ಕರ್ನಾಟಕ

ಜನ ಸಾಮಾನ್ಯರಿಗೂ ಲಭಿಸಲಿ ಮೊಬೈಲ್ ಆಪ್ ಸೇವೆ’

Pinterest LinkedIn Tumblr

cm

ಮೈಸೂರು: ಮೈ-ಸೂರು ಮೊಬೈಲ್ ಆಪ್ ಸೇವೆ ಜನಸಾಮಾನ್ಯರಿಗೆ ತಲುಪಲಿ ಎಂದು ಸಿ.ಎಂ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಧ್ಯಾಹ್ನ ಜಿ.ಪಂ ಸಭಾಂಗಣದಲ್ಲಿ ಜಿ.ಪಂ ವತಿಯಿಂದ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮೊಬೈಲ್ ಆಪ್ ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಮಾಹಿತಿ ತಂತ್ರಜ್ಞಾನದ ಇಂದಿನ ಯುಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಕ್ಷಣ ಮಾತ್ರದಲ್ಲಿ ಮಾಹಿತಿಗಳು ಮತ್ತು ಸೌಲಭ್ಯಗಳನ್ನು ಕುಳಿತಲ್ಲಿಯೇ ಪಡೆಯುವ ಅವಕಾಶಗಳನ್ನು ಕಲ್ಪಿಸಲಾಗಿದೆ. ಇಂದಿಗೂ ಸಹ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿಯ ಕೊರತೆಯಿಂದಾಗಿ ಸರ್ಕಾರ ಸಾರ್ವಜನಿಕರಿಗೆ ನೀಡುವ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ಲಭಿಸುತ್ತಿಲ್ಲ. ಸರ್ಕಾರದ ಕಾರ್ಯಕ್ರಮಗಳ ಕುರಿತು ಪೂರ್ಣ ಮಾಹಿತಿ ಸಾರ್ವಜನಿಕರಿಗೆ ಲಭ್ಯವಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ. ಇದಕ್ಕಾಗಿ ಮೈಸೂರು ಜಿ.ಪಂ ವತಿಯಿಂದ ಮೈ-ಸೂರು ಮೊಬೈಲ್ ಆಪ್ ವೃದ್ಧಿಪಡಿಸಲಾಗಿದೆ. ಇದೊಂದು ಶ್ಲಾಘನೀಯ ಕಾರ್ಯಕ್ರಮ ಎಂದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಸವಲತ್ತುಗಳ ಬಗ್ಗೆ ಇರುವ ಅಂತರವನ್ನು ನಿಲ್ಲಿಸುವ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಜನತೆ, ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಹ್ಯಾಂಡ್ ರೋಯ್ಡ್ ಮೊಬೈಲ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿರುವುದರಿಂದ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮಾಹಿತಿಗಳನ್ನೊಳಗೊಂಡ ಮೈ-ಸೂರು ಮೊಬೈಲ್ ಆಪ್ ಜನತೆಗೆ ವರದಾನವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಿ.ಪಂ ವತಿಯಿಂದ ನಿರ್ಮಿಸಲಾಗಿರುವ ಡಿ.ದೇವರಾಜ ಅರಸು ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರಸುರವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಜಿ.ಪಂ ಸದಸ್ಯರುಗಳ ಅವದಿ ಮುಗಿಯುವ ಹಂತದಲ್ಲಿದ್ದು, ಈ ತಿಂಗಳ 11 ರಂದು ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಲಿದೆ. ಬಹುತೇಕ ಫೆಬ್ರವರಿ ಮಾಹೆಯಲ್ಲಿ ಚುನಾವಣೆ ನಡೆಯಲಿದೆ. ನೀವು 5 ವರ್ಷಗಳಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳು ಜನಮಾನಸದಲ್ಲಿ ಉಳಿದಿದ್ದ ಪಕ್ಷದಲ್ಲಿ ಮತ್ತೆ ಪುನರ್ ಆಯ್ಕೆ ಆಗುವಿರಿ. ಮೀಸಲಾತಿಯಂತೆ ಕೆಲವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂದು ಉದ್ಘಾಟಿಸಿರುವ ಸಭಾಂಗಣ ಹೊಸದಾಗಿ ಚುನಾಯಿತರಾಗುವ ಸದಸ್ಯರುಗಳಿಗೆ ಲಭ್ಯವಾಗಲಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಾನು ಕಳೆದ ಒಂದು ವರೆ ವರ್ಷದಿಂದ ಪ್ರಗತಿ ಪರಿಶೀಲನಾ ಸಭೆಯನ್ನು ಕೆಲವು ಅನಿವಾರ್ಯ ಕಾರಣಗಳಿಂದಾಗಿ ನಡೆಸಲು ಸಾಧ್ಯವಾಗಿಲ್ಲ. ಬಹುತೇಕ ಮೈಸೂರು ಜಿಲ್ಲೆಯು ಪ್ರಗತಿ ಹೊಂದಿದೆ ಎಂಬ ಭಾವನೆ ನನಗೆ ಇದೆ. ಸದಸ್ಯರುಗಳಾದ ತಾವು ಪ್ರಜಾಪ್ರಭುತ್ವದಡಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದೇ ಆದಲ್ಲಿ ಪ್ರಗತಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಈ ಬಗ್ಗೆ ನೀವೇ ಆತ್ಮಾವಲೋಕನೆ ಮಾಡಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ತನ್ವೀರ್ ಸೇಠ್, ವಾಸು, ಸೋಮಶೇಖರ್, ಜಿ.ಪಂ ಅಧ್ಯಕ್ಷ ಪುಷ್ಪ ಅಮರನಾಥ್, ಉಪಾಧ್ಯಕ್ಷ ಮಾದಪ್ಪ ಸೇರಿದಂತೆ ಇನ್ನಿತರೆ ಸದಸ್ಯರು ಹಾಜರಿದ್ದರು.

Write A Comment