ಕನ್ನಡ ವಾರ್ತೆಗಳು

ಉಳ್ಳಾಲ: ಇಲಲ್ ಹಬೀಬ್ ಮೀಲಾದ್ ಪ್ರಯುಕ್ತ ರ್‍ಯಾಲಿ.

Pinterest LinkedIn Tumblr

ullala_milada_rellay_1

ಉಳ್ಳಾಲ. ಜ,04:  ಪ್ರವಾದಿಯವರಿಗೆ ಕೋಟಿ ಕೋಟಿ ಅನುಯಹಿಗಳಿದ್ದು ಅವರ ಜನ್ಮ ದಿನಾಚರಣೆಯ ರಾಲ್ಯಿಯಾಗಲಿ ಪ್ರವಾದಿರವರ ಸಂಬಧಿಸಿದ ಕಾರ್ಯಕ್ರಮವನ್ನು ತಡೆಯಲು ಈ ಜಗತ್ತಿನ ಯಾರಿಂದಲು ಸಾಧ್ಯವಿಲ್ಲ ಎಂದು ಎಸ್ಸೆಸ್ಸೆಫ್ ದ.ಕ ಜಿಲ್ಲಾ‌ಉಪಾಧ್ಯಕ್ಷ ಸಿರಾಜ್ ಸಖಾಫಿ ಕನ್ಯಾನ ಅಭಿಪ್ರಾಯಪಟ್ಟರು.

ಅವರು ಭಾನುವಾರ ಸ್ನೇಹ ಸಮಾಜದ ಸೃಷ್ಟಿಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್‌ವೈ‌ಎಸ್ ಉಳ್ಳಾಲ ಸೆಂಟರ್ ಎಸ್ಸೆಸ್ಸೆಫ್ ತೋಕೊಟ್ಟು ಮತ್ತು ಉಳ್ಳಾಲ ಸೆಕ್ಟರ್ ಅಶ್ರಯದಲ್ಲಿ ಇಲಲ್ ಹಬೀಬ್ ಮೀಲಾದ್ ಪ್ರಯುಕ್ತ ತೊಕೊಟ್ಟು ಬಸ್ ನಿಲ್ದಾನದಿಂದ ಉಳ್ಳಾಲ ದರ್ಗಾ ವರೆಗೆ ಮೀಲಾದ್ ರ್‍ಯಾಲಿಯ ಸಂದೇಶ ಭಾಷಣದಲ್ಲಿ ಹೇಳಿದರು.

ullala_milada_rellay_2 ullala_milada_rellay_3 ullala_milada_rellay_4 ullala_milada_rellay_5 ullala_milada_rellay_6 ullala_milada_rellay_7

ಪ್ರವಾದಿಯವರು 1400 ವರ್ಷಗಳ ಹಿಂದೆ ಜನಿಸಿ ಯಾರಿಗೂ ಮಾಡಲು ಸಾಧ್ಯವಿಲ್ಲದಂತಹ ಸಾಧನೆಗಳನ್ನು‌ಅವರು ಆಕಾಲದಲ್ಲಿ ಮಾಡಿದ್ದಾರೆ. ಪ್ರಸಕ್ತ ದೇಶದಲ್ಲಿ ವಿವಿಧ ಸಂಶೋಧನೆಗಳ ಮೂಲಕ ವಿವಿಧ ಕೋಡುಗೆಗಳು ಸಿಗುತ್ತವೆ. ದೇಶದಕ್ಕಾಗಿ ಸೇವೆ ಮಾಡಿದ ಹಲವು ನಾಯಕರ ಹೆಸರಿನಲ್ಲಿ ಕಟ್ಟಡಗಳು, ಪ್ರತಿಮೆಗಳು ನಮಗೆ ಕಾಣ ಸಿಗುತ್ತದೆ. ಆದರೆ ಪುರಾತನ ಕಾಲದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಲೋಕಕ್ಕೆ ಸಂದೇಶ ಸಾರಿದ ಪ್ರವಾದಿಯವರ ಹೆಸರಿನಲ್ಲಿ ಯಾವುದೇ ಕಟ್ಟಡಗಳು ದೇಶದಲ್ಲಿ ಕಾಣಸಿಗದು. ಆದರೆ ಜಗತ್ತಿನಲ್ಲಿ ವಿವಿಧ ಬೆಳವಣಿಗೆಗಳು ಕಂಡರೂ ಜಗತ್ತು ಪ್ರವಾದಿಯವರನ್ನು ಸ್ಮರಿಸುವಷ್ಟು ಬೇರೆ ಯಾರನ್ನು ಸ್ಮರಿಸುವುದಿಲ್ಲ. ಅವರು ಆ ಕಾಲದಲ್ಲಿ ಸಾಗಿದ ದಾರಿಯಲ್ಲಿ ನಾವು ಸಾಗಬೇಕು ಎಂದರು.

ಪ್ರಸಕ್ತ ಕಂಪ್ಯೂಟರ್ ಯುಗದಲ್ಲಿ ಎಲ್ಲ ಕೆಲಸಗಳು ಕುಳಿತಲ್ಲೇ ಮಾಡಲಾಗುತ್ತದೆ. ಆದರೆ ಪ್ರವಾದಿಯವರ ಜೀವನ ಕಾಲದಲ್ಲಿ ಅಜ್ಞಾನ ತಾಂಡವಾಡುತ್ತಿದ್ದ ಕಾಲ. ಅಜ್ಞಾನಿಗಳನ್ನು ಕೇವಲ ಸಂದೇಶ ಸಾರುವ ಮೂಲಕ ಜ್ಞಾನಿಗಳಾಗಿ ಮಾಡಿದ ಕೀರ್ತಿ ಪ್ರವಾದಿಯವರಿಗೆ ಇದೆ. ಉತ್ತಮ ಸಾಧನೆ ಮಾಡಿದ ಅವರನ್ನು ಸ್ಮರಿಸುವ ಕೆಲಸ ನಾವು ಮಾಡಲೇಬೇಕು. ಇದೇ ಕಾರಣದಿಂದ ಮುಸ್ಲಿಮರು ಪ್ರವಾದಿ ಜನ್ಮದಿನಾಚರಣೆ ಮತ್ತು ರ್‍ಯಾಲಿಯನ್ನು ನಡೆಯುತ್ತಿದೆ. ಇದಕ್ಕೆ ವಿರೋದ ವ್ಯಕ್ತಪಡಿಸುವವರು ಇಸ್ಲಾಂನ ಬಗ್ಗೆ ಅರಿತುಕೊಳ್ಳದವರು. ಕುರಾನ್ ಸಾರಿದ್ದು ಶಾಂತಿಯನ್ನು. ಪ್ರವಾದಿಯವರು ಕೂಡಾ ಶಾಂತಿಯ ಸಂದೇಶವನ್ನೇ ನೀಡಿದವರು.

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನಿರ್ದೇಶಕ ಎಂ.ಸಿ ಮೊಹಮ್ಮದ್ ಫೈಝಿ ಪಟಾಂಬಿ ದು‌ಅ ನೆರವೇರಿಸಿ ರ್‍ಯಾಲಿಗೆ ಚಾಲನೆ ನೀಡಿದರು. ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್ ಹಂಝ ಉದ್ಘಾಟಿಸಿ ಶುಭಹಾರೈಸಿದರು. ಎಸ್‌ವೈ‌ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಅಬ್ದುಸಮದ್ ಅಹ್ಸನಿ, ತೊಕೋಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಂಬ್ಲಮೊಗರು, ಉಳ್ಳಾಲ ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಹನೀಫ್ ಬಿ.ಜಿ, ಮಂಜನಾಡಿ ಅಲ್-ಮದೀನಾ ಮುದರ್ರಿಸ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಅಶ್ರಫ್ ಬಳ್ಳಾರಿ, ನಾಝೀಂ ಮುಕ್ಕಚೇರಿ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಅಲ್-ಅಮೀನ್ ರಿಲೀಫ್ ಫೌಂಡೇಶನ್‌ನ ಮನ್ಸೂರ್ ಹಳೆಕೋಟೆ, ಖುಬೈಬುಲ್ಲಾ ತಂಙಳ್, ತ್ವಾಹಿರ್ ಹಾಜಿ, ಇಸ್ಹಾಕ್ ಬಸ್ತಿಪಡ್ಪು ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Write A Comment