಾಗಿ ಬಲಿತಿರುವ ಅವಕಾಡೋ ಅಥ್ವಾ ಬೆಣ್ಣೆಹಣ್ಣನ್ನು ತೆಗೆದುಕೊಂಡು ಅದ್ರ ತಿರುಳನ್ನು ಚೆನ್ನಾಗಿ ಕಲಸಿಕೊಳ್ಳಿ, ಈ ಎರಡು ಪೇಸ್ಟನ್ನು ಮಿಕ್ಸ್ ಮಾಡಿ. ನಂತ್ರ ಅದಕ್ಕೆ ಕೊಬ್ಬರಿ ಎಣ್ಣೆ ಇಲ್ಲವೇ ನಿಮ್ಗೆ ಇಷ್ಟವಾಗಿರುವ ಬೇರೆ ಯಾವುದೇ ಎಣ್ಣೆ ಉದಾಹರಣೆಗೆ ಹರಳೆಣ್ಣೆ, ಆಲಿವ್ ಆಯಿಲ್ ನ್ನೂ ಕೂಡ ಸೇರಿಸಿಕೊಳ್ಳಬಹುದು. ಜೇನುತುಪ್ಪ ಒಂದು ಸ್ಪೂನ್ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕೂದಲಿನ ಸ್ಕ್ಯಾಲ್ಪ್ ಗೆ ಮತ್ತು ಕೂದಲಿಗೆ ಲೇಪಿಸಿ ೨೦ ರಿಂದ ೩೦ ನಿಮಿಷ ಹಾಗೆಯೇ ಬಿಡಿ. ನಂತ್ರ ಹದವಾಗಿರುವ ಬಿಸಿನೀರಿನಲ್ಲಿ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ನಿಮ್ಮ ತಲೆಯಲ್ಲಿ ಕೂದಲ ಬೆಳವಣಿಗೆ ಹೊಂದಿ ಕೂದಲಿಗೆ ಆಗುವ ಹಾನಿ ನಿಯಂತ್ರಣಕ್ಕೆ ಬರುತ್ತೆ.

Write A Comment