ಕರ್ನಾಟಕ

ರಾಗಿ ಮುದ್ದೆ ರುಚಿ ನೋಡಿದ ಮೋದಿ !

Pinterest LinkedIn Tumblr

Ragi-muddhe-4-1ಮೈಸೂರು: ಈ ಭಾಗದ ಜನಪ್ರಿಯ ಆಹಾರ ರಾಗಿ ಮುದ್ದೆ ಹೇಗಿರುತ್ತೆ? ಅದರ ರುಚಿ ನೋಡಬೇಕೆನಿಸಿದೆ ತನ್ನಿ. ಎರಡು ದಿನಗಳ ರಾಜ್ಯ ಭೇಟಿಗಾಗಿ ಮೈಸೂರಿಗೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಶನಿವಾರ ರಾತ್ರಿ ಮೈಸೂರಿನ ಲಲಿತ್‌ ಮಹಲ್‌ ಹೊಟೇಲ್‌ನಲ್ಲಿ ತಂಗಿದ್ದರು.

ರಾತ್ರಿ ಊಟದ ವೇಳೆ ಅವರಿಗೆ ರಾಗಿ ಮುದ್ದೆ ತಿನ್ನುವ ಮನಸ್ಸಾಯಿತು. ಹೊಟೇಲ್‌ನ ಸಿಬಂದಿಗೆ ರಾಗಿ ಮುದ್ದೆ ನೀಡುವಂತೆ ಕೇಳಿದಾಗ ಬಾಣಸಿಗರು ಅಚ್ಚರಿಗೊಂಡರು. ಅನಂತರ, ಹತ್ತು ನಿಮಿಷದೊಳಗೆ ರಾಗಿ ಮುದ್ದೆ, ಸೊಪ್ಪಿನ ಸಾರು ತಯಾರಿಸಿ ತಂದು ಎದುರಿಗಿಟ್ಟರು.

ಕುತೂಹಲದಿಂದ ಮೋದಿ ರಾಗಿ ಮುದ್ದೆ ತಿಂದು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಲಲಿತ್‌ಮಹಲ್‌ ಹೊಟೇಲ್‌ನ ಮೂಲಗಳು ತಿಳಿಸಿವೆ.
-ಉದಯವಾಣಿ

Write A Comment