ರಾಷ್ಟ್ರೀಯ

`ಅರ್ಧ ಕುಂಭಮೇಳ’ಕ್ಕೆ ಹರಿದ್ವಾರ್‍ದಲ್ಲಿ ವಿದ್ಯುಕ್ತ ಚಾಲನೆ

Pinterest LinkedIn Tumblr

kumbh-mela-

ಡೆಹರಾಡೂನ್: ಹಿಂದೂಗಳ ಪವಿತ್ರ ಆಚರಣೆಯಾದ `ಅರ್ಧ ಕುಂಭಮೇಳ’ಕ್ಕೆ ಇಂದು ಹರಿದ್ವಾರದಲ್ಲಿ ಗಂಗಾ ಆರತಿ ಬೆಳಗುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.

ಪ್ರತಿ ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗು ಪ್ರಯಾಗದಲ್ಲಿ ಆಚರಿಸುವ ‘ಅರ್ಧ ಕುಂಭಮೇಳ’ಕ್ಕೆ ಯಾವುದೇ ಆಡಚಣೆಯಾಗದೆ ಯಶಸ್ವಿಯಾಗಿ ನಡೆಯಲಿ ಎಂದು ಹರ್ ಕಿ ಪೌಸಿನಲ್ಲಿನ ಬ್ರಹ್ಮಕುಂಡದಲ್ಲಿ ಗಂಗಾ ಮಾತೆಗೆ ಪೂಜೆ ಸಲ್ಲಿಸಲಾಗಿದೆ ಎಂದು ಡಿಐಜಿ ಮಾರ್ತೋಲಿಯಾ ತಿಳಿಸಿದ್ದಾರೆ.

ಹರಿದ್ವಾರ ಈಗಾಗಲೇ ‘ಅರ್ಧ ಕುಂಭಮೇಳ’ಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ. ದೇಶದ ನಾನಾ ಪವಿತ್ರ ಕ್ಷೇತ್ರಗಳಲ್ಲಿ ಆರು ವರ್ಷಕ್ಕೊಮ್ಮೆ ಈ ಹಿಂದು ಧರ್ಮದ ಸಭಾ ಹಬ್ಬವನ್ನು ನಡೆಸಲಾಗುತ್ತದೆ.

ಕುಂಭಮೇಳದ ಅಂಗವಾಗಿ ಜನವರಿ 14ರ ಮಕರ ಸಂಕ್ರಾಂತಿಯ ದಿನದಂದು ಶಾಹಿ ಸ್ನಾನ (ರಾಜ ಸ್ನಾನ) ನಡೆಯಲಿದ್ದು ಅದರಲ್ಲಿ ಎಲ್ಲ ಅಖಾಡಗಳು ಭಾಗವಹಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರ ನಂತರ ಸರಣಿ ಸ್ನಾನಗಳು ಮೌನಿ ಅಮಾವಾಸ್ಯೆ ವಸಂತ ಪಂಚಮಿ ಮಾಘ ಪೂರ್ಣಿಮ ಮಹಾ ಶಿವರಾತ್ರಿ ಸೋಮವತಿ ಅಮಾವಾಸ್ಯೆ ಸೇರಿದಂತೆ ಏಪ್ರಿಲ್ 22ವರೆಗೂ ಅರ್ಧಕುಂಭ ಮೇಳ ನಡೆಯಲಿದೆ. ಅಲ್ಲದೇ ಬಾರಿ ಮೇಳದಲ್ಲಿ ಸುಮಾರು 5 ರಿಂದ 7 ಕೋಟಿ ಯಾತ್ರಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.

Write A Comment