ಮನೋರಂಜನೆ

44 ಭಾಷೆಗಳಿಗೆ ಕ್ವಾಂಟಿಕೊ ಡಬ್ಬಿಂಗ್‌, 100 ದೇಶಗಳಲ್ಲಿ ಹಸಿಬಿಸಿ ಪ್ರಸಾರ

Pinterest LinkedIn Tumblr

preyankaಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನಟಿಸಿದ ಅಮೆರಿಕನ್ ಟಿವಿ ಧಾರಾವಾಹಿ ‘ ಕ್ವಾಂಟಿಕೊ’ 44 ಭಾಷೆಗಳಲ್ಲಿ ಅನುವಾದ ಆಗ್ತಿದೆ. ವಿಶ್ವದ 100 ದೇಶಗಳಲ್ಲಿ ಈ ಸೀರಿಯಲ್ ಪ್ರಸಾರವಾಗ್ತಿದೆ.

ಪ್ರಿಯಾಂಕ ಚೋಪ್ರಾರೇ ಈ ವಿಷಯ ತಿಳಿಸಿದ್ದಾರೆ. ಮಾರ್ಚ್‌1 ರಿಂದ ಸೀಜನ್ ಆರಂಭಗೊಳ್ಳಲಿದೆ. ಸ್ಪಾನಿಷ್, ಇಟಾಲಿಯನ್, ಜರ್ಮನ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ರೂಪುಗೊಳ್ಳುತ್ತಿರುವ ಕ್ವಾಂಟಿಕೊ ಸಿರಿಯಲ್‌ನ್ನು ಮೊದಲಿಗೆ 13 ಎಪಿಸೋಡ್ ಮಾಡಲು ನಿರ್ಧರಿಸಲಾಗಿತ್ತು. ಈಗ ಮತ್ತೆ 22 ಎಪಿಸೋಡ್ ಹೆಚ್ಚಿಸಲು ಎಬಿಸಿ ನಿರ್ಧರಿಸಿದೆಯಂತೆ.

ಈವರೆಗೆ ನಟಿಸಿದ ಪಾತ್ರಗಳಿಗೆ ಹೋಲಿಸಿದರೆ ಕ್ವಾಂಟಿಕೊದಲ್ಲಿನ ಪಾತ್ರ ಬಹಳ ಚಾಲೆಂಜಿಂಗ್ ಆಗಿತ್ತು ಎಂದು ಪಿಗ್ಗಿ ಹೇಳಿಕೊಂಡಿದ್ದಾರೆ. ನಾನು ಇಂಡೋ ಅಮೆರಿಕನ್‌ ಪ್ರಜೆಯಲ್ಲ. ಭಾರತೀಯ ಪ್ರಜೆ. ಮತ್ತೊಂದು ದೇಶಕ್ಕೆ ಹೋಗಿ ಒಂದು ಸೀರಿಯಲ್‌ನ್ನು ಭುಜದ ಮೇಲೆ ಹೊತ್ತು ಯಶಸ್ವಿಯಾಗುವುದು ಕಷ್ಟ ಸಾಧ್ಯ. ಅಮೆರಿಕನ್ ಶೈಲಿಯಲ್ಲಿ ಮಾತನಾಡುವ ಭಾರತೀಯ ಮಹಿಳೆಯಾಗಿ ನಟಿಸಲು ಮೊದಲಿಗೆ ಬಹಳ ಕಷ್ಟವಾಯ್ತು. ಯಾಕಾದ್ರೂ ಒಪ್ಪಿಕೊಂಡೆ ಅಂತಾ ಎನಿಸಿದ್ದು ಉಂಟು. ಆದ್ರೆ ಎಲ್ಲವನ್ನೂ ನಿಭಾಯಿಸಿದೆ . ಸಕ್ಸಸ್ ಆದ ಮೇಲೆ ಪಟ್ಟ ಶ್ರಮ ಸಾರ್ಥಕ ಎನಿಸಿದೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾಳೆ.

ಬಾಜಿರಾವ್ ಮಸ್ತಾನಿ ಕೂಡ ಹಿಟ್ ಆಗಿರೋದರಿಂದ ಪ್ರಿಯಾಂಕ ಎಂಜಾಯ್ ಮೂಡ್‌ನಲ್ಲಿದ್ದಾರೆ.

Write A Comment