ರಾಷ್ಟ್ರೀಯ

ಪಾಕ್ ಕುರಿತು ಕೇಂದ್ರ ಸರ್ಕಾರದ ನಿಲುವಿನಿಂದ ಗೊಂದಲ ಸೃಷ್ಟಿ

Pinterest LinkedIn Tumblr

22CHIDAMBARAM

ನವದೆಹಲಿ: ನರೇಂದ್ರ ಮೋದಿ ಸರ್ಕಾರಕ್ಕೆ ಪಾಕಿಸ್ತಾನದ ಬಗ್ಗೆಯಿರುವ ನೀತಿ ಗೊಂದಲದಿಂದ ಕೂಡಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

ಪಾಕಿಸ್ತಾನದ ಬಗ್ಗೆ ನಿಲುವು ಸ್ಪಷ್ಟವಾಗಿರಬೇಕು. ಆದರೆ ಅಲ್ಲಿ ಯು ಟರ್ನ್ ಅಥವಾ ತರಾತುರಿಯ ನಿರ್ಧಾರಗಳು ಸಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದ್ದಾರೆ.

ಅದೇ ವೇಳೆ ನೇಪಾಳಕ್ಕೆ ಭಾರತದ ಮೇಲಿದ್ದ ವಿಶ್ವಾಸವೂ ಹೋಗಿದೆ ಎಂದಿದ್ದಾರೆ. ದೆಹಲಿಯ ಸಮ ಬೆಸ ಸಂಖ್ಯೆ ವಾಹನ ಚಾಲನೆ ನಿಯಮದ ಬಗ್ಗೆ ಮಾತನಾಡಿದ ಅವರು, ನಾನು ಈ ನಿಯಮವನ್ನು ಬೆಂಬಲಿಸುತ್ತೇನೆ. ಹೃಸ್ವಕಾಲ ಈ ನಿಯಮಗಳನ್ನು ಜಾರಿಗೆ ತರುವುದರಿಂದ ಜನರ ನಡವಳಿಕೆಯಲ್ಲಿ ಬದಲಾವಣೆ ತರಬಹುದು.

ಅಷ್ಟೇ ಅಲ್ಲ ಪ್ರಧಾನಿಯವರ ವಿದೇಶ ಪ್ರವಾಸಗಳ ಬಗ್ಗೆ ದೇಶದ ಜನರೇನೂ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಆರ್ಥಿಕ ನೀತಿಯ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ಯಾವುದೇ ಯೋಜನೆಗಳು ಫಲಪ್ರದವಾಗಿಲ್ಲ. 2015ರಲ್ಲಿ ದೇಶದ ಜಿಡಿಪಿ ಶೇ. 8.1-8.5 ಏರಿಕೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಕಳೆದ ವರ್ಷ ಜಿಡಿಪಿ ಶೇ.7-7.5 ಕ್ಕಿಂತ ಏರಿಕೆಯಾಗಿಲ್ಲ.

ಅಧಿಕಾರಕ್ಕೇರಿದಾಗ ಹೆಚ್ಚಿನ ಉದ್ಯೋಗ, ಹೆಚ್ಚಿನ ಹೂಡಿಕೆ ಮತ್ತು ಹೆಚ್ಚಿನ ಅಭಿವೃದ್ಧಿಯ ಬಗ್ಗೆ ಸರ್ಕಾರ ಮಾತು ನೀಡಿತ್ತು. ಆದರೆ ಈ ಮಾತನ್ನು ಸರ್ಕಾರ ಪೂರೈಸಲೇ ಇಲ್ಲ ಎಂದು ಚಿದಂಬರಂ ಹೇಳಿದ್ದಾರೆ.

Write A Comment