ರಾಷ್ಟ್ರೀಯ

ಪಠಾನ್ ಕೋಟ್ ಹುತಾತ್ಮ ನಿರಂಜನ್ ಬಗ್ಗೆ ಫೇಸ್ಬುಕ್ ನಲ್ಲಿ ಅವಮಾನಕಾರಿಯಾಗಿ ಪ್ರತಿಕ್ರಿಯಿಸಿದ್ದ ಯುವಕನ ಬಂಧನ

Pinterest LinkedIn Tumblr

Niranjan

ಪಠಾನ್ ಕೋಟ್ ಭಯೋತ್ಪಾದನಾ ದಾಳಿಯಲ್ಲಿ ಹೋರಾಡಿ ಮಡಿದ ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ಇ ಕೆ ನಿರಂಜನ್ ಅವರ ಬಗ್ಗೆ ಫೇಸ್ಬುಕ್ ನಲ್ಲಿ ಅವಮಾನಕಾರಿಯಾಗಿ ಪ್ರತಿಕ್ರಿಯಿಸಿದ್ದ ಕೇರಳದ ಮಲಪ್ಪುರಂನ ವ್ಯಕ್ತಿಯೊಬ್ಬನನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆ.

ಮಾಧ್ಯಮಂ ಪತ್ರಿಕೆಯ ಪತ್ರಿಕೋದ್ಯಮಿ ಎಂದು ಹೇಳಿಕೊಂಡಿದ್ದ ಅನ್ವರ್ “ಈಗ ಒಂದು ತೊಂದರೆ ಕಳೆಯಿತು. ಈಗ ಅವನ ಹೆಂಡತಿಗೆ ಹಣ ಮತ್ತು ಕೆಲಸ ದೊರೆಯಲಿದೆ. ನಮ್ಮಂತಹ ಸಾಮಾನ್ಯರಿಗೆ ಏನೂ ಸಿಗುವುದಿಲ್ಲ. ಕೊಳೆತು ನಾರುವ ಪ್ರಜಾಪ್ರಭುತ್ವಕ್ಕೆ ಧಿಕ್ಕಾರ” ಎಂದು ಅರ್ಥ ಬರುವಂತೆ ಮಲಯಾಳಂನಲ್ಲಿ ಬರೆದಿದ್ದ ಎಂದು ದೂರಲಾಗಿತ್ತು. ನಂತರ ಈ ಪ್ರತಿಕ್ರಿಯೆಯನ್ನು ತೆಗೆದಿದ್ದರು ಅದರ ಇಮೇಜ್ ರೂಪ ಫೇಸ್ಬುಕ್ ನಲ್ಲಿ ಓಡಾಡುತ್ತಿತ್ತು.

ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿದ ಮಾಧ್ಯಮಂ ಪತ್ರಿಕೆ, ಅಂತಹ ಯಾವ ವ್ಯಕ್ತಿಯೂ ನಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿಲ್ಲ, ಇದು ನಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಪೊಲೀಸ್ ದೂರು ನೀಡಿದ್ದರು.

ಈ ದೂರಿನ ಹಿನ್ನಲೆಯಲ್ಲಿ ಮಲಪ್ಪುರಂನ ರೇಶನ್ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುವ ೨೪ ವರ್ಷದ ಅನ್ವರ್ ನನ್ನು ಪೊಲೀಸರು ದೇಶದ್ರೋಹ ಆರೋಪದ ಮೇಲೆ ಬಂಧಿಸಿದ್ದಾರೆ. ಈ ಆರೋಪ ಸಾಬೀತಾದರೆ ಬಂಧಿತ ವ್ಯಕ್ತಿ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.

Write A Comment