ರಾಷ್ಟ್ರೀಯ

ಸಂಪ್ರದಾಯ ಬದಿಗಿಟ್ಟು ಅಪ್ಪನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಮಗಳು !

Pinterest LinkedIn Tumblr

32

ನವದೆಹಲಿ: “ಮನೆಯೊಳಗಿದ್ದ ಅಪ್ಪ ಆತುರಾತುರವಾಗಿ ಸಮವಸ್ತ್ರ ಧರಿಸಿಕೊಂಡು, ಕರ್ತವ್ಯದ ಕರೆಗೆ ಓಗೊಟ್ಟು ಹೊರಗೆ ಓಡಿ ಹೋದರು. ಗುಂಡಿನ ಮೊರೆತ ನಮಗೆ ಸರಿಯಾಗಿ ಕೇಳಿಸುತ್ತಿತ್ತು.

ಕಿಟಕಿಗಳಿಗೆ ಗುಂಡುಗಳು ಬಂದು ಬಡಿಯುತ್ತಿದ್ದವು. ನಾವು 2 ಗಂಟೆ ಕಾಲ ಮಂಚದಡಿ ಬಚ್ಚಿಟ್ಟುಕೊಂಡೆವು. ರಾತ್ರಿಯಾದೊಡನೆ, ಲೈಟ್‍ಗಳನ್ನೂ ಸ್ವಿಚ್ ಆಫ್ ಮಾಡಿದೆವು. ನನ್ನ ಅಪ್ಪನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ”. ಹೀಗೆಂದು ಹೇಳಿದ್ದು ಪಠಾಣ್‍ಕೋಟ್ ಕಾರ್ಯಾಚರಣೆಯಲ್ಲಿ ಮಡಿದ ಹುತಾತ್ಮ ಸುಬೇದಾರ್ ಮೇಜರ್ ಫತೇಹ್‍ಸಿಂಗ್ ಅವರ ಪುತ್ರಿ ಮಧು.

1995ರ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನ, ಬೆಳ್ಳಿ ಪದಕ ಗಳಿಸಿದ್ದ ಫತೇಹ್ ಸಿಂಗ್ ಶನಿವಾರದ ಕಾರ್ಯಾಚರಣೆಯಲ್ಲಿ ಅಸುನೀಗಿದರು. ಕಣ್ಣೀರಿಡುತ್ತಲೇ ತಂದೆ ಬಗ್ಗೆ ಹೆಮ್ಮೆಯಿದೆ ಎಂದ ಮಧು ಸಂಪ್ರದಾಯವನ್ನು ಬಿದಿಗಿಟ್ಟು ಅಪ್ಪನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟಳು.

Write A Comment