ರಾಷ್ಟ್ರೀಯ

ದೆಹಲಿ; ಶೇ 300ರಷ್ಟು ಕುಸಿದ ವಾಯು ಮಾಲಿನ್ಯ

Pinterest LinkedIn Tumblr

Air-Pollution

ನವದೆಹಲಿ: ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ನವದೆಹಲಿಯಲ್ಲಿ ಹೊಸ ವರ್ಷದ ಮೊದಲ ದಿನದಿಂದ ಜಾರಿಗೆ ಬಂದಿರುವ ಸಮ, ಬೆಸ ಸಂಖ್ಯೆ ಯೋಜನೆ ಯಶಸ್ವಿ ಕಂಡಿದ್ದು, ಕೇವಲ ಎರಡು ದಿನದಲ್ಲಿ ಶೇ 300 ರಷ್ಟು ವಾಯು ಮಾಲಿನ್ಯ ತಗ್ಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ ಸಿಸೋಡಿಯಾ ತಿಳಿಸಿದ್ದಾರೆ.

ಸಮ, ಬೆಸ ಸಂಖ್ಯೆಯ ವಾಹನಗಳಿಗೆ ದಿನ ಬಿಟ್ಟು ದಿನ ಅವಕಾಶ ನೀಡುವ ದೆಹಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಯು ಮಾಲಿನ್ಯ ತಗ್ಗಿಸಲು ದೇಶದಲ್ಲೇ ಮೊದಲ ಬಾರಿ ಕೈಗೊಂಡಿರುವ ಈ ಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ಹಲವು ಜನರಲ್ಲಿ ಇದು ಗೊಂದಲ, ಗಲಿಬಿಲಿ ಉಂಟು ಮಾಡಿದ್ದರೆ, ರಾಜಕೀಯ ಪಕ್ಷಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ಸಾಕಷ್ಟು ಸಿದ್ಧತೆ ಇಲ್ಲದೆಯೇ ಯೋಜನೆ ಜಾರಿಗೊಳಿಸಲಾಗಿದೆ ಎಂದು ಬಿಜೆಪಿ ಆಕ್ಷೇಪಿಸಿದರೆ, ಯಶಸ್ಸನ್ನು ನಿರ್ಣಯಿಸಲು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

ಹೊಸ ವರ್ಷದಂದು ಆರಂಭವಾದ ಈ ಯೋಜನೆಯಿಂದ ನಗರದ ರಸ್ತೆಗಳಲ್ಲಿ ವಾಹನಗಳು ಕಡಿಮೆ ಇದ್ದವು. ಜನರಿಗೆ ಅನಾನುಕೂಲ ತಪ್ಪಿಸಲು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲಾಗಿತ್ತು. ಯೋಜನೆ ಜಾರಿಗೆ ಸಾವಿರಾರು ಪೆÇಲೀಸರನ್ನು ನಿಯೋಜಿಸಲಾಗಿತ್ತು . ರಜೆಯ ಮಜಾ ಕಳೆದು ಕಾರ್ಮಿಕರು, ನೌಕರರು ನಾಳೆಯಿಂದ ಕಛೇರಿಗಳತ್ತ ಮುಖ ಮಾಡಲಿದ್ದಾರೆ ಹಾಗಾಗಿ ಸೋಮವಾರ ಹೆಚ್ಚು ಸಂಚಾರ ದಟ್ಟಣೆ ಇರುವ ದಿನವಾಗಿದ್ದು, ಜನರು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದು ನೋಡಬೇಕಿದೆ ಎಂದು ಕುತುಹಲ ವ್ಯಕ್ತಪಡಿಸಿದ್ದಾರೆ.

ಬರುವ ಜ.15ರವರೆಗೂ ಸಾಮಾನ್ಯ ಜನರು ಹಾಗೂ ಜನ ಪ್ರತಿನಿಧಿಗಳು ಕೂಡ ಯೋಜನೆಯನ್ನು ಅನುಸರಿಸಬೇಕಿದೆ, ನಾನು ಕೂಡ ನನ್ನ ಕಾರನ್ನು ಬಳಸದೇ ಸೈಕಲ್ ಏರಿ ಕಛೇರಿಗೆ ಹೋಗುತ್ತೇನೆ ಎಂದು ಮನೀಶ ಸಿಸೋಡಿಯಾ ಹೇಳಿದ್ದಾರೆ. ಜನವರಿ 15ರವರೆಗೆ ಒಂದನೇ ಹಂತದಲ್ಲಿ ಪ್ರಾಯೋಗಿಕವಾಗಿ ಈ ನೀತಿ ಜಾರಿಗೊಳಿಸಲಾಗಿದೆ. ನಂತರದಲ್ಲಿ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯ 25 ವಿಧದ ವಾಹನಗಳಿಗೆ ನೂತನ ನೀತಿಯಿಂದ ವಿನಾಯಿತಿ ನೀಡಲಾಗಿದೆ. ಮಹಿಳೆಯರಿಗೆ ನೀಡಲಾಗಿರುವ ವಿನಾಯಿತಿಯನ್ನು ಎರಡನೇ ಹಂತದಲ್ಲಿ ತೆಗೆದುಹಾಕುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

Write A Comment