ಕನ್ನಡ ವಾರ್ತೆಗಳು

ಅಭಿವೃದ್ಧಿಯತ್ತ ಬೈಂದೂರು; ರಸ್ತೆ-ಸೇತುವೆ, ನೀರಾವರಿ ಕಾಮಗಾರಿಗಳಿಗೆ 39ಕೋಟಿ 37ಲಕ್ಷ ಮಂಜೂರು

Pinterest LinkedIn Tumblr

Byndoor_Development_Gopal Poojary (3)

ಕುಂದಾಪುರ: ಶಾಸಕನಾದ ಮೇಲೆ ಬೈಂದೂರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಪ್ರಾಮಾಣಿಕವಾದ ಕೆಲಸಗಳನ್ನು ಮಾಡಿದ್ದೇನೆ. ಇದರ ಫಲವಾಗಿಯೇ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2015-16ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ 24  ಕಾಮಗಾರಿಗಳಿಗೆ 23.22 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ 3 ಕಾಮಗಾರಿಗಳಿಗೆ 15 ಕೋಟಿ, ಶಿಕ್ಷಣ ಇಲಾಖೆಯಿಂದ 1.15 ಕೋಟಿ ಅನುದಾನ ಮಂಜೂರಾಗಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.

ಬೈಂದೂರಿನ ಶಾಸಕರ ಕಛೇರಿಯಲ್ಲಿ ಶನಿವಾರ ಬಳಿಗ್ಗೆ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.

Byndoor_Development_Gopal Poojary (2)

Byndoor_Development_Gopal Poojary (1)

ಬೈಂದೂರಿಗೆ ಅಗ್ನಿಶಾಮಕ ಠಾಣೆ: ಬೈಂದೂರಿಗೆ ಅಗ್ನಿಶಾಮಕ ಠಾಣೆ ಅನಿವಾರ್ಯತೆಯ ಬಗ್ಗೆ ಸಾರ್ವಜನಿಕರಿಂದ ಹಲವು ವರ್ಷಗಳಿಂದ ಬೇಡಿಕೆಯಿತ್ತು. 2015-16 ನೇ ಸಾಲಿನಲ್ಲಿ ಬೈಂದೂರು ಸಭಾ ಕ್ಷೇತ್ರದ ವ್ಯಾಪ್ತಿಗೆ ಮಂಜುರಾಗಿದ್ದು, ಅಗ್ನಿಶಾಮಕ ಠ್ಠಾಣೆಯನ್ನು ಬೈಂದೂರು ಭಾಗದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ . ಅಲ್ಲದೇ 2015-16 ನೇ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿಗೆ ತರಗತಿ ಕೊಠಡಿ ರಚನೆ ಮತ್ತು ಪ್ರಯೋಗಾಲಯಕ್ಕೆ ರೂ 115.00 ಲಕ್ಷ(1.15 ಕೋಟಿ) ಮಂಜೂರಾಗಿದೆ.

ಪತ್ರಿಕಾಗೋಷ್ಟಿಯಲ್ಲಿ ತಾ.ಪಂ. ಸದಸ್ಯರಾದ ರಾಜು ಪೂಜಾರಿ, ರಮೇಶ್ ಗಾಣಿಗ, ಮಾಜಿ ತಾ.ಪಂ. ಸದಸ್ಯ ವಿಜಯ ಶೆಟ್ಟಿ ಮೊದಲಾದವರಿದ್ದರು.

ಬೈಂದೂರು ಕ್ಷೇತ್ರಕ್ಕೆ ಕೋಟಿ-ಕೋಟಿ:
ಲೋಕೋಪಯೋಗಿ ಇಲಾಖೆಯ 24 ಕಾಮಗಾರಿಗೆ ಒಟ್ಟು ವೆಚ್ಚ 23 ಕೋಟಿಯ 22 ಸಾವಿರ
೧. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ತೊಂಬಟ್ಟು – ಬಾಗೀಮನೆ ಎಂಬಲ್ಲಿ ವಾರಾಹಿ ಹೊಳೆಗೆ ಸೇತುವೆ ನಿರ್ಮಾಣಕ್ಕೆ 3 ಕೋಟಿ 80 ಲಕ್ಷ
೨. ಕುಂದಾಪುರ ತಾಲೂಕು ಕೊಡ್ಲಾಡಿ ಗ್ರಾಮದ ಹೊಲದಮನೆ ಎಂಬಲ್ಲಿ ಕಿ.ಮೀ 0.20 ರಲ್ಲಿ ಕುಬ್ಜ ನದಿಗೆ ಸೇತುವೆ ನಿರ್ಮಾಣಕ್ಕೆ 3 ಕೋಟಿ
೩. ಕುಂದಾಪುರ ತಾಲೂಕು ಬೈಂದೂರು ಹಳೇ ಎಂಬಿಸಿ ರಸ್ತೆಯ ಕಿಮೀ 0.00 ರಿಂದ 1.40 ಮತ್ತು 2.00 ರಿಂದ 2.80 ರವರೆಗೆ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ (ಮಾಸ್ತಿಕಟ್ಟೆ – ರಾಹುತನಕಟ್ಟೆ ರಸ್ತೆ)-2 ಕೋಟಿ 60 ಲಕ್ಷ
೪. ಕುಂದಾಪುರ ತಾಲೂಕು ವಂಡ್ಸೆ-ಆಲೂರು-ಗುಜ್ಜಾಡಿ ರಸ್ತೆಯ ಕಿಮೀ 5.10 ರಿಂದ 11.30 ರವರೆಗೆ ಅಭಿವೃದ್ದಿಗೆ 2 ಕೋಟಿ 10 ಲಕ್ಷ
೫. ಕುಂದಾಪುರ ತಾಲೂಕು ಹಟ್ಟಿಯಂಗಡಿ – ಹಟ್ಟಿಕುದ್ರು ರಸ್ತೆಯ ಕಿಮೀ 0.00 ರಿಂದ 2.40 ರವರೆಗೆ ಅಭಿವೃದ್ದಿಗೆ 1 ಕೋಟಿ 50 ಲಕ್ಷ
೬. ಕುಂದಾಪುರ ತಾಲೂಕು ತಲ್ಲೂರು – ಉಪ್ಪಿನಕುದ್ರು ರಸ್ತೆಯ ಕಿಮೀ 3.00 ರಿಂದ 4.00 ರವರೆಗೆ ಅಭಿವೃದ್ದಿಗೆ 1 ಕೋಟಿ 50 ಲಕ್ಷ
೭. ಕುಂದಾಪುರ ತಾಲೂಕು ಹೆಮ್ಮಾಡಿ-ದೇವಲ್ಕುಂದ ರಸ್ತೆಯ ಕಿಮೀ 1.30 ರಿಂದ 4.55 ರವರೆಗೆ ಅಭಿವೃದ್ದಿಗೆ 1 ಕೋಟಿ 30 ಲಕ್ಷ
೮. ಕುಂದಾಪುರ ತಾಲೂಕು ನಾಗೂರು ಹಳೇ ಎಂಬಿಸಿ ರಸ್ತೆಯ ಕಿಮೀ 0.00 ರಿಂದ 0.80 ರವರೆಗೆ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 1 ಕೋಟಿ
೯. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ -66 ರಿಂದ ಒತ್ತಿನೆಣೆ ಸೂರ್ಯಾಸ್ತ ತಾಣದವರೆಗಿನ ಕೂಡು ರಸ್ತೆ ಅಭಿವೃದ್ಧಿಗೆ 1 ಕೋಟಿ
೧೦. ಕುಂದಾಪುರ ತಾಲೂಕು ಸಿದ್ಧಾಪುರ – ಹಳ್ಳಿಹೊಳೆ – ಜಡ್ಕಲ್ ರಸ್ತೆಯ ಕಿಮೀ 3.00 ರಿಂದ 5.00 ರವರೆಗೆ ಅಭಿವೃದ್ದಿಗೆ 90 ಲಕ್ಷ
೧೧. Reconstruction of Bridge at Km 0.60  of Old MBC Byndoor Road(ಸಂಕದಗುಂಡಿ ಹತ್ತಿರ)in  Kundapura Taluk, Udupi District 90 ಲಕ್ಷ
೧೨. ಕುಂದಾಪುರ ತಾಲೂಕು ಶೀರೂರು-ತೂದಳ್ಳಿ ರಸ್ತೆಯ ಕಿಮೀ. 5.00 ರಿಂದ 7.50 ರವರೆಗೆ ಅಭಿವೃದ್ದಿಗೆ 70 ಲಕ್ಷ
೧೩. ಕುಂದಾಪುರ ತಾಲೂಕು ವಿರಾಜಪೇಟೆ – ಬೈಂದೂರು ರಸ್ತೆ ಕಿ.ಮೀ 374.03 ರಲ್ಲಿ ಸೇತುವೆ (ಜಡ್ಕಲ್ ಹತ್ತಿರ) ಪುನರ್ ನಿರ್ಮಾಣಕ್ಕೆ 70 ಲಕ್ಷ
೧೪. ಕುಂದಾಪುರ ತಾಲೂಕು ಅಂಬಾಗಿಲು ಹಳೇ ಎಂಬಿಸಿ ರಸ್ತೆಯ ಕಿಮೀ 0.00 ರಿಂದ 0.40 ರವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 40 ಲಕ್ಷ
೧೫. ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಂಗರ್‌ಕಾನ್ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ 23 ಲಕ್ಷ.
೧೬. ಕುಂದಾಪುರ ತಾಲೂಕು ಕೊಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಲ್ಲಿಗದ್ದೆಯಿಂದ ಮೋಹನಹಕ್ಲು ಸಲಗೇರಿ ರಸ್ತೆ ಅಭಿವೃದ್ಧಿ 23ಲಕ್ಷ.
೧೭. ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ ಜಾಡಿ ಹಟ್ಟಿಯಂಗಡಿ ರಸ್ತೆಯಿಂದ ಅಂಡಾರಕಟ್ಟೆ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಅಭಿವೃದ್ಧಿಗೆ 20 ಲಕ್ಷದ 15 ಸಾವಿರ.
೧೮. ಕುಂದಾಪುರ ತಾಲೂಕು ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರಂಜಾಲು ಪರಿಶಿಷ್ಟ ಪಂಗಡ ಕಾಲಾನಿ ರಸ್ತೆ ಅಭಿವೃದ್ಧಿ 18 ಲಕ್ಷದ 47ಸಾವಿರ.

19. ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಜ್ಜಾಡಿ – ಗಂಗೊಳ್ಳಿ ಮುಖ್ಯ ರಸ್ತೆಯಿಂದ ಗುಜ್ಜಾಡಿ ನಾಯಕವಾಡಿ ಜನತಾ ಪರಿಶಿಷ್ಟ ಜಾತಿ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿಗೆ 17 ಲಕ್ಷದ 25ಸಾವಿರ .
೨೦. ಕುಂದಾಪುರ ತಾಲೂಕು ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊವಾಡಿ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ 17 ಲಕ್ಷದ 25ಸಾವಿರ.
೨೧.ಕುಂದಾಪುರ ತಾಲೂಕು ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೂದಳ್ಳಿ – ಹೊಸೂರು ರಸ್ತೆ ಅಭಿವೃದ್ಧಿಗೆ 17 ಲಕ್ಷದ 25ಸಾವಿರ.
೨೨. ಕುಂದಾಪುರ ತಾಲೂಕು ಬೈಂದುರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಸ್ರೆ – ಹುಲ್ಕಡ್ಕೆ ರಸ್ತೆ ಅಭಿವೃದ್ಧಿಗೆ 17 ಲಕ್ಷದ 25ಸಾವಿರ.
೨೩. ಕುಂದಾಪುರ ತಾಲೂಕು ಜಡ್ಕಲ್ ಗ್ರಾಮ ಪಂಚಾಯತ್ ಮೂದುರು ಗ್ರಾಮದ ನಾಗದ್ದೆ ಮುದ್ರಾಣಿಗುಡ್ಡೆ ಪರಿಶಿಷ್ಟ ಪಂಗಡದ ಕಾಲೊನಿ ರಸ್ತೆ ಅಭಿವೃದ್ಧಿಗೆ 17 ಲಕ್ಷದ 25ಸಾವಿರ.
೨೪. ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ ಗುಡ್ಡೆಯಂಗಡಿ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿ. ಹನ್ನೊಂದುವರೆ ಲಕ್ಷ.

2015-16 ನೇ ಸಾಲಿನಲ್ಲಿ ಬೈಂದೂರು ಸಭಾ ಕ್ಷೇತ್ರ ವ್ಯಾಪಿಯ ಸಣ್ಣ ನೀರಾವರಿ ಇಲಾಖೆಯಿಂದ ರೂ 15 ಕೋಟಿ ಅನುದಾನ ಮಂಜೂರಾಗಿದೆ.
೧. ಸೇನಾಪುರ ಗ್ರಾಮದ ಬಂಟ್ವಾಡಿ ಎಂಬಲ್ಲಿ ಕೊಲ್ಲೂರು ನದಿಗೆ ನಿರ್ಮಿಸಿರುವ ಉಪ್ಪು ನೀರು ತಡೆ ಅಣಿಕಟ್ಟಿಗೆ ಗೇಟ್ ನಿರ್ಮಾಣಕ್ಕೆ 12 ಕೋಟಿ.
೨. ಯಡ್ತರೆ ಗ್ರಾಮದ ಹಡವಿನಗದ್ದೆ ಎಂಬಲ್ಲಿ ಬ್ಯಾರೇಜ ನಿರ್ಮಾಣಕ್ಕೆ 1 ಕೋಟಿ 55 ಸಾವಿರ.
೩. ತೆಗ್ಗರ್ಸೆ ಗ್ರಾಮದ ಸೇಡಕುಳಿ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣಿಕಟ್ಟು ನಿರ್ಮಾಣಕ್ಕೆ 1 ಕೋಟಿ 45 ಸಾವಿರ.

ವರದಿ- ಯೋಗೀಶ್ ಕುಂಭಾಸಿ

Write A Comment