ರಾಷ್ಟ್ರೀಯ

ದೇಶಾದ್ಯಂತ ಮದ್ಯ ನಿಷೇಧ : ಮುಸ್ಲಿಂ ಸಂಘಟನೆ ಆಗ್ರಹ

Pinterest LinkedIn Tumblr

stop-drinking

ನವದೆಹಲಿ: ಲೈಂಗಿಕ ಅಪರಾಧ ತಡೆಗೆ ದೇಶಾದ್ಯಂತ ಮದ್ಯ ಮಾರಾಟ ನಿಷೇಧಿಸುವಂತೆ ಮುಸ್ಲಿಂ ಸಂಘಟನೆ ಜಮಾತ್ ಇ ಇಸ್ಲಾಮಿ ಹಿಂದ್ ಒತ್ತಾಯಿಸಿದೆ.

ಕಳೆದ ಡಿಸೆಂಬರ್ 22 ರಂದು ರಾಜ್ಯಸಭೆ ಬಾಲಾಪರಾಧಿ ನ್ಯಾಯ ಮಸೂದೆ ಅಂಗೀಕರಿಸಿದ್ದು, ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗುವ ಬಾಲಾಪರಾಧಿಗಳಿಗೆ 7 ವರ್ಷಗಳಿಗೂ ಹೆಚ್ಚು ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ. ಈ ಮಸೂದೆಯನ್ನು ಸ್ವಾಗತಿಸಿರುವ ಜಮಾತ್, ಇದೊಂದರಿಂದಲೇ ಲೈಂಗಿಕ ಅಪರಾಧ ತಡೆ ಸಾಧ್ಯವಿಲ್ಲ ಎಂದು ತಿಳಿಸಿದೆ.

ಮದ್ಯ ಸೇವನೆಯಿಂದ ಅಪರಾಧಗಳು ಸಂಭವಿಸುತ್ತಿವೆ. ಹಾಗಾಗಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಜನರ ಮನಸ್ಸಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಬೇಕಿದೆ.

ಮದ್ಯ ಸೇವನೆಯ ನಂತರ ಲೈಂಗಿಕ ಅಪರಾಧಗಳು ಹೆಚ್ಚುತ್ತಿವೆ. ಆದುದರಿಂದ ದೇಶಾದ್ಯಂತ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಒತ್ತಾಯಿಸಿದೆ.

ಐಸಿಐಸಿಯೊಂದಿಗೆ ನಂಟಿದೆ ಎಂಬ ಆರೋಪದ ಹಿನ್ನಲೆ ದೇಶದ ವಿವಿಧೆಡೆ ಮುಸ್ಲಿಂ ಯುವಕನ್ನು ಬಂಧಿಸಿರುವುದನ್ನು ಸಂಘಟನೆ ಖಂಡಿಸಿದೆ. ಐಎಸ್‌ಗೂ, ಇಸ್ಲಾಂಗೂ ಯಾವುದೇ ಸಂಬಂಧವಿಲ್ಲ. ಮುಸ್ಲಿಮರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದ್ದು, ಮಾನವೀಯತೆ ಮೆರೆಯಬೇಕಿದೆ ಎಂದರು.

Write A Comment