ದುಬೈ, ಜ.3: ಬಡ ಹಾಗೂ ನಿರ್ಗತಿಕರ ಏಳಿಗೆಗಾಗಿ ಸದಾ ಬೆನ್ನೆಲುಬಾಗಿ ನಿಂತು ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವ ದುಬೈಯ ಉಚ್ಚಿಲ ಅಲ್ ಇಸ್ಲಾಮಿಯಾ ಯೂತ್ ಫೆಡರೇಶನ್ ಆಶ್ರಯದಲ್ಲಿ ಜನವರಿ 15ರ ಶುಕ್ರವಾರದಂದು ಬೆಳಗ್ಗೆ 6.30ಕ್ಕೆ ದೇರಾದ ಜೆಸ್ಕೋ ಸೂಪರ್ ಮಾರ್ಕೆಟ್‌ನ ಮುಂಭಾಗದಲ್ಲಿರುವ ಅಲ್‌ಬರಾಹ ಮೈದಾನದಲ್ಲಿ ‘ಅಲಿಫ್ ಟ್ರೋಫಿ-2016’ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಬಡ, ಕೆಳವರ್ಗದವರಿಗೆ ಸದಾ ಸಹಾಯಹಸ್ತವನ್ನು ನೀಡುತ್ತಾ ಕಳೆದ 9 ವರ್ಷಗಳಿಂದ ಸಾಮಾಜಿಕವಾಗಿ ಕಾರ್ಯಚರಿಸುತ್ತಿರುವ ದುಬೈಯ ಉಚ್ಚಿಲ ಅಲ್ ಇಸ್ಲಾಮಿಯಾ ಯೂತ್ ಫೆಡರೇಶನ್, ಸಮುದಾಯದ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ತರವಾದ ಯೋಜನೆಗಳನ್ನು ಹಾಕಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಇದು ಮೂರನೆ ಬಾರಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿದೆ.
ಕ್ರಿಕೆಟ್ ಪಂದ್ಯದಲ್ಲಿ ವಿಜೇತ ತಂಡಕ್ಕೆ 2,222 ದಿರ್ಹಂ ನಗದು ಹಾಗೂ ‘ಅಲಿಫ್ ಟ್ರೋಫಿ-2016’ ಮತ್ತು ರನ್ನರ್ಸ್‌ನ ತಂಡಕ್ಕೆ 1,111 ದಿರ್ಹಂ ನಗದು ಹಾಗೂ ‘ಅಲಿಫ್ ಟ್ರೋಫಿ-2016’ ನೀಡಿ ಗೌರವಿಸಲಾಗುವುದು. ಪಂದ್ಯದಲ್ಲಿ ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ, ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್‌ಮೆನ್ ಪಶಸ್ತಿ ನೀಡಿ ಅಭಿನಂದಿಸಲಾಗುವುದು ಎಂದು ದುಬೈಯ ಉಚ್ಚಿಲ ಅಲ್ ಇಸ್ಲಾಮಿಯಾ ಯೂತ್ ಫೆಡರೇಶನ್‌ನ ಅಧ್ಯಕ್ಷ ಸಾದಿಕ್ ಶಾಬಾನ್ ಹಾಗೂ ಸಂಚಾಲಕ ಅಬ್ದುಲ್ ಸಮದ್ ಬಿರಾಲಿ ತಿಳಿಸಿದ್ದಾರೆ.