ರಾಷ್ಟ್ರೀಯ

ತಮಿಳ್ನಾಡು ಸರ್ಕಾರದಿಂದ 14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ

Pinterest LinkedIn Tumblr

jayalalithaa_Jಚೆನ್ನೈ: ತಮಿಳ್ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸೋಮವಾರ 14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ ಬಿಡುಗಡೆ ಮಾಡಿದ್ದಾರೆ. ಈ ಪರಿಹಾರಧನ ಮಂಗಳವಾರ ಆಯಾ ಕುಟುಂಬಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಸೋಮವಾರ ರು. 700 ಕೋಟಿ ಪರಿಹಾರ ಧನ ಬಿಡುಗಡೆಯಾಗಿದ್ದು, ಇನ್ನುಳಿದ ಹಣ ಜನವರಿ 11ಕ್ಕೆ ಬಿಡುಗಡೆಯಾಗಲಿದೆ ಎಂದು ಜಯಲಲತಾ ಹೇಳಿಕೆ ನೀಡಿದ್ದಾರೆ.

ಸರ್ಕಾರದ ಯೋಜನೆ ಪ್ರಕಾರ ಕುಟುಂಬಗಳು ಸದಸ್ಯರನ್ನು ಕಳೆದುಕೊಂಡಿದ್ದರೆ ಅವರಿಗೆ ರು. 10,000 ಮತ್ತು ವಿಶೇಷ ಪರಿಹಾರ ಧನ ರು. 5000 ನೀಡಲಾಗುವುದು. ಇದರೊಂದಿಗೆ 10 ಕೆಜಿ ಅಕ್ಕಿ, ಧೋತಿ ಮತ್ತು ಸೀರೆಯನ್ನು ನೀಡಲಾಗುವುದು. ಅದೇ ವೇಳೆ ಇನ್ನಿತರ ನಾಶ ನಷ್ಟ ಅನುಭವಿಸಿದ ಕುಟುಂಬಗಳಿಗೆ ರು. 5000 ಮತ್ತು 10 ಕೆಜೆ ಅಕ್ಕಿ, ಧೋತಿ ಮತ್ತು ಸೀರೆ ನೀಡಲಾಗುವುದು.

ಚೆನ್ನೈ ಜಲಪ್ರಳಯದಲ್ಲಿ 4.93 ಲಕ್ಷ ಜನರಿಗೆ ಹಾನಿಯಾಗಿದ್ದು, 25.48 ಲಕ್ಷ ಮನೆಗಳು ನಾಶವಾಗಿವೆ. ಇಲ್ಲಿನ ಅಂಕಿ ಅಂಶ ಪ್ರಕಾರ 14 ಲಕ್ಷ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ.

Write A Comment