ಕರ್ನಾಟಕ

ಏಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಾಲಕ!

Pinterest LinkedIn Tumblr

gangrape

ಬೆಂಗಳೂರು: ಪೀಣ್ಯದಲ್ಲಿ ಪಕ್ಕದ ಮನೆಯ ಒಂಟಿಯಾಗಿ ಆಟವಾಡುತ್ತಿದ್ದ ಏಳು ವರ್ಷದ ಬಾಲಕಿಯ ಮೇಲೆ ೧೫ ವರ್ಷದ ಬಾಲಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದು ಬಾಲಕನನ್ನು ಪೀಣ್ಯ ಪೊಲೀಸರು ವಶಕ್ಕೆ ತೆಗೆದುಕೊಂಡು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

ಬಾಲಕಿಯನ್ನು ಮನೆಯಲ್ಲೇ ಬಿಟ್ಟು ಪೋಷಕರು ನಿನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದಾಗ ಪಕ್ಕದ ಮನೆಯ ೧೫ ವರ್ಷದ ಬಾಲಕ ಮನೆಗೆ ನುಗ್ಗಿ ಆಟವಾಡುತ್ತಾ ಒಂಟಿಯಾಗಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಕೆಲವೇ ಗಂಟೆಗಳಲ್ಲಿ ಪೋಷಕರು ಮನೆಗೆ ಬಂದಾಗ ಬಾಲಕಿ ಅಸ್ವಸ್ಥಳಾಗಿದ್ದು ಕೂಡಲೇ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ವಿಚಾರಿಸಿದಾಗ ಬಾಲಕನ ಹೀನ ಕೃತ್ಯವನ್ನು ತಿಳಿಸಿದ್ದಾಳೆ.

ತಕ್ಷಣವೇ ಪೋಷಕರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ವೈದ್ಯರ ಸಮ್ಮುಖದಲ್ಲಿ ವಿಚಾರಿಸಿದಾಗ ಪಕ್ಕದ ಮನೆಯ ಬಾಲಕ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ಹೇಳಿಕೊಂಡಿದ್ದಾಳೆ.

ಕೂಡಲೇ ಪೊಲೀಸರು ಬಾಲಕನ್ನು ಬಂಧಿಸಿ ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಬಾಲಕ ತಾನು ದೌರ್ಜನ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ ಬಾಲಕನನ್ನು ಬಾಲಮಂದಿರದಲ್ಲಿ ಇಡಲಾಗಿದ್ದು, ಬಾಲಕಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Write A Comment