ಅಂತರಾಷ್ಟ್ರೀಯ

ರಾಯಭಾರಿ ಕಚೇರಿ ಮೇಲೆ ದಾಳಿ; ಇರಾನ್ ಜೊತೆ ಸಂಬಂಧ ಕಡಿದುಕೊಂಡ ಸೌದಿ ಅರೇಬಿಯಾ

Pinterest LinkedIn Tumblr

Iran-Saudiರಿಯಾದ್: ಇರಾನ್ ಜೊತೆಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿರುವ ಸೌದಿ ಅರೇಬಿಯಾ ೪೮ ಘಂಟೆಗಳಲ್ಲಿ ಎಲ್ಲ ಇರಾನ್ ರಾಯಭಾರಿಗಳನ್ನು ದೇಶ ಬಿಡುವಂತೆ ತಿಳಿಸಿದೆ.

ಇರಾನ್ ನಲ್ಲಿ ಶನಿವಾರ ಸಂಜೆ ಸೌದಿ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ತಿಳಿಯಿತು ಎಂದಿರುವ ಸೌದಿ ವಿದೇಶಾಂಗ ಸಚಿವ ಅದೇಲ್ ಆಲ್-ಜುಬೇರ್, ಎಲ್ಲ ಸೌದಿ ರಾಯಭಾರಿಗಳು ಸುರಕ್ಷಿತವಾಗಿ ದುಬೈ ತಲುಪಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಶಿಯಾ ಮುಸ್ಲಿಂ ಗುರು ನಿಮ್ರ್ ಅಲ್-ನಿಮ್ರ್ ಒಳಗೊಂಡಂತೆ ಭಯೋತ್ಪಾದನೆಯ ಆರೋಪದಲ್ಲಿ ೪೭ ಜನಕ್ಕೆ ಮರಣದಂಡನೆಗೆ ಗುರಿ ಮಾಡಿದ ಸೌದಿ ನಡೆಯನ್ನು ವಿರೋಧಿಸಿ ಕುಪಿತಗೊಂಡಿದ್ದ ಇರಾನ್ ಪ್ರತಿಭಟನಕಾರರು ಶನಿವಾರ ಸಂಜೆ ಸೌದಿ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ಹಿಂದೆ ಇರಾನ್ ಪ್ರತಿಭಟನಕಾರರು ಅಮೇರಿಕಾ ಮತ್ತು ಬ್ರಿಟನ್ ರಾಯಭಾರ ಕಚೇರಿಗಳ ಮೇಲೆಯೂ ದಾಳಿ ನಡೆಸಿರುವುದನ್ನು ಉದಾಹರಿಸಿದ ಅಲ್-ಜುಬೇರ್ ಈ ದಾಳಿ ಅಂತರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ದೂರಿದ್ದರೆ.

ಆಲ್ ಕ್ವೈದಾ ಸಂಘಟನೆಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಮೂಲಕ ಭಯೋತ್ಪಾದನಾ ಸಂಸ್ಥೆಗೆ ಇರಾನ್ ರಕ್ಷಣೆ ಒದಗಿಸುತ್ತಿದೆ ಎಂದು ಕೂಡ ಅವರು ದೂರಿದ್ದಾರೆ.

ಈಮಧ್ಯೆ ಸೌದಿ ೪೭ ಜನಕ್ಕೆ ಮರಣದಂಡನೆಗೆ ಗುರಿ ಮಾಡಿದ ನಡೆಯನ್ನು ಅಮಾನವೀಯ ಎಂದು ಇರಾನ್ ಅಧ್ಯಕ್ಷ ಹಸ್ಸನ್ ರುಹಾನಿ ಜರಿದಿದ್ದಾರೆ. ಅಲ್ಲದೆ ಸೌದಿ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಿದ ತೀವ್ರವಾದಿಗಳನ್ನು ಶಿಕ್ಷೆಗೆ ಗುರಿಪಡಿಸುವಂತೆ ಕೂಡ ಸಂಬಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Write A Comment