ಅಂತರಾಷ್ಟ್ರೀಯ

ಬಲಾಢ್ಯ ಸೇನೆಗೆ ಚೀನಾ ಸನ್ನದ್ಧ

Pinterest LinkedIn Tumblr

Soldiers from Chinese People's Liberation Army (PLA) Special Operations Forces march in formation during a training session at the 60th National Day Parade Village on the outskirts of Beijing in this September 15, 2009 file photo. China will beef up its military budget by 12.7 percent this year, the government said on March 4, 2011, a return to double-digit spending increases that will stir regional unease.   REUTERS/Joe Chan/Files (CHINA - Tags: MILITARY) CHINA OUT. NO COMMERCIAL OR EDITORIAL SALES IN CHINA

ಶಾಂಘೈ:`ಬಲಾಢ್ಯ ಸೇನೆ’ ಹೊಂದುವ ತನ್ನ ಕನಸಿನ ಈಡೇರಿಕೆಗಾಗಿ ಚೀನಾ ಬೃಹತ್ ಸೇನಾ ಪುನರ್ ರಚನೆಗೆ ಮುಂದಾಗಿದೆ.

2020ರ ವೇಳೆ ಅತ್ಯಂತ ಬಲಿಷ್ಠ ಸೇನೆ ಹೊಂದುವ ಹಿನ್ನೆಲೆಯಲ್ಲಿ ಅಧ್ಯಕ್ಷ ಕ್ಸಿಜಿನ್ ಪಿಂಗ್ ಸೇನೆ ಕುರಿತ ಪ್ರಮುಖ ನೀತಿಯನ್ನು ಶುಕ್ರವಾರ ಘೋಷಿಸಿದ್ದಾರೆ. ಇದರ ಭಾಗವಾಗಿ ತನ್ನ ಕ್ಷಿಪಣಿ ಕಾರ್ಯಾಚರಣೆಗಾಗಿಯೇ ಪ್ರತ್ಯೇಕ ಸೇನಾದಳ, ಕೇಂದ್ರ ವಿಭಾಗದಲ್ಲಿ ಸಂಯುಕ್ತ ಸೇನಾ ಕಮಾಂಡ್, ಎರಡನೇ ಯುದ್ಧ ವಿಮಾನ ವಾಹನ ನಿರ್ಮಾಣ ಸೇರಿವೆ.

ಚೀನಾ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರು ಹಾಗೂ ಪೀಪಲ್ಸ್ ಲಿಬರೇಷನ್ ಆರ್ಮಿಯ ಮುಖ್ಯಸ್ಥರೂ ಆಗಿರುವ ಕ್ಸಿಜಿನ್‌ಪಿಂಗ್ ಸೇನಾ ನವೀಕರಣ, ಸೈನಿಕರ ಸಂಖ್ಯೆ ಕಡಿತ, ಸೇನೆಗೆ ಉತ್ಕೃಷ್ಟ ತರಬೇತಿ, ಸೇನಾ ಪಡೆಯಲ್ಲಿ ಪ್ರತ್ಯೇಕ ರಾಕೆಟ್ ವಿಭಾಗ ಇತ್ಯಾದಿ ನೂತನ ಕ್ರಮಗಳಿಗೆ ಮುಂದಾಗಿದ್ದಾರೆ. ತನ್ನ ಸ್ವಾಮ್ಯದ ಸೌತ್ ಚೀನಾ ನೆರೆರಾಷ್ಟ್ರಗಳಿಂದ ಎದುರಾಗಿರುವ ಸವಾಲು ಎದುರಿಸುವುದು ಈ ಸೇನಾ ಪುನರ್ ನವೀಕರಣಕ್ಕೆ ಪ್ರೇರಣೆಯಾಗಿದೆ.

Write A Comment