ಮನೋರಂಜನೆ

ಐಪಿಎಲ್ ತಂಡಗಳ ಗಾತ್ರ ಇಳಿಕೆ?

Pinterest LinkedIn Tumblr

ipl

ನವದೆಹಲಿ: ಇದೇ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗಾಗಿ ಮುಂದಿನ ತಿಂಗಳು ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಬಹುತೇಕ ಆಟಗಾರರು ಹರಾಜಾಗದೇ ಉಳಿಯುವ ಸಂಭವವಿದೆಯೇ? ಇಂಥದ್ದೊಂದು ಪ್ರಶ್ನೆ ಈಗ ಫ್ರಾಂಚೈಸಿಗಳ ವಲಯದಲ್ಲಿ ಹರಿದಾಡುತ್ತಿದೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹೊರತುಪಡಿಸಿದಂತೆ, ಇನ್ನುಳಿದ ಫ್ರಾಂಚೈಸಿಗಳು ತಮ್ಮಲ್ಲಿನ ಒಟ್ಟು ಆಟಗಾರರ ಸಂಖ್ಯೆಯನ್ನು 18ರಿಂದ 21ಕ್ಕೆ ಸೀಮಿತಗೊಳಿಸಲು ನಿರ್ಧರಿಸಿವೆ ಎನ್ನಲಾಗಿದ್ದು, ಇದರಿಂದ ಹರಾಜು ವೇಳೆ ಭಾರೀ ಸಂಖ್ಯೆ ಆಟಗಾರರು ಮಾರಾಟವಾಗದೇ ಉಳಿಯುವ ಸಂಭವವಿದೆ ಎನ್ನಲಾಗುತ್ತಿದೆ.

ವಾಸ್ತವದಲ್ಲಿ, ಪ್ರತಿಯೊಂದು ಫ್ರಾಂಚೈಸಿಗೂ ತನ್ನಲ್ಲಿ 25 ಆಟಗಾರರನ್ನು ಹೊಂದಲು ಬಿಸಿಸಿಐ ಅನುವು ಮಾಡಿಕೊಟ್ಟಿದೆ. ಆದರೆ, ಇದರಿಂದ ಟೂರ್ನಿಯ ವೇಳೆ ತಂಡಗಳಿಗೆ ಭಾರಿ ಪ್ರಮಾಣದಲ್ಲಿ ಹಣ ವೆಚ್ಚವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕಡಿಮೆ ಆಟಗಾರರುಳ್ಳ ತಂಡಗಳನ್ನು ಹೊಂದಲು ಫ್ರಾಂಚೈಸಿಗಳು ನಿರ್ಧರಿಸಿವೆ ಎನ್ನಲಾಗಿದೆ.

Write A Comment