ಕನ್ನಡ ವಾರ್ತೆಗಳು

ಪಡುಬಿದ್ರಿ: ಉಡುಪಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯ ಉದ್ಘಾಟಿಸಿದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್

Pinterest LinkedIn Tumblr

ಉಡುಪಿ: ಕಬಡ್ಡಿ ಒಂದು ದೇಶಿಯ ಕ್ರೀಡೆಯಾಗಿದ್ದು,ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಲಾಗುವ ಕ್ರೀಡಾ ಕೂಟದಿಂದ ಯುವಕರ ಸಂಘಟನೆಗಳಲ್ಲಿ ಐಕ್ಯತೆ ಜೊತೆಗೆ ಪರಸ್ಪರ ಸಹಬಾಳ್ವೆ ಮೂಡಿಸುವ ಕಾರ್‍ಯ ಮಾಡುತ್ತದೆ ಎಂದು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

Padubidre_Kabbadi_Game

ಅವರು ಭಾನುವಾರ ಎರ್ಮಾಳು ಬಡಾ ರಾಮಾಂಜನೇಯ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಕೂಟದ ಟ್ರೋಫಿಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ನಿವೃತ್ತ ಉಪಾನ್ಯಾಸಕ ವೈ. ರಾಮಕೃಷ್ಣ ರಾವ್ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಸಾಧನ ಕ್ರೀಡೆ. ಸೋಲು ಗೆಲುವು, ನೋವು ನಲಿವುಗಳ ನಡುವೆಯೂ ಪರಸ್ಪರ ಸಹಕಾರದಿಂದರಲ್ಲು ಕ್ರೀಡೆ ಸಹಾಯಕವಾಗಿದೆ. ಸಮಯ ಪರಿಪಾಲನೆಯ ಜೊತೆಗೆ ಸಮರ್ಪಕ ದಿಟ್ಟ ನಿರ್ಧಾರ ಕೈಗೊಳ್ಳುವ ಕಲೆ ಕ್ರೀಡೆಯಿಂದ ಕರಗತವಾಗುತ್ತದೆ ಎಂದರು.

ಉಚ್ಚಿಲ ಬಡಾಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಎ. ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯೆ ಕೇಸರಿಯುವರಾಜ್, ಗ್ರಾ.ಪಂ. ಸದಸ್ಯ ದೀಪಕ್ ಎರ್ಮಾಳು, ರಾಜ್ಯಮಟ್ಟದ ಕಬಡ್ಡಿ ಕ್ರೀಡಾಪಟುಗಳಾದ ಅಮಿತ್, ಅವಿನಾಶ್, ರಾಮಾಂಜನೇಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಆರ್. ಅಂಚನ್, ದೈಹಿಕ ಶಿಕ್ಷಣ ಶಿಕ್ಷಕರಾದ ಅಲ್ವಿನ್, ಸುಬೋಧ್‌ಚಂದ್ರ ಶೆಟ್ಟಿ, ಸುರೇಶ್ ಕುಲಾಲ್ ವೇದಿಕೆಯಲ್ಲಿದ್ದರು.

ಗ್ರಾ.ಪಂ. ಮಾಜಿ ಸದಸ್ಯ ಲಕ್ಷಣ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಸುಮಿತ್ ಮೆಂಡನ್ ವಂದಿಸಿದರು. ಆಕಾಶ್ ಕೆ. ಕುಂದರ್ ಕಾರ್ಯಕ್ರಮ ನಿರ್ವಹಿಸಿದರು

Write A Comment