ರಾಷ್ಟ್ರೀಯ

ನೌಕಾ ಪಡೆಗೆ ಸಿಂಹ ಬಲ

Pinterest LinkedIn Tumblr

vichara2

ಐ.ಎನ್.ಎಸ್. ಕೊಲ್ಕತ್ತಾ ಯುದ್ಧ ನೌಕೆಯಿಂದ ಡಿ. 29, 30 ರಂದು ಬರಾಕ್ – 8 ಕ್ಷಿಪಣಿಯ ಯಶಸ್ವಿ ಉಡಾವಣೆ ಭಾರತೀಯ ನೌಕಾ ಪಡೆಗೆ ಸಿಂಹಬಲ ತಂದಿದೆ.

ನೆಲದಿಂದ ಆಕಾಶಕ್ಕೆ ಹಾರುವ ಈ ಅತ್ಯಾಧುನಿಕ ಕ್ಷಿಪಣಿ ಶತ್ನ ವಿಮಾನ, ಕ್ಷಿಪಣಿಗಳನ್ನು ಹುಡುಕಿ ಹೊಡೆದುರುಳಿಸಬಲ್ಲದು. ರಾತ್ರಿ-ಹಗಲು ಎನ್ನದೆ ಎಲ್ಲ ಋತುಮಾನಗಳಲ್ಲೂ ನಿಖರವಾಗಿ ಕಾರ್ಯನಿರ್ವಹಿಸುವ ಬರಾಕ್ – 8 ಕ್ಷಿಪಣಿಯನ್ನು ಉಂಗ್‌ರೇಂಜ್ ಸರ್ಪೆಸ್ ಟುವರ್ ಮಿಸೈಲ್ ಎಂದೂ ಕರೆಯಲಾಗುತ್ತೆ.

ದೂರದ ಗುರಿಗಳನ್ನು ಭೇದಿಸಬಲ್ಲ ವಾಯು ದಾಳಿ ನಿರೋಧ ಕ್ಷಿಪಣಿ ಇದಾಗಿದ್ದು, ಇಸ್ರೇಲ್‌ನೊಂದಿಗಿನ ಜಂಟಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಭಾರತೀಯ ನೌಕಾ ಪಡೆಯ ಪ್ರಮುಖ ಯುದ್ಧ ನೌಕೆಗಳಲ್ಲಿ ಇದನ್ನು ಅಳವಡಿಸಬಹುದಾಗಿದ್ದು, ಕಡಿಮೆ ಅಂತರದ ಮತ್ತು ದೂರದ ಗುರಿಗಳು ಎರಡನ್ನೂ ಬೇಧಿಸುವ ಸಾಮರ್ಥ್ಯ ಇದಕ್ಕಿದೆ.

ಬರಾಕ್ – 8 ಕ್ಷಿಪಣಿಯ ಯಶಸ್ವಿ ಉಡಾವಣೆಯಿಂದ ಭಾರತದ ನೌಕಾ ಪಡೆಗೆ ಸಿಂಹಬಲ ಬಂದಂತಾಗಿದೆ.
ಡಿಸೆಂಬರ್ 29 ಮತ್ತು 30 ರಂದು ಐ.ಎನ್.ಎಸ್. ಕೊಲ್ಕತಾ ಯುದ್ಧ ನೌಕೆಯಿಂದ ಎರಡು ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ.

ಭಾರತ – ಇಸ್ರೇಲ್ ಜಂಟಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಮತ್ತು ಭಾರತ ಭಾರತ್ ಡೈನಮಿಕ್ಸ್‌ನಲ್ಲಿ ನಿರ್ಮಾಣ ಮಾಡಲಾಗಿರುವ ಬರಾಕ್ ಕ್ಷಿಪಣಿ ವ್ಯವಸ್ಥೆ ದೂರಗಾಮಿ ಶತೃಗುರಿಗಳನ್ನು ನಿಖರವಾಗಿ ಭೇದಿಸಲು ಸೂಕ್ತ ಕ್ಷಿಪಣಿ ವ್ಯವಸ್ಥೆ ನೌಕಾ ಪಡೆ ಬತ್ತಳಿಕೆ ಸೇರಿದೆ.

ಭಾರತ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.) ಮತ್ತು ಇಸ್ರೇಲ್‌ನ ಏರೋಸ್ಪೇಸ್ ಇಂಡಸ್ಟ್ರೀಸ್ ಜಂಟಿಯಾಗಿ ಈ ಕ್ಷಿಪಣಿಯ ಅಭಿವೃದ್ಧಿಪಡಿಸುವ ಕುರಿತಂತೆ 2006 ರಲ್ಲಿ ಇಸ್ರೇಲ್‌ನೊಂದಿಗೆ ಒಪ್ಪಂದವಾಗಿತ್ತು.

ಕಡಿಮೆ ದೂರ ಹಾಗೂ ಹೆಚ್ಚು ದೂರದ ಶತೃ ವಿಮಾನ, ದ್ರೋಣ್, ಕ್ಷಿಪಣಿಗಳನ್ನು ಮಾರ್ಗಮಧ್ಯೆದಲ್ಲೇ ಧ್ವಂಸಗೊಳಿಸುವ ಈ ಕ್ಷಿಪಣಿಯಲ್ಲಿ ಗುರುತು ಪತ್ತೆ, ಜಾಡುಪತ್ತೆ ಮಾರ್ಗನಿರ್ದೇಶಿತ ಗುರಿಯ ವ್ಯವಸ್ಥೆ ಇದ್ದು, ಇದು ಅತ್ಯಾಧುನಿಕ ಕ್ಷಿಪಣಿ, ನಿಗ್ರಹ ಕ್ಷಿಪಣಿ ವ್ಯವಸ್ಥೆಯಾಗಿದೆ.

ಈ ಕ್ಷಿಪಣಿಯ ಕಡಿಮೆ ದೂರದ ಕ್ಷಿಪಣಿ ಮಾದರಿಗಳು ಭಾರತೀಯ ಸೇನೆಯ ಉಪಯೋಗದಲ್ಲಿದ್ದು, ಬರಾಕ್ – 8 ಶ್ರೇಣಿಯ ದೂರಗಾಮಿ ಮಾದರಿ ಕ್ಷಿಪಣಿಯನ್ನು ನೌಕಾಪಡೆ ಬಳಕೆಗಾಗಿ ಅಭಿವೃದ್ಧಿಪಡಿಸಲಾಗಿದೆ.

Write A Comment