ಕರ್ನಾಟಕ

ಸಮ-ಬೆಸ ಸಂಚಾರ ನಗರದಲ್ಲೂ ಜಾರಿ

Pinterest LinkedIn Tumblr

subramananyapura  police quatres ingration  homeminister  parameswara   minister k j george  dg omprkash m las saravan    krishnappa

ಬೆಂಗಳೂರು: ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸಮ-ಬೆಸ ಸಂಖ್ಯೆ ವಾಹನ ಸಂಚಾರ ವ್ಯವಸ್ಥೆಯು ದೆಹಲಿಯಲ್ಲಿ ಯಶಸ್ವಿಯಾದರೆ ಅದನ್ನು ನಗರದಲ್ಲೂ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಸುಬ್ರಹ್ಮಣ್ಯಪುರ ಪೊಲೀಸ್ ನೂತನ ವಸತಿಗೃಹಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು,ಸಂಚಾರ ದೊತ್ತಡ ನಿವಾರಣೆ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಮ-ಬೆಸ ಸಂಖ್ಯೆ ವಾಹನ ಸಂಚಾರ ಒಳ್ಳೆಯದು ಎಂದರು.

ಆದರೆ ಸಮ ಬೆಸ ಸಂಖ್ಯೆಯ ವಾಹನ ಸಂಚಾರ ಪ್ರಾಯೋಗಿPವಾಗಿ ಜಾರಿ ಮಾಡಲಾಗಿದ್ದು ಒಂದು ದಿನಕ್ಕೆ ಅದನ್ನು ಯಶಸ್ವಿ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ದೆಹಲಿಯಲ್ಲಿ ಯಶಸ್ವಿಯಾದರೆ ನಗರದಲ್ಲೂ ಜಾರಿಗೆ ತರಲು ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.

ಗೃಹಯೋಜನೆ ಅಡಿಯಲ್ಲಿ ಪೊಲೀಸರಿಗ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ಹೊಸದಾಗಿ ೩೦೦೦ ವಸತಿಗೃಹಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಮೊದಲ ಹಂತವಾಗಿ ಸುಬ್ರಹ್ಮಣ್ಯಪುರದಲ್ಲಿ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.ಕಳೆದ ಮೂರು ತಿಂಗಳಿಂದ ಉದ್ಘಾಟನೆಗೊಳ್ಳದೇ ಜ್ಷಾನಭಾರತಿ,ಗಂಗಮ್ಮನಗುಡಿ,ಸಂಜಯನಗರ ಪೊಲೀಸ್ ಠಾಣೆಗಳನ್ನು ಹೊಸ ಕಟ್ಟಡಗಳು ಇಂದು ಉದ್ಘಾಟನೆಯಾಗಿದೆ.

Write A Comment