ಕನ್ನಡ ವಾರ್ತೆಗಳು

ಚಿಣ್ಣರ ಬಿಂಬದ 13ನೇ ವಾರ್ಷಿಕ ಮಕ್ಕಳ ಉತ್ಸವ.

Pinterest LinkedIn Tumblr

Mumbai_cinnara_bimba_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಚಿಣ್ಣರ ಬಿಂಬದ 13ನೇ ವಾರ್ಷಿಕ ಮಕ್ಕಳ ಉತ್ಸವವು ಜ. 2ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ್ದು ಮಹಾರಾಷ್ಟ್ರ ಮಾಜಿ ಸಚಿವ ಸುರೇಶ್‌ ಶೆಟ್ಟಿ ಯವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಅ ನಂತರ ಮಾತನಾಡಿದ ಅವರು ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಮುಂಬಯಿಯಲ್ಲಿ ಪಸರಿಸುವ ಕಾರ್ಯವನ್ನು ಚಿಣ್ಣರ ಬಿಂಬದ ಮಕ್ಕಳು ಮಾಡುತ್ತಿರುವುದು ಅಭಿ ನಂದನೀಯ. ಮಕ್ಕಳು ವಿದ್ಯೆಯೊಂದಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರಗಳನ್ನು ಅರಿಯಬೇಕಾಗಿದ್ದು ಈ ಕೆಲಸವನ್ನು ಕಳೆದ 13 ವರ್ಷಗಳಿಂದ ಚಿಣ್ಣರ ಬಿಂಬ ಮಾಡುತ್ತಿರುವುದು ಅಭಿಮಾನ ಪಡುವ ಸಂಗತಿಯಾಗಿದೆ ಎಂದರು.

Mumbai_cinnara_bimba_2 Mumbai_cinnara_bimba_3 Mumbai_cinnara_bimba_4 Mumbai_cinnara_bimba_5 Mumbai_cinnara_bimba_6 Mumbai_cinnara_bimba_7 Mumbai_cinnara_bimba_8 Mumbai_cinnara_bimba_9 Mumbai_cinnara_bimba_10 Mumbai_cinnara_bimba_11 Mumbai_cinnara_bimba_12 Mumbai_cinnara_bimba_13 Mumbai_cinnara_bimba_14 Mumbai_cinnara_bimba_15 Mumbai_cinnara_bimba_16 Mumbai_cinnara_bimba_17 Mumbai_cinnara_bimba_18

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡುತ್ತಾ, ಚಿಣ್ಣರ ಬಿಂಬದ ಶಿಬಿರಕ್ಕೆ ಸೇರಿದ ಮಕ್ಕಳು ಖಂಡಿತವಾಗಿಯೂ ಸುಸಂಸ್ಕೃತರಾಗುತ್ತಾರೆ ಎನ್ನುವುದಕ್ಕೆ ಚಿಣ್ಣರ ಬಿಂಬದ ಮುಖೇನ ವಿಶೇಷ ಸಾಧನೆ ಮಾಡಿದ ಮಕ್ಕಳೇ ಸಾಕ್ಷಿ. ಒಂದು ವಿಶ್ವವಿದ್ಯಾಲಯ ಮಾಡದೇ ಇರುವ ಕಾರ್ಯವನ್ನು ದೂರದ ಮರಾಠಿ ಮಣ್ಣಿನಲ್ಲಿ ಚಿಣ್ಣರ ಬಿಂಬ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಬಂಟರ ಸಂಘ ಸಂಚಾಲಿತ ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡುತ್ತಾ, ಚಿಣ್ಣರ ಬಿಂಬದ ಮಕ್ಕಳಿಗೆ ಉತ್ತಮ ಭವಿಷ್ಯ ವಿದೆ. ಮಕ್ಕಳ ಪ್ರತಿಭಾನ್ವೇಷಣೆಗೆ ಇದು ಉತ್ತಮ ವೇದಿಕೆಯಾಗಿದೆ ಎಂದರು.

ಭಂಡಾರಿ ಮಹಾಮಂಡಲ ಮುಂಬಯಿಯ ಅಧ್ಯಕ್ಷರಾದ, ಕಡಂದಲೆ ಸುರೇಶ್‌ ಭಂಡಾರಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿಯ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಉದ್ಯಮಿ ಕೆ.ಡಿ. ಶೆಟ್ಟಿ, ಬಂಟರ ಸಂಘ ದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಉದ್ಯಮಿ ಪಾಂಡುರಂಗ ಶೆಟ್ಟಿ, ಉದ್ಯಮಿ ಸಂಜೀವ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿಉಪಸ್ಥಿತರಿದ್ದು ಶುಭ ಹಾರೈಸಿದರು. ಚಿಣ್ಣರ ಬಿಂಬದ ಟ್ರಸ್ಟಿ ಸುರೇಂದ್ರ ಕುಮಾರ್‌ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಿರಿಯರಾದ ಪವಿತ್ರಾ ದೇವಾ ಡಿಗ, ದೀಕ್ಷಿತ್‌ ಕೋಟ್ಯಾನ್‌, ಹಸ್ತಾ ಶೆಟ್ಟಿ, ವಿಕ್ಕಿ ಶೆಟ್ಟಿ, ಸುಪ್ರಿಯಾ ಉಡುಪ, ಪ್ರಜ್ವಲ್‌ ಶೆಟ್ಟಿ, ಶ್ರೀರಕ್ಷಾ ಅತಿಥಿಗಳನ್ನು ಪರಿಚಯಿಸಿ ದರು. ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ, ಕಲಾಜಗತ್ತು ವಿಜಯ ಕುಮಾರ್‌ ಶೆಟ್ಟಿ, ಸ್ಥಾಪಕಾಧ್ಯಕ್ಷೆ ಪೂಜಾ ಪಿ. ಭಂಡಾರಿ, ಕಾರ್ಯಾಧ್ಯಕ್ಷೆ ನೈನಾ ಪಿ. ಭಂಡಾರಿ, ಚಿಣ್ಣರ ಬಿಂಬದ ಪ್ರಮುಖ ರಾದ ತಾಳಿ ಪಾಡಿಗುತ್ತು ಭಾಸ್ಕರ್‌ ಶೆಟ್ಟಿ, ಜಗದೀಶ್‌ ರಾವ್‌, ರಮೇಶ್‌ ರೈ, ರೂಪಾ ಶೆಟ್ಟಿ, ನಿತ್ಯಾನಂದ ಶೆಟ್ಟಿ ಬೆಳುವಾಯಿ, ಸುಜಾತಾ ಶೆಟ್ಟಿ, ಅಂಕಿತಾ ರೈ, ಪ್ರಣಮ್‌ ಶೆಟ್ಟಿ, ಪ್ರಜ್ಞಾ ಶೆಟ್ಟಿ ಮೊದಲಾದವರು ಅತಿಥಿಗಳನ್ನು ಪರಿಚಯಿಸಿ, ಗೌರವಿಸಿ ದರು. ಡಾ| ಪೂರ್ಣಿಮಾ ಎಸ್‌. ಶೆಟ್ಟಿ, ಚಿಣ್ಣರ ಬಿಂಬದ ಕೀರ್ತಿ ಶೆಟ್ಟಿ, ದರ್ಶನ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Write A Comment