ಕರ್ನಾಟಕ

ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಮನೆಗೂ ಎಲ್‌ಪಿಜಿ ಸೌಲಭ್ಯ

Pinterest LinkedIn Tumblr

LPG

ನವದೆಹಲಿ: 2016ರನ್ನು ಎಲ್‌ಪಿಜಿ ಗ್ರಾಹಕರ ವರ್ಷ ಎಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಅದೇ ವೇಳೆ 2018ರ ಅಂತ್ಯದಲ್ಲಿ ಎಲ್ಲ ಮನೆಗೂ ಎಲ್‌ಪಿಜಿ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.

2016 ಎಲ್‌ಪಿಜಿ ಗ್ರಾಹಕರ ವರ್ಷವಾಗಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್‌ಪಿಜಿ ಲಭ್ಯವಾಗುವಂತೆ ಮತ್ತು ಸೌಲಭ್ಯ ಕಲ್ಪಿಸುವಂತೆ ಮಾಡಲಾಗುವುದು. ಮುಂಬರುವ ಮೂರು ವರ್ಷಗಳಲ್ಲಿ ಅಂದರೆ 2016, 2017 ಮತ್ತು 2018ರಲ್ಲಿ ದೇಶದಾದ್ಯಂತ ಜನರಿಗೆ ಅಡುಗೆ ಅನಿಲ ಪೂರೈಸಲಾಗುವುದು ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಎಲ್‌ಪಿಜಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಹಕರಿಸಲು ತುರ್ತು ಸಹಾಯವಾಣಿ ಸಂಖ್ಯೆ 1906 ನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾಸ್ ಸೋರಿಕೆ ಮೊದಲಾದ ಸಮಸ್ಯೆಗಳೆದುರಾದಾಗ ಸಹಾಯವಾಣಿ ಸಂಖ್ಯೆಗೆ ಗ್ರಾಹಕರು ಕರೆ ಮಾಡಿ ಸಹಾಯ ಪಡೆಯಬಹುದು ಎಂದಿದ್ದಾರೆ.

ಇನ್ಮುಂದೆ ಸಹಾಯವಾಣಿ ಸಂಖ್ಯೆಯನ್ನು ಟೋಲ್ ಫ್ರೀಂ ಮಾಡಲಾಗುವುದು ಆದರೆ ಸದ್ಯ ಸಹಾಯವಾಣಿಗೆ ಕರೆ ಮಾಡುವವರಿಗೆ ದೂರವಾಣಿ ಕರೆಯ ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಪ್ರಧಾನ್ ಹೇಳಿದ್ದಾರೆ.

Write A Comment