ಮನೋರಂಜನೆ

ಬಿಗ್‌ಬಾಸ್‌ನಲ್ಲೂ ಹಾವು-ಮುಂಗುಸಿ ವಾರ್‌‌.. ಗೌತಮಿ-ಸುಷ್ಮಾ ಆದ್ರು ವಾರಿಯರ್ರ್ಸ್!

Pinterest LinkedIn Tumblr

biggಬಿಗ್‌ಬಾಸ್‌ನಲ್ಲಿ ಕ್ಲೀನಿಂಗ್‌ ವಿಚಾರವಾಗಿ ಮನೆಯ ಕ್ಯಾಪ್ಟನ್‌ ಗೌತಮಿ ಹಾಗೂ ಸುನಾಮಿ ಕಿಟ್ಟಿ ಮಧ್ಯೆ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಅಲ್ಲೇ ಇದ್ದ ಸುಷ್ಮಾ ಗೌತಮಿ ಮಾತಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ರು. ಆಗ ನೋಡಿ ಶುರುವಾಯಿತು ಹಾವು-ಮುಂಗುಸಿ ಯುದ್ಧ..!

ಹೀಗೆ ಆಕ್ಷೇಪಣೆಯಿಂದ ಪ್ರಾರಂಭವಾದ ಮಾತು ಕೊನೆಗೆ ಜಗಳದವರೆಗೂ ತಲುಪಿದ್ರೂ ಮುಕ್ತಾಯವಂತೂ ಆಗಿಲ್ಲ. ಗೌತಮಿಗೆ ಮಾತಾಡೋ ಅಧಿಕಾರವಿಲ್ಲ ಎಂದ ಸುಷ್ಮಾ, ನನ್ನ ಜೊತೆ ಮಾತಾಡಬೇಡ ಎಂದು ತಾಕೀತು ಮಾಡಿದ್ರು. ಇದೇ ವೇಳೆ ಗೌತಮಿ ನಿಮ್ಮ ಜೊತೆ ಯಾರು ಮಾತಾಡಿದ್ರು… ನೀವೇ ನನ್ನ ಜೊತೆ ಮಾತಾಡ್ತಾ ಇರೋದು. ನಾನು ಕಿಟ್ಟಿ ಜೊತೆ ಮಾತಾಡ್ತಿದ್ರೆ ಮಧ್ಯೆಕ್ಕೆ ನೀವ್ಯಾಕೆ ಬಂದ್ರಿ ಎಂದು ಜೋರು ದನಿಯಲ್ಲೇ ಹೇಳಿದ್ರು.

ನನ್ನನ್ನು ಪ್ರಶ್ನಿಸೋ ಹಕ್ಕು ನಿಂಗಿಲ್ಲ ಎಂದು ಸುಷ್ಮಾ ಹೇಳಿದ್ರೆ, ನಿಮ್ಮನ್ನು ಯಾರು ಪ್ರಶ್ನಿಸಿದ್ರು ಅಂದ್ರು ಗೌತಮಿ. ಚಿಕ್ಕೋರು ಚಿಕ್ಕೋರಾಗೆ ಇರಿ ಎಂದು ಹೇಳಿದ ಸುಷ್ಮಾಗೆ ದೊಡ್ಡೋರು ದೊಡ್ಡೋರಾಗೇ ಇರಿ ಎಂದು ಗೌತಮಿ ಉಲ್ಟಾ ಹೊಡದ್ರು.

ನಿನ್ನ ಜೊತೆ ಮಾತಾಡೋದೇ ವೇಸ್ಟ್‌ ಅಂತಾ ಸುಷ್ಮಾ ಹೇಳಿದ್ರೆ ಅಯ್ಯೋ ನನ್ನ ಜೊತೆ ಮಾತಾಡಿ ಅಂತ ನಿಮಗೆ ಯಾರಂದ್ರು ಎಂದು ಖಡಕ್‌‌ ಆಗಿ ಉತ್ತರ ಕೊಟ್ರು ಗೌತಮಿ.

ಹೀಗೆ ಮಾತಿಗೆ ಮಾತು ಬೆಳೆಯುತ್ತಲೇ ಹೋಯಿತು ವಿನಃ ಜಗಳಕ್ಕೆ ಮುಕ್ತಿ ಮಾತ್ರ ಸಿಕ್ಕಿಲ್ಲ. ಇದು ಎಲ್ಲಿಗೆ ಹೋಗುತ್ತೋ ಇವರ ಜಗಳ ಕಾದು ನೋಡಬೇಕಷ್ಟೆ.

Write A Comment