ಅಂತರಾಷ್ಟ್ರೀಯ

ಕಿರಿಯ ವಯಸ್ಸಿನಲ್ಲೇ ಲೈಂಗಿಕ ಕ್ರಿಯೆ ನಡೆಸಿದರೆ ಸೋಂಕಿನ ಅಪಾಯ ಹೆಚ್ಚು!

Pinterest LinkedIn Tumblr

se

ಸಿಯೋಲ್: ಕಿರಿಯ ವಯಸ್ಸಿನಲ್ಲೇ ಪ್ರಥಮ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿದವರಿಗೆ ವೇಗವಾಗಿ ಲೈಂಗಿಕ ಸೋಂಕಿನ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಯೊಂದು ಎಚ್ಚರಿಸಿದೆ.

ಗೊನೊರಿಯಾ, ಸಿಫಿಲಿಸ್, ಕ್ಲಮೈಡಿಯ, ಎಚ್ಐವಿ ಯಂತಹ ಸಮಸ್ಯೆಗಳು ಕಿರಿಯ ವಯಸ್ಸಿನಲ್ಲೇ ಲೈಂಗಿಕ ಕ್ರಿಯೆ ನಡೆಸುವವರಿಗೆ ಬಹುಬೇಗ ಕಾಡುವ ಸಾಧ್ಯತೆ ದಟ್ಟವಾಗಿದ್ದು, ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ವೈದ್ಯಕೀಯ ಮತ್ತು ಮಾನಸಿಕ ಸಮಸ್ಯೆಗಳಿಗೆ ಲೈಂಗಿಕವಾಗಿ ಹರಡುವ ಸೋಂಕುಗಳು ಪ್ರಮುಖ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಕಿರಿಯ ವಯಸ್ಸಿನಲ್ಲೇ ಲೈಂಗಿಕ ಕ್ರಿಯೆ ನಡೆಸುವವರಿಗೆ ವಯಸ್ಸಾದಂತೆ ಲೈಂಗಿಕವಾಗಿ ಹರಡುವ ಸಮಸ್ಯೆಗಳೂ ಹೆಚ್ಚಾಗುತ್ತವೆ. ಆದ್ದರಿಂದ ಪ್ರಥಮ ಬಾರಿ ಲೈಂಗಿಕ ಕ್ರಿಯೆ ನಡೆಸಬೇಕಾದರೆ ವಯಸ್ಸನ್ನು ಪರಿಗಣಿಸುವುದು ಮುಖ್ಯವಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕೊರಿಯಾದ ರಾಷ್ಟ್ರೀಯ ಸಮೀಕ್ಷೆಯ ಮೂಲಕ ಈ ವರದಿಯನ್ನು ಪ್ರಕಟಿಸಲಾಗಿದ್ದು, ಕಿರಿಯ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದ 22,381 ಮಂದಿಯನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಈ ಕುರಿತ ವರದಿ ಲೈಂಗಿಕ ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟವಾಗಿದೆ.

Write A Comment